ತೆಲಸಂಗ: ರಾಜ್ಯದ ಆರ್ಥಿಕ ಬಲವರ್ಧನೆಗೆ ಬಣಜಿಗ ಸಮುದಾಯದ ಕೊಡುಗೆ ಅಪಾರ. ಎಲ್ಲ ಕ್ಷೇತ್ರದಲ್ಲಿಯೂ ಮೇಲುಗೈ ಸಾಽಸಲು ಬಣಜಿಗರು ಸಂಘಟಕರಾಗಬೇಕು ಎಂದು ರಾಜ್ಯ ಬಣಜಿಗ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ರೋಡಗಿ ಕರೆ ನೀಡಿದರು.
ಗ್ರಾಮದಲ್ಲಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘ ಬೆಂಗಳೂರು ಗ್ರಾಮ ಘಟಕದ ವತಿಯಿಂದ ಈಚೆಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಮಾತನಾಡಿ, ವ್ಯಾಪಾರ-ವಾಣಿಜ್ಯದಲ್ಲಿ ಪರಿಣತಿ ಹೊಂದಿದ ಬಣಜಿಗ ಸಮುದಾಯ ಶತಮಾನಗಳಿಂದಲೂ ರಾಜ್ಯದ ಆರ್ಥಿಕತೆಗೆ ಬೆನ್ನೆಲುಬಾಗಿ ನಿಂತಿದೆ. ಉದ್ಯಮ, ಕೃಷಿ ಮತ್ತು ವಿವಿಧ ಸೇವಾ ಕ್ಷೇತ್ರಗಳಲ್ಲಿ ಛಾಪು ಮೂಡಿಸಿದೆ ಎಂದರು.
ಅಥಣಿ ಶೆಟ್ಟರ ಮಠದ ಮರುಳಸಿದ್ಧ ಸ್ವಾಮೀಜಿ ಮಾತನಾಡಿ, ಕಾಯಕ ನಿಷ್ಠೆಗೆ ಹೆಸರಾಗಿರುವ ಬಣಜಿಗ ಸಮುದಾಯದ ಪ್ರಗತಿಗೆ ಸಂಘಟನೆ ಅತಿ ಮುಖ್ಯ. ಸಮಾಜದ ಎಲ್ಲ ರಂಗದಲ್ಲಿಯೂ ಪ್ರಗತಿ ಸಾಧಿಸುವುದು ಅವಶ್ಯ ಎಂದರು.
ವಿರಕ್ತ ಮಠದ ಬಸವಲಿಂಗ ಸ್ವಾಮೀಜಿ ಹಾಗೂ ಹಿರೇಮಠದ ವೀರೇಶ್ವರ ದೇವರು ಮಾತನಾಡಿದರು.
ರಾಜು ಕೊಳಲಗಿ, ರಮೇಶ ಕಾಗವಾಡ, ಮಲ್ಲಿಕಾರ್ಜುನ ಕನಶೆಟ್ಟಿ, ಸಂಗಪ್ಪ ಉಣ್ಣೆ, ಅಶೋಕ ಹಂಚಲಿ ಇತರರಿದ್ದರು.