Thursday, 15th November 2018  

Vijayavani

ಆ್ಯಂಬಿಡೆಂಟ್ ಕೋಟಿ ಕೋಟಿ ಡೀಲ್ ಪ್ರಕರಣ - ಕೆಲವೇ ಕ್ಷಣಗಳಲ್ಲಿ ಜಾಮೀನು ಅರ್ಜಿ ತೀರ್ಪು- ಬಿಡುಗಡೆಯಾಗ್ತಾರಾ ಗಣಿಧಣಿ..?        ನಾನು ಸಕ್ಕರೆ, ಮಾಧ್ಯಮಗಳು ಇರುವೆ - ನಾನು ಹೋದ್ಕಡೆ ನನ್ನನ್ನೇ ಹಿಂಬಾಲಿಸುತ್ತಾರೆ -  ಜಂಭ ಕೊಚ್ಚಿಕೊಂಡ ನಟಿ ಶ್ರುತಿ        ನಮ್ಮ ತಂದೆನೂ ಬ್ರಾಹ್ಮಣರನ್ನ ಸೋಲಿಸಿದ್ರು - ನಾನೂ ಈಗ ಬ್ರಾಹ್ಮಣರ ವ್ಯಕ್ತಿಯನ್ನು ಸೋಲಿಸಿದ್ದೇನೆ - ಸಿದ್ದು ನ್ಯಾಮಗೌಡ ಹೇಳಿಕೆ        ಮಹದಾಯಿ ನದಿ ನೀರು ಹಂಚಿಕೆ ವಿಚಾರ - ಇದೇ 17ರಂದು ಸರ್ವೆ ಪಕ್ಷ ಸಭೆ ಕರೆ ಸಿಎಂ- ಬಿಎಸ್​ವೈ, ದಿನೇಶ್​ ಗುಂಡೂರಾವ್​ಗೆ ಪತ್ರ        ರಫೇಲ್ ಖರೀದಿ ಅವ್ಯವಹಾರ ಆರೋಪ - ಸುದೀರ್ಘ 5 ಗಂಟೆಗಳ ಕಾಲ ನಡೆದ ವಿಚಾರಣೆ ಮುಕ್ತಾಯ - ತೀರ್ಪು ಕಾಯ್ದಿರಿಸಿದ ಸುಪ್ರೀಂ        ವೈಟ್​​ಹೌಸ್​​ನಲ್ಲಿ ದೀಪಾವಳಿ ಸಂಭ್ರಮ - ದೀಪ ಬೆಳಗಿ ಹಿಂದುಗಳಿಗೆ ಶುಭಕೋರಿದ ಟ್ರಂಪ್ - ಮೋದಿ ನನ್ನ ಸ್ನೇಹಿತ ಎಂದ ಟ್ರಂಪ್​       
Breaking News

ಬಟ್ಟೆಗೂ ಬಂದಿದೆ ಸ್ಪಾ

Sunday, 08.07.2018, 3:02 AM       No Comments

ಮ್ಮ ಬದುಕಿನ ಭಾಗವಾಗಿರುವ ಎಲ್ಲದಕ್ಕೂ ವ್ಯಾಲ್ಯೂ ಎಡಿಷನ್ ಮಾಡುವ ಕಾಲ ಇದು. ಅಂದಮೇಲೆ, ನಮ್ಮ ಬಾಹ್ಯ ಸೌಂದರ್ಯ ಹೆಚ್ಚಿಸುವ, ಹೊಸತೇ ಆದೊಂದು ಪ್ರಭಾವ ನಿರ್ವಿುಸಬಲ್ಲ ಬಟ್ಟೆಗಳನ್ನು ಹಾಗೆಯೇ ಬಿಡಲು ಸಾಧ್ಯವೇ? ನಗರಗಳಲ್ಲಿ ಇಂದು ಬಹಳಷ್ಟು ಜನ ಮನೆಯಲ್ಲಿ ಬಟ್ಟೆ ಒಗೆದು, ಹೊರಗೆ ಐರನ್ ಮಾಡಿಸಿಕೊಂಡು ಬರುತ್ತಾರೆ. ಆದರೆ, ಸಾಕಷ್ಟು ಜನರಿಗೆ ಇಂದು ಮನೆಯಲ್ಲಿ ಬಟ್ಟೆ ಒಗೆದು, ಅಚ್ಚುಕಟ್ಟಾಗಿ ಇಸ್ತ್ರಿ ಮಾಡುವಷ್ಟು ವ್ಯವಧಾನ ಇರುವುದಿಲ್ಲ. ಅಂಥವರಿಗೆಂದೇ, ಬಟ್ಟೆಗಳನ್ನು ಒಗೆದು, ಇಸ್ತ್ರಿ ಮಾಡಿಕೊಡುವ ಕಿರು ಉದ್ಯಮದ ಮಾದರಿಯ ಲಾಂಡ್ರಿಗಳು ಎಂದಿನಿಂದಲೂ ಇವೆ. ಆದರೆ, ಈಗ ಈ ಉದ್ಯಮಕ್ಕೆ ಕಾಪೋರೇಟ್ ಸ್ಪರ್ಶ ದೊರೆತಿದೆ. ಕಂಪನಿ ಮಾದರಿಯಲ್ಲಿ ಕಾರ್ಯನಿರ್ವಹಿಸುವ ಫ್ಯಾಬ್ರಿಕ್ ಸ್ಪಾ ಬಂದಿದೆ.

ಏನಿದು ಫ್ಯಾಬ್ರಿಕ್ ಸ್ಪಾ?

ಬಟ್ಟೆಗಳನ್ನು ಶುಭ್ರವಾಗಿ ಒಗೆದು, ಅಚ್ಚುಕಟ್ಟಾಗಿ ಇಸ್ತ್ರಿ ಮಾಡಿಕೊಡುವ ಕಂಪನಿ ಫ್ಯಾಬ್ರಿಕ್ ಸ್ಪಾ. ಬಟ್ಟೆಗಳನ್ನು ಹೊಸದರಂತೆ ಮಾಡಿಕೊಡುವ ಮೂಲಕ ಗ್ರಾಹಕರನ್ನು ಖುಷಿಪಡಿಸುವುದು ಫ್ಯಾಬ್ರಿಕ್ ಸ್ಪಾ ಉದ್ದೇಶ. 2009ರಲ್ಲಿ ಬೆಂಗಳೂರಿನಲ್ಲಿ ಆರಂಭವಾದ ಈ ಉದ್ಯಮ ಇದೀಗ ರಾಜ್ಯದಲ್ಲಷ್ಟೇ ಅಲ್ಲ, ದೆಹಲಿ, ಮುಂಬೈ, ಚೆನ್ನೈ, ಅಹಮದಾಬಾದ್, ಪುಣೆಗಳಿಗೂ ವಿಸ್ತರಿಸಿದೆ. ಹುಬ್ಬಳ್ಳಿ, ಶಿವಮೊಗ್ಗ, ಮೈಸೂರು, ಮಂಗಳೂರು, ಹೊಸೂರುಗಳಲ್ಲಿಯೂ ಫ್ಯಾಬ್ರಿಕ್ ಸ್ಪಾ ಮಳಿಗೆಗಳು ಗ್ರಾಹಕರಿಗೆ ಗುಣಮಟ್ಟದ ಸೇವೆ ನೀಡುತ್ತಿವೆ. ಬೆಂಗಳೂರಿನಲ್ಲೊಂದೇ 50 ಮಳಿಗೆಗಳಿವೆ. ದೊಡ್ಡಬಳ್ಳಾಪುರದಲ್ಲಿ ಇದರ ಯೂನಿಟ್ ಇದ್ದು, ಇಲ್ಲಿ ತಿಂಗಳಿಗೆ ಒಂದು ಲಕ್ಷಕ್ಕೂ ಅಧಿಕ ಬಟ್ಟೆಗಳನ್ನು ಸ್ವಚ್ಛಗೊಳಿಸಿ, ಇಸ್ತ್ರಿ ಮಾಡಲಾಗುತ್ತದೆ.

ದೇಶಾದ್ಯಂತ 10 ಪ್ರಮುಖ ನಗರಗಳಲ್ಲಿ 150 ರೀಟೇಲ್ ಮಳಿಗೆಗಳನ್ನು ಹೊಂದಿರುವ ಕಂಪನಿ ಈಗ ದೇಶದ ಅತಿ ದೊಡ್ಡ ಲಾಂಡ್ರಿ ಸಮೂಹ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ.

ಗ್ರಾಹಕರ ಮನೆ ಬಾಗಿಲಿಗೇ ಫ್ಯಾಬ್ರಿಕ್ ಸ್ಪಾ ಸೇವೆ ನೀಡುತ್ತದೆ. ಬಟ್ಟೆಗಳನ್ನು ಸಂಗ್ರಹಿಸಿ, ವಾಪಸ್ ಕಳುಹಿಸುವವರೆಗೆ ಕಾಳಜಿ ವಹಿಸುತ್ತದೆ. ಡ್ರೖೆ ಕ್ಲೀನಿಂಗ್, ಸ್ಟೀಮ್ ಪ್ರೊಸೆಸ್, ಬ್ಲಿಚಿಂಗ್, ವೈಟನಿಂಗ್, ಫ್ರಾಗ್ರನ್ಸ್, ಕೊಳೆ ತೆಗೆಯುವುದು, ಸೋಫಾ ಮತ್ತು ಕಾರ್ಪೆಟ್​ಗಳಿಗೆ ಶಾಂಪೂ ಬಳಸುವುದು ಸೇರಿದಂತೆ ಅತ್ಯುತ್ತಮ ಗುಣಮಟ್ಟದ ಪ್ಯಾಕೇಜಿಂಗ್​ವರೆಗೆ ಇಲ್ಲಿ ಸೇವೆಗಳು ಲಭ್ಯ. ಫ್ಯಾಬ್ರಿಕ್ ಸ್ಪಾ ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವುದನ್ನು ಈ ಲಿಂಕ್ ಮುಖಾಂತರ ನೋಡಬಹುದು.

ಇದೀಗ, ಫ್ಯಾಬ್ರಿಕ್ ಸ್ಪಾ ತನ್ನ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ವಿಶೇಷ ಆಫರ್​ಗಳನ್ನು ನೀಡಿದೆ. ಒಂದು ಕಾಟನ್ ಸೀರೆಗೆ ಕೇವಲ ನೂರು ಹಾಗೂ ರೇಷ್ಮೆ ಸೀರೆಗೆ 150 ರೂ. ದರದಲ್ಲಿ ಲಾಂಡ್ರಿ ಮಾಡಿಕೊಡಲಿದೆ. ಸಾಮಾನ್ಯ ದಿನಗಳಲ್ಲಿ ಈ ದರ 149 ರೂ. ಹಾಗೂ 275 ರೂ. ಇದೆ. ಈ ಆಫರ್ ಜುಲೈ 1ರಿಂದ ಆರಂಭವಾಗಿದ್ದು, 31ರವರೆಗೆ ಇರಲಿದೆ.

ಹೆಚ್ಚಿನ ಮಾಹಿತಿಗೆ 08046644664.

Leave a Reply

Your email address will not be published. Required fields are marked *

Back To Top