More

  ಬಡವರ ಬದುಕು ಕಿತ್ತುಕೊಂಡ ಡಬಲ್​ ಇಂಜಿನ್​ ಸರ್ಕಾರ

  ವಿಜಯವಾಣಿ ಸುದ್ದಿಜಾಲ ಕೋಲಾರ
  ನನಗೆ ಜಾತಿ, ಮತವಿಲ್ಲ. ಮುಳಬಾಗಿಲು ಜನತೆ ನನ್ನನ್ನು ಜಾತಿ ನೋಡಿ ಗೆಲ್ಲಿಸಲಿಲ್ಲ. ಸಣ್ಣ ಸಮುದಾಯಕ್ಕೆ ಸೇರಿದವನಾಗಿದ್ದು ಎಲ್ಲ ಸಮುದಾಯದವರ ಬಗ್ಗೆ ನನಗೆ ಅಪಾರ ಗೌರವವಿದೆ. ಕೋಲಾರ ಜನತೆ ಅದೇ ರೀತಿ ಕಾಣುತ್ತಿದ್ದಾರೆ. ಯಾವುದೇ ಪಕ್ಷದ
  ಅಭ್ಯರ್ಥಿಗಳ ಮತ್ತು ಮುಖಂಡರ ವಿರುದ್ಧ ಮಾತನಾಡುವುದಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸುತ್ತೇನೆ ಎಂದು ಕಾಂಗ್ರೆಸ್​ ಅಭ್ಯರ್ಥಿ ಕೊತ್ತೂರು ಮಂಜುನಾಥ್​ ಹೇಳಿದರು.


  ಕೋಲಾರ ತಾಲೂಕಿನ ಸೂಲೂರು ಮತ್ತು ಬೆಳಮಾರನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶನಿವಾರ ಭೇಟಿ ನೀಡಿ ಮತಯಾಚಿಸಿ ಮಾತನಾಡಿದರು. ರಾಜ್ಯ, ಕೇಂದ್ರ ಸರ್ಕಾರವು ಬಡವರ ಬದುಕು ಕಿತ್ತುಕೊಂಡಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಜಾರಿಗೆ ಬಂದ ಯೋಜನೆಗಳನ್ನು ನಿಲ್ಲಿಸಲಾಗಿದೆ. ಅನ್ನ, ರ ಭಾಗ್ಯವನ್ನು ಕಿತ್ತುಕೊಂಡಿದೆ. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್​ ಸರ್ಕಾರ
  ಅಧಿಕಾರಕ್ಕೆ ಬರುತ್ತದೆ. ಆಗ ಬಡವರಿಗಾಗಿ ಜಾರಿಗೆ ತಂದಿರುವ ಯೋಜನೆಗಳನ್ನು ಮತ್ತೆ ಜಾರಿಗೆ ತರಲಾಗುವುದು ಎಂದರು.
  ಜಿಲ್ಲೆಯಲ್ಲಿ ಬಿಜೆಪಿ ಒಂದು ಸ್ಥಾನವನ್ನೂ ಪಡೆಯುವುದಿಲ್ಲ. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಕಿತ್ತೊಗೆಯಲು ಜನತೆ ಈಗಾಗಲೇ ತೀರ್ಮಾನಿಸಿದ್ದಾರೆ. ಬಿಜೆಪಿ ಸೋಲುವ ಭೀತಿಯಿಂದ ಪ್ರಧಾನಿ ಮೋದಿ, ಅಮಿತ್​ ಷಾ ಪದೇಪದೆ ರಾಜ್ಯಕ್ಕೆ ಭೇಟಿ ನೀಡುತ್ತಿದ್ದಾರೆ. ಅವರು ಎಷ್ಟೇ ಸಲ ಭೇಟಿ ನೀಡಿದರೂ, ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ತರಲು ಸಾಧ್ಯವಿಲ್ಲ. ಈಗಾಗಲೆ ಜನ ತೀರ್ಮಾನಿಸಿದ್ದು, ರಾಜ್ಯದಲ್ಲಿ ಕಾಂಗ್ರೆಸ್​ 150 ಸ್ಥಾನಗಳನ್ನು ಪಡೆದು, ಸ್ವಂತ ಶಕ್ತಿಯ ಮೇಲೆ ಸರ್ಕಾರ ರಚಿಸಲಿದೆ ಎಂದರು.
  ಕೋಲಾರ ಬೆಂಗಳೂರಿಗೆ ಹತ್ತಿರವಿದ್ದರೂ ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಆದ ಕಾರಣ ೇತ್ರದಿಂದ ಸಿದ್ದರಾಮಯ್ಯ ಅವರನ್ನು ಸ್ಪರ್ಧಿಸುವಂತೆ ಒತ್ತಾಯಿಸಲಾಗಿತ್ತು.

  ಹೈಕಮಾಂಡ್​ ಒಪ್ಪದ ಕಾರಣ ಅವರು ಕೋಲಾರ ಬಿಟ್ಟು ವರುಣಾದಿಂದ ಸ್ಪರ್ಧಿಸುವಂತಾಗಿದೆ. ಕಳೆದ 2013ರಲ್ಲಿ ವರುಣಾದಿಂದ ಸ್ಪರ್ಧಿಸಿ ಮುಖ್ಯಮಂತ್ರಿಯಾದರು. ಆದ ಕಾರಣ ಈ ಬಾರಿಯೂ ಅವರು ಅಲ್ಲಿಂದ ಸ್ಪರ್ಧೆ ಮಾಡಿದರೆ ಕೋಲಾರದಲ್ಲಿ ನಾನು ಗೆಲುವು ಸಾಧಿಸಿದರೂ ಸಿದ್ದರಾಮಯ್ಯ ಅವರೇ ಗೆದ್ದಂತೆ. ಕೋಲಾರಕ್ಕೆ ಕೊಟ್ಟ ಭರವಸೆಗಳನ್ನು ನಾನು ಮತ್ತು ಸಿದ್ದರಾಮಯ್ಯ ಅವರು ಜಿಲ್ಲೆಯ ಎಲ್ಲ ಶಾಸಕರು ಸೇರಿ ನಗರವನ್ನು ಹೈಟೆಕ್​ ಸಿಟಿಯನ್ನಾಗಿ ಮಾಡುತ್ತೇವೆ ಎಂದರು.
  ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಕೆ.ಸಿ.ವ್ಯಾಲಿಯನ್ನು 3ನೇ ಹಂತದ ಶುದ್ದೀಕರಣ ಮಾಡಲಾಗುವುದು. ಎತ್ತಿನಹೊಳೆ ಯೋಜನೆಯನ್ನು ವರ್ಷದೊಳಗೆ ಪೂರ್ಣಗೊಳಿಸಿ ಜಿಲ್ಲೆಗೆ ಶುದ್ಧ ಕುಡಿಯುವ ನೀರು ತರಲಾಗುವುದು. ಹಾಗೆಯೇ ಜಿಲ್ಲೆಯ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
  ಡಿಸಿಸಿ ಬ್ಯಾಂಕ್​ ನಿರ್ದೇಶಕ ನಾಗನಾಳ ಸೋಮಣ್ಣ, ನಗರಸಭಾ ಸದಸ್ಯ ಅಂಬರೀಶ್​, ವಕ್ಕಲೇರಿ ರಾಜಪ್ಪ, ಪೆಂಪಶೆಟ್ಟನಹಳ್ಳಿ ಸುರೇಶ್​ ಮುಂತಾದವರಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts