Monday, 19th November 2018  

Vijayavani

ರಾಜಧಾನಿಯಲ್ಲಿ ಹಸಿರು ಕ್ರಾಂತಿ-ಸಿಎಂ ಎಚ್​ಡಿಕೆ, ಡಿಸಿಎಂ ಪರಮೇಶ್ವರ್​ಗೆ ಡೆಡ್​​ಲೈನ್-ಕೂಡಲೇ ಸ್ಥಳಕ್ಕೆ ಬರುವಂತೆ ರೈತರ ಪಟ್ಟು        ಸೈಟ್ ಕೇಳ್ತಿಲ್ಲ, BMW ಕಾರೂ ಕೇಳ್ತಿಲ್ಲ-ನಾವು ಕೇಳ್ತಿರೋದು ಬೆಳೆದ ಬೆಲೆಗೆ ಬೆಲೆಯಷ್ಟೇ-ಸಚಿವ ಕಾಶಂಪೂರ್​​ಗೆ ಮನವಿ ಸಲ್ಲಿಕೆ        ರೈತರು, ಹೆಣ್ಮಕ್ಕಳ ವಿಚಾರದಲ್ಲಿ ಗೌರವ ಇದೆ-ನನ್ನ ಹೇಳಿಕೆಯಲ್ಲಿ ಯಾವುದೇ ದುರುದ್ದೇಶ ಇಲ್ಲ-ಸಿಎಂ ಹೇಳಿಕೆ ಬಿಡುಗಡೆ        ಸಿಎಂ ಕೂಡಲೇ ಕ್ಷಮೆ ಕೇಳಬೇಕು-ನಾಳಿನ ಕೋರ್​​​ ಕಮಿಟಿ ಸಭೆಯಲ್ಲಿ ಹೋರಾಟದ ನಿರ್ಧಾರ-ಸರ್ಕಾರದ ವಿರುದ್ಧ ಗುಡುಗಿದ ಬಿಜೆಪಿ        ₹3,300 ಕೋಟಿ, 132 ಕಿ.ಮೀ. ದೂರ-ಗುರಗಾಂವ್​​ನಲ್ಲಿ ಎಕ್ಸ್​​ಪ್ರೆಸ್​​ ಹೈವೇ ಲೋಕಾರ್ಪಣೆಗೊಳಿಸಿದ ಪ್ರಧಾನಿ        ರೈಲು ಬರುವ ವೇಳೆ ಹಳಿ ಮಧ್ಯೆ ಮಲಗಿದ ಭೂಪ-ಪ್ರಾಣದ ಹಂಗು ತೊರೆದು ಹುಚ್ಚು ಸಾಹಸ-ಹೈದ್ರಾಬಾದ್​ನಲ್ಲೊಂದು ಮಿರ‍್ಯಾಕಲ್       
Breaking News

ಬದಲಾಗಿದೆ ಪ್ರಜಾಪ್ರಭುತ್ವ ವ್ಯಾಖ್ಯೆ

Thursday, 12.07.2018, 3:00 AM       No Comments

ತುಮಕೂರು :ಜನರಿಂದ ಜನರಿಗಾಗಿ ಜನರಿಗೋಸ್ಕರ ಎಂಬ ಪ್ರಜಾಪ್ರಭುತ್ವ ವ್ಯಾಖ್ಯೆ ಪ್ರಸ್ತುತ ದಿನದಲ್ಲಿ ಬದಲಾಗಿದ್ದು, ರಾಜಕಾರಣಿಗಳಿಂದ ರಾಜಕಾರಣಿಗಳಿಗಾಗಿ ರಾಜಕಾರಣಿಗಳಿಗೋಸ್ಕರ ಎಂಬಂತಾಗಿದೆ ಎಂದು ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅಭಿಪ್ರಾಯಪಟ್ಟರು.

ನಗರದ ಆರ್ಯಭಾರತಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಬುಧವಾರ ಪ್ರಾರಂಭೋತ್ಸವ ಮತ್ತು ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಹಿಂದೆ ಹಗರಣ ಲಕ್ಷ ರೂ.ನಲ್ಲಿದ್ದವು. ಇಂದು ಅದರ ಸ್ವರೂಪ ಬದಲಾಗಿದ್ದು, ಸಾವಿರಾರು ಕೋಟಿಗೆ ತಲುಪಿದೆ. ಅನೇಕ ಹಗರಣಗಳು ಬೆಳಕಿಗೆ ಬರದೆ ಮುಚ್ಚಿಹೋಗಿವೆ. ಜೈಲಿಗೆ ಹೋಗಿ ಬಂದವರನ್ನು ಸನ್ಮಾನಿಸುವ, ಮೆರವಣಿಗೆ ಮಾಡುವ ಕೆಟ್ಟ ಅಭ್ಯಾಸ ನಮ್ಮದಾಗಿದೆ. ಇದಕ್ಕೆಲ್ಲ ಸಮಾಜವೇ ಕಾರಣ ಎಂದು ವಿಷಾದಿಸಿದರು.

ಯುವಕರು ಜೀವನದಲ್ಲಿ ಉನ್ನತ ಮೌಲ್ಯ ಅಳವಡಿಸಿಕೊಂಡು ಭ್ರಷ್ಟರನ್ನು ಬಹಿಷ್ಕರಿಸುವ, ಶಾಂತಿ, ಸೌಹಾರ್ದತೆಯ ಸಮಾಜ ನಿರ್ವಿುಸಬೇಕು. ಎಲ್ಲರ ಜೀವನದಲ್ಲಿಯೂ ತೃಪ್ತಿ ಮತ್ತು ಮಾನವೀಯತೆ ಅಗತ್ಯ. ಎಷ್ಟು ಬೇಕಾದರೂ ಹಣ ಗಳಿಸಬಹುದು. ಆದರೆ ದುಡಿಮೆಯ ದಾರಿ ಪ್ರಾಮಾಣಿಕವಾಗಿದ್ದರೆ ಜೀವನದಲ್ಲಿ ತೃಪ್ತಿ ಸಾಧ್ಯ. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದಲ್ಲಿ ಮೌಲ್ಯ ಕುಸಿತವಾಗಿದೆ. ಈ ಬಗ್ಗೆ ಯುವಕರು ಜಾಗೃತರಾಗಬೇಕು. ಉತ್ತಮ ಸಮಾಜ ನಿರ್ವಣದ ಕಂಕಣ ತೊಡಬೇಕು ಎಂದು ಕರೆ ನೀಡಿದರು.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರ (ಇಸ್ರೋ) ಹಿರಿಯ ವಿಜ್ಞಾನಿ ಬಿ.ಕೆ.ವೆಂಕಟರಾಮು ಮಾತನಾಡಿ, ಕೇವಲ ಹಣ ಸಂಪಾದನೆಯೇ ಜೀವನದ ಗುರಿಯಾಗಬಾರದು. ಕಲಿತ ವಿದ್ಯೆ ಮತ್ತೊಬ್ಬರಿಗೂ ಅನುಕೂಲವಾಗಬೇಕು ಎಂದರು.

ಆರಂಭದಲ್ಲಿ ಬೇರೆ ದೇಶದ ಮೇಲೆ ಅವಲಂಬಿತವಾಗಿದ್ದ ಇಸ್ರೋ ಇಂದು ಸ್ವಂತ ಬಲದಿಂದ ಉಪಗ್ರಹ ತಯಾರಿಸುವ ಮತ್ತು ಉಡಾಯಿಸುವ ಕ್ಷಮತೆ ಹೊಂದಿದೆ. ಇಲ್ಲಿಯವರೆಗೆ ಸುಮಾರು 85ರಿಂದ 90 ಉಪಗ್ರಹ ಮತ್ತು 65 ರಾಕೆಟ್ ಉಡಾವಣೆ ಮಾಡಿದೆ. ಜನತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಮ್ಯುನಿಕೇಷನ್ ಉಪಗ್ರಹ, ನಾವಿಗೇಷನ್ ಉಪಗ್ರಹ, ಟೆಲಿಮೆಡಿಸನ್, ಟೆಲಿ ಎಜುಕೇಷನ್, ಹವಾಮಾನದ ಮುನ್ಸೂಚನೆ ನೀಡುವುದು ಸೇರಿ ಅನೇಕ ಜನೋಪಯೋಗಿ ಉಪಗ್ರಹ ಉಡಾಯಿಸಿದೆ. ಚಂದ್ರಗ್ರಹ ಮತ್ತು ಮಂಗಳಗ್ರಹಕ್ಕೆ ಉಪಗ್ರಹ ಕಳುಹಿಸಲಾಗಿದೆ ಎಂದು ಹೇಳಿದರು.

ಸಂಸ್ಥೆ ಉಪಾಧ್ಯಕ್ಷ ಎಚ್.ಎನ್.ಚಂದ್ರಶೇಖರ್, ಕಾರ್ಯದರ್ಶಿ ಆರ್.ಎನ್.ಸತ್ಯನಾರಾಯಣ, ಅಧ್ಯಕ್ಷ ಕೆ. ನರಸಿಂಹಮೂರ್ತಿ ಮಾತನಾಡಿದರು. ಸಂಸ್ಥೆಯ ನಿರ್ದೇಶಕರಾದ ಕೆ.ವಿ.ಕುಮಾರ್, ಟಿ.ಎಸ್.ರಾಮಶೇಷ, ಎಂ.ಎಚ್.ಮಂಜುನಾಥ್, ಪ್ರಾಚಾರ್ಯ ಕೆ.ಆರ್.ಅಶೋಕ್, ಉಪಪ್ರಾಚಾರ್ಯ ಬಿ.ವಿ.ರಾಜೇಂದ್ರ ಕುಮಾರ್ ಇದ್ದರು.

Leave a Reply

Your email address will not be published. Required fields are marked *

Back To Top