25.3 C
Bangalore
Friday, December 13, 2019

ಬಂದೋರು ಕೇಳ್ತಾರ.. ಹೋಗ್ತಾರ…

Latest News

ಜೀತ ವಿಮುಕ್ತರಿಗೆ ಬಂಧಮುಕಗತ ಪ್ರಮಾಣಪತ್ರ ವಿತರಿಸಿದ ಎಸಿ ನವೀನ್ ಭಟ್

ಹೊಳೆನರಸೀಪುರ: ಪಟ್ಟಣದ ತಾಲೂಕು ಕಚೇರಿಯಲ್ಲಿ ಗುರುವಾರ ಸಂಜೆ ಜೀತ ಮುಕ್ತ ಗೊಳಿಸಿದ 6 ಜನರಿಗೆ ಬಂಧಮುಕ್ತ ಪ್ರಮಾಣ ಪತ್ರವನ್ನು ಉಪ ವಿಭಾಗಾಧಿಕಾರಿ ನವೀನ್ ಭಟ್ ವಿತರಿಸಿದರು. ನಂತರ...

ಹಾಸನದವರಷ್ಟು ಬುದ್ಧಿ ನನಗೆ ಕೊಡಪ್ಪ ಅಂತ ದೇವರಲ್ಲಿ ಕೇಳುತ್ತೇನೆ ಅಂದ್ರು ಸಚಿವ ಜೆ.ಸಿ.ಮಾಧುಸ್ವಾಮಿ

ಚನ್ನರಾಯಪಟ್ಟಣ: ತಾಲೂಕಿನ ಏತನೀರಾವರಿ ಯೋಜನೆಯಲ್ಲಿ ಜಮೀನು ಕಳೆದುಕೊಂಡಿರುವವರ ಪರಿಹಾರಕ್ಕೆ ಸುಮಾರು 200 ಕೋಟಿ ರೂ. ಅನುದಾನ ಅಗತ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೇಳಿದರು. ತಾಲೂಕಿನ...

ಪತ್ನಿಗೆ ಈರುಳ್ಳಿ ಕಿವಿಯೋಲೆ ತಂದುಕೊಟ್ಟ ಪ್ರಖ್ಯಾತ ನಟನ್ಯಾರು: ಕಾಮಿಡಿಯಾದ್ರೂ ಇದರಲ್ಲಿದೆ ಮನಮುಟ್ಟುವ ಸಂದೇಶ!

ಮುಂಬೈ: ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ದೇಶದಲ್ಲಿ ಏನೇ ಬೆಳವಣಿಗೆಯಾದರೂ ಜಾಲತಾಣದಲ್ಲಿ ಪ್ರತಿಕ್ರಿಯೆ...

ಮತ್ತೊಮ್ಮೆ, ‘ಮಾಜಿ ಸಿಎಂ ಸಿದ್ದರಾಮಯ್ಯ ನಮ್ಮ ಗುರುಗಳು’ ಎಂದ ರಮೇಶ್​ ಜಾರಕಿಹೊಳಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈಗಲೂ ನಮ್ಮ ಗುರುಗಳು ಎಂದು ಶಾಸಕ ರಮೇಶ್​ ಜಾರಕಿಹೊಳಿ ಪುನರುಚ್ಚಾರ ಮಾಡಿದ್ದಾರೆ. ಮಲ್ಲೇಶ್ವರಂನ ಖಾಸಗಿ ಆಸ್ಪತ್ರೆಗೆ ದಾಖಲಾಗಿರುವ...

ಕನ್ನಡ ಹಬ್ಬ ಕಾರ್ಯಕ್ರಮ

ಮೈಸೂರು: ಕರ್ನಾಟಕ ರಾಜ್ಯ ಒಕ್ಕಲಿಗರ ವಿಕಾಸ ವೇದಿಕೆಯು ಕನ್ನಡ ಹಬ್ಬ ಕಾರ್ಯಕ್ರಮವನ್ನು ಡಿ.೧೬ ರಂದು ಮಧ್ಯಾಹ್ನ ೩.೩೦ ಕ್ಕೆ ಆಯೋಜಿಸಿದೆ. ಕಾರ್ಯಕ್ರಮದಲ್ಲಿ ದಿವಂಗತರಾದ ರಾಜಶೇಖರ ಕೋಟಿ ಹಾಗೂ...

ಸವಣೂರ: ‘ಮಳೆಯಿಂದ ಮನೆ, ಹೊಲದಲ್ಲಿ ಬಿತ್ತಿದ ಬೆಳೆಯನ್ನು ಸಂಪೂರ್ಣ ಕಳೆದುಕೊಂಡು ಬೀದಿಗೆ ಬಿದ್ದಂತಾಗಿದೆ ರ್ರೀ ನಮ್ಮ ಬಾಳೇ. ಯಾರೀಗೆ ಹೇಳಿಕೊಂಡ್ರ ಏನ್ ಆಗೋದು. ಬಂದೋರು ಕೇಳ್ತಾರ, ಹೋಗ್ತಾರ. ಮಾಡಿದ ಲಕ್ಷಾಂತರ ರೂ. ಸಾಲ ತಿರಿಸೋದು ನೆನೆಸಿಕೊಂಡರೆ ಸಾಯೋದು ಒಳ್ಳೇದು ಅನ್ಸಾಕತ್ತೇತಿ ನೋಡ್ರಿ.’

ಇದು ವರದಾ ನದಿ ಪ್ರವಾಹಕ್ಕೆ ಸಿಲುಕಿದ ತಾಲೂಕಿನ ಕಳಸೂರ ಗ್ರಾಮದ ಸಂತ್ರಸ್ತರ ಮಾತು.

ಗ್ರಾಮದ ಅಂದಾಜು 66 ಕುಟುಂಬಗಳು ನೆರೆ ಹಾವಳಿಗೆ ತುತ್ತಾಗಿವೆ. ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು 200ಕ್ಕೂ ಹೆಚ್ಚಿನ ಹೆಕ್ಟೇರ್ ಭೂಮಿ ಸಂಪೂರ್ಣ ನಾಶವಾಗಿದೆ.

‘ಮನೆಯ 13 ಎಕರೆ ಹಾಗೂ ಇತರೆ ಅಲ್ಪ ಹೊಲ ಲಾವಣಿ ಪಡೆದು ಗೋವಿನಜೋಳ, ಮೆಣಸಿನಗಿಡ ನಾಟಿ, ಸೋಯಾಬಿನ್, ಶೇಂಗಾ ಬಿತ್ತನೆಗಾಗಿ 3ರಿಂದ 4 ಲಕ್ಷ ರೂ. ಖರ್ಚು ಮಾಡಿದ್ದೇನೆ. ಆದರೆ, ನಮ್ಮ ಪರಿಸ್ಥಿತಿ ಶತ್ರುವಿಗೂ ಬೇಡ. ಹಿಂದಿನ ಸಾಲ ಈ ಬಾರಿಯ ಸಾಲದ ಬಗ್ಗೆ ನೆನೆಸಿಕೊಂಡರೆ ಜೀವನ ಬೇಸರ ಆಗುತ್ತದೆ’ ಎಂದು ಗ್ರಾಮದ ಮಹೇಶ ಕ್ಯಾಲಕೊಂಡ ಅಳಲು ತೋಡಿಕೊಂಡಿದ್ದಾರೆ.

ಸ್ಥಳಾಂತರಕ್ಕೆ ಹೆಚ್ಚಿದ ಆಗ್ರಹ

ಕಳಸೂರ ಗ್ರಾಮದಲ್ಲಿ 520 ಕುಟುಂಬಗಳು ವಾಸಿಸುತ್ತಿವೆ. 1961ರಲ್ಲಿ ನೆರೆಯಿಂದಾಗಿ ಗ್ರಾಮ ಸಂಪೂರ್ಣ ಮುಳುಗಡೆಯಾಗಿತ್ತು. 1992ರಲ್ಲೂ ಗ್ರಾಮದ 1ನೇ ವಾರ್ಡ್ ಮನೆಗಳು ಮುಳುಗಡೆಯಾಗಿದ್ದವು. ಹೀಗಾಗಿ ಗ್ರಾಮ ಸ್ಥಳಾಂತರಿಸಲು ಗ್ರಾಮಸ್ಥರು ಸರ್ಕಾರಕ್ಕೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. 380 ಕುಟುಂಬಗಳು ವಾಸಿಸುವ ಮಂಟಗಣಿ ಹಾಗೂ 320 ಕುಟುಂಬಗಳು ವಾಸಿಸುವ ಕಲಕೋಟಿ ಗ್ರಾಮ ಸ್ಥಳಾಂತರಕ್ಕೂ ಒತ್ತಾಯ ಕೇಳಿ ಬಂದಿದೆ.

ಕುಸಿದ ಆಶಾಗೋಪುರ

ಕಳಸೂರಿನಲ್ಲಿ 66, ಮಂಟಗಣಿಯಲ್ಲಿ 55 ಹಾಗೂ ಕಲಕೋಟಿಯಲ್ಲಿ 40ಕ್ಕೂ ಹೆಚ್ಚು ಕುಟುಂಬಸ್ಥರು ಮನೆ ಕಳೆದುಕೊಂಡು ಪರದಾಡುವಂತಾಗಿದೆ. ನದಿಯಲ್ಲಿ ನೀರಿನ ಹರಿವು ಕಡಿಮೆಗೊಂಡಿದೆ. ಆದರೆ, ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಹಾವೇರಿ, ಸವಣೂರ ರಸ್ತೆಗಳು ಕೊಚ್ಚಿ ಹೋಗಿವೆ.

ಸಚಿವರಿಗಾಗಿ ಕಾದಿರುವ ಜನತೆ

ನೂತನ ಸಚಿವ ಬಸವರಾಜ ಬೊಮ್ಮಾಯಿ ಆ. 22ರಂದು ಗ್ರಾಮಕ್ಕೆ ಆಗಮಿಸುವ ಮಾಹಿತಿ ತಿಳಿದು ಗ್ರಾಮಸ್ಥರು ತಮ್ಮ ಅಳಲನ್ನು ಹೇಳಿಕೊಳ್ಳಲು ಕಾತುರದಿಂದ ಕಾಯುತ್ತಿದ್ದಾರೆ. ಕಳಸೂರ ಗ್ರಾಮದ ಸ್ಥಳಾಂತರ ಹಾಗೂ ನದಿ ನೀರಿನಲ್ಲಿ ಸಂಪೂರ್ಣ ಮುಳಗಿರುವ ಬ್ಯಾರೇಜ್ ಕಂ, ಬ್ರಿಜ್ (ಸೇತುವೆ)ಅನ್ನು ಎತ್ತರಿಸುವ ಬೇಡಿಕೆ ಈಡೇರಿಸುವಂತೆ ಒತ್ತಾಯಿಸುತ್ತೇವೆ ಎಂದು ಕಳಸೂರ ಗ್ರಾಪಂ ಅಧ್ಯಕ್ಷ ಶ್ರೀಕಾಂತಗೌಡ ಪಾಟೀಲ ತಿಳಿಸಿದ್ದಾರೆ.

ಮನೆ ಹಾಗೂ ಹೊಲ ಕಳೆದುಕೊಂಡು ಜೀವನದಲ್ಲಿ ಜಿಗುಪ್ಸೆಗೊಂಡ ನಮ್ಮ ಕುಟುಂಬಕ್ಕೆ ಗ್ರಾಮದ ಮುದಕಪ್ಪ ಕಮ್ಮಾರ ಎಂಬುವರು ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದಾರೆ. ಸರ್ಕಾರದ ನೆರವು ಹಾಗೂ ಸಹಾಯ ಶೀಘ್ರ ದೊರೆಯುವಂತಾಗಬೇಕು.

| ಮಹೇಶ ಕ್ಯಾಲಕೊಂಡ, ಕಳಸೂರ ಗ್ರಾಮದ ರೈತ

Stay connected

278,747FansLike
588FollowersFollow
626,000SubscribersSubscribe

ವಿಡಿಯೋ ನ್ಯೂಸ್

VIDEO: 8 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಲು 40 ಅಡಿ...

ತ್ರಿಶೂರ್​: ಇಲ್ಲೋರ್ವ ಯುವಕ ಬಾವಿಯಲ್ಲಿ ಬಿದ್ದಿದ್ದ ಹೆಬ್ಬಾವನ್ನು ರಕ್ಷಿಸಲು ಹಗ್ಗದ ಮೂಲಕ ಕೆಳಗೆ ಇಳಿದು ಬಳಿಕ ಅಪಾಯಕ್ಕೆ ಸಿಲುಕಿದ ವಿಡಿಯೋವೊಂದು ವೈರಲ್​ ಆಗಿದೆ. ಈ ಘಟನೆ ನಡೆದಿದ್ದು ಕೇರಳದ ತ್ರಿಶೂಲ್​ನಲ್ಲಿ ಎನ್ನಲಾಗಿದೆ. ವಿಡಿಯೋದಲ್ಲಿ ಇರುವ...

VIDEO| ಲಕ್ಷ್ಯದ ಜೊತೆಯಲಿ ಅನಿರುದ್ಧ್; ಡೈಲಾಗ್​ ಟೀಸರ್​ ಬಿಡುಗಡೆ

ಬೆಂಗಳೂರು: ‘ಜೊತೆ ಜೊತೆಯಲಿ’ ಧಾರಾವಾಹಿ ಮೂಲಕ ಕನ್ನಡಿಗರ ಮನೆಮನ ಗೆದ್ದಿರುವ ನಟ ಅನಿರುದ್ಧ್ ಈಗ ‘ಲಕ್ಷ್ಯ’ಗೆ ಜತೆಯಾಗಿದ್ದಾರೆ. ಅಂದರೆ ‘ಲಕ್ಷ್ಯ’ ಸಿನಿಮಾದ ಡೈಲಾಗ್ ಟೀಸರ್ ಬಿಡುಗಡೆ ಮಾಡುವ ಮೂಲಕ ಅವರು ಚಿತ್ರತಂಡದ ಜತೆ...

VIDEO| ಇಸ್ರೋದಿಂದ ರಿಸ್ಯಾಟ್​-2ಬಿಆರ್​1 ಹೆಸರಿನ ಮತ್ತೊಂದು ಬೇಹುಗಾರಿಕಾ ಉಪಗ್ರಹ ಯಶಸ್ವಿ...

ನವದೆಹಲಿ: ಪಿಎಸ್​ಎಲ್​ವಿ-ಸಿ48 ಉಡಾವಣಾ ವಾಹಕ ಹೊತ್ತ ರಿಸ್ಯಾಟ್​-2ಬಿಆರ್​1 ಹೆಸರಿನ ಉಪಗ್ರಹವನ್ನು ಇಸ್ರೋ ಶ್ರೀಹರಿಕೋಟದಲ್ಲಿರುವ ಸತೀಶ್​ ಧವನ್​ ಉಡಾವಣಾ ಕೇಂದ್ರದಿಂದ ಬುಧವಾರ ಮಧ್ಯಾಹ್ನ ಯಶಸ್ವಿಯಾಗಿ ಉಡಾವಣೆಗೊಳಿಸಿತು. ರಿಸ್ಯಾಟ್​-2ಬಿಆರ್​1 ಉಪ್ರಗಹದ ಜೊತೆಗೆ 9 ಗ್ರಾಹಕ...

VIDEO| ವಿಜಯವಾಣಿ-ದಿಗ್ವಿಜಯ ನ್ಯೂಸ್​ ಸಹಯೋಗದಲ್ಲಿ ಫೋನ್​ ಇನ್​ ಪ್ರೋಗ್ರಾಮ್​: ಮಹಿಳಾ...

ಬೆಂಗಳೂರು: ದಿಶಾ ಅತ್ಯಾಚಾರ ಮತ್ತು ಕೊಲೆ ಹಾಗೂ ಉನ್ನಾವೋ ಅತ್ಯಾಚಾರ ಪ್ರಕರಣಗಳಂತಹ ಪೈಶಾಚಿಕ ಕೃತ್ಯಗಳು ಜನರ ಮನಸ್ಸಿನಲ್ಲಿನ್ನೂ ಮಾಸಿಲ್ಲ. ಈ ಎರಡು ಪ್ರಕರಣಗಳಿಂದ ದೇಶದೆಲ್ಲೆಡೆ ಮಹಿಳಾ ಸುರಕ್ಷಾ ಪ್ರಶ್ನೆಯನ್ನು ಎಬ್ಬಿಸಿದೆ....

VIDEO: ಮರದ ಮೇಲಿದ್ದ ಹಾವನ್ನು ಜಂಪ್​ ಮಾಡಿದ ಹಿಡಿದ ಮುಂಗುಸಿ;...

ಬಳ್ಳಾರಿ: ಹಾವು-ಮುಂಗುಸಿ ಫೈಟ್​ ಹೊಸದಲ್ಲ. ಈಗಾಗಲೇ ಅದೆಷ್ಟೋ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಇಲ್ಲೊಂದು ಮುಂಗುಸಿ ಹಾವನ್ನು ಹಿಡಿದ ಪರಿ ನೋಡಿದರೆ ಒಂದು ಕ್ಷಣ ಮೈ ಜುಂ ಎನ್ನುತ್ತದೆ. ಹಾವಿನ ಮೇಲೆ ಸುಮ್ಮನೆ ಕುಳಿತಿದ್ದ ಮಾರುದ್ದ...

VIDEO: ಏರ್​ಪೋರ್ಟ್​ನಲ್ಲಿ ಬ್ಯಾಗೇಜ್​ಗಳ ಸಭ್ಯ ನಡತೆ ನೋಡಿ ಮನಸೋತ ನೆಟ್ಟಿಗರು;...

ಯಾವುದಾದರೂ ಕ್ಯೂದಲ್ಲಿ ನಿಂತರೂ ನೂಕುನುಗ್ಗಲು ಮಾಡುವ ಮನುಷ್ಯರಗಿಂತ ಈ ಬ್ಯಾಗೇಜ್​ಗಳು ಸಾವಿರ ಪಾಲು ಉತ್ತಮ ! ಅರೆ, ಇದೇನು? ಮನುಷ್ಯರಿಗೂ, ಬ್ಯಾಗೇಜ್​ಗಳಿಗೂ ಎಲ್ಲಿಯ ಹೋಲಿಕೆ ಎನ್ನುತ್ತೀರಾ? ಹಾಗಾದರೆ ಈ ಸುದ್ದಿ ಓದಿ, ವಿಡಿಯೋ ನೋಡಿದರೆ...