ಬಡವಲಿಂಗ ಪಟ್ಟದ್ದೇವರ ಕನ್ನಡ ಸೇವೆ ಅಪಾರ

ಬೀದರ್: ನೊಂದು ಬೆಂದವರ ಪಾಲಿನ ತಾಯಿಯಾಗಿ, ಬಡವರ ಬಾಳಿನ ಬೆಳಕಾಗಿರುವ ಭಾಲ್ಕಿ ಹಿರೇಮಠ ಸಂಸ್ಥಾನದ ಹಿರಿಯ ಪೂಜ್ಯರಾದ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಕನ್ನಡ ಸೇವೆ ಅಪಾರ ಎಂದು ಭಾಲ್ಕಿ ಶಿವಾಜಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಚಂದ್ರಕಾಂತ ಬಿರಾದಾರ ಹೇಳಿದರು.
ನಗರದಲ್ಲಿ ಭಾನುವಾರ ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದಿಂದ ನಡೆದ 105ನೇ ಸಾಹಿತ್ಯ ಸಂಸ್ಕೃತಿ ಚಿಂತನೆಯ ಮಾಸಿಕ ಕಾರ್ಯಕ್ರಮದಲ್ಲಿ ಶ್ರೀ ಡಾ. ಬಸವಲಿಂಗ ಪಟ್ಟದ್ದೇವರ ಬದುಕು ಬರಹ ಕುರಿತು ಉಪನ್ಯಾಸ ನೀಡಿ, ಎಲ್ಲ ಸಮುದಾಯದವರನ್ನು ಸಮಾನತೆಯಿಂದ ಕಾಣುವ ಪೂಜ್ಯರ ಗುಣ ಮತ್ತೊಬ್ಬರಲ್ಲಿ ಕಾಣಲು ಸಾಧ್ಯವಿಲ್ಲ ಎಂದರು.
ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಶ್ರೀ ಗುರುಬಸವ ಪಟ್ಟದ್ದೇವರು ಮಾತನಾಡಿ, ಪ್ರಭುರಾವ ಕಂಬಳಿವಾಲೆ ಕನ್ನಡ ನಾಡು- ನುಡಿಗೆ ಹಗಲಿರುಳು ಶ್ರಮಿಸಿದ್ದಾರೆ. ಅವರ ಹೆಸರಿನಲ್ಲಿ ಪ್ರತಿಷ್ಠಾನ ಸ್ಥಾಪಿಸಿ, ಜಿಲ್ಲೆಯ ಸಾಹಿತಿ, ಕಲಾವಿದರ ಪಾಲಿನ ತಾಯಿಯಂತೆ ನಿರಂತರ ಸೇವೆ ಸಲ್ಲಿಸುತ್ತಿರುವುದು ಹೆಮ್ಮೆಯ ಸಂಗತಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪ್ರತಿಷ್ಠಾನದ ಅಧ್ಯಕ್ಷ ನಾಗಶೆಟ್ಟಿ ಧರಂಪುರ ಮಾತನಾಡಿದರು. ಎಂ.ಜಿ. ದೇಶಪಾಂಡೆ, ಹಂಶಕವಿ, ಬಾ.ನಾ. ಸೋಲಾಪುರೆ, ಎಂ.ಎಸ್. ಮನೋಹರ, ಓಂಪ್ರಕಾಶ ದಡ್ಡೆ, ಹಾವಗಿರಾವ ಕಳಸೆ, ಗಂಧರ್ವಸೇನಾ, ಗುರುಸಿದ್ದಪ್ಪ ಬಿರಾದಾರ, ವಿಜಯಕುಮಾರ ಸೋನಾರೆ, ಪಾರ್ವತಿ ಸೋನಾರೆ, ಸೂರ್ಯಕಲಾ ಹೊಡಮನಿ, ಎಂ.ಪಿ. ಮುದಾಳೆ, ಉಮಾಕಾಂತ ಮೀಸೆ, ಮಾಗರ್ೇಶ ಕೇಸ್ಕರ್, ನಾಗಶೆಟ್ಟಿ ಪಾಟೀಲ್ ಗಾದಗಿ, ಓಂಕಾರ ಪಾಟೀಲ್, ಶ್ರೀಕಾಂತ ಸ್ವಾಮಿ, ಶಿವಕುಮಾರ ಪಾಟೀಲ್ ತೇಗಂಪುರ, ವಿಷ್ಣುಕಾಂತ ಬಲ್ಲೂರ್ ಇತರರಿದ್ದರು. ಎಸ್.ಎಸ್. ಹೊಡಮನಿ ಸ್ವಾಗತಿಸಿದರು. ಡಾ. ರಘುಶಂಖ ಭಾತಂಬ್ರಾ ನಿರೂಪಣೆ ಮಾಡಿದರು. ಶಂಭುಲಿಂಗ ವಾಲ್ದೊಡ್ಡಿ ವಂದಿಸಿದರು.

Leave a Reply

Your email address will not be published. Required fields are marked *