ಬಂಗಾರಪ್ಪ ಪುತ್ರನಾಗಿ ಮಧುಗೆ ಶೋಭೆ ತರಲ್ಲ

blank

ಸೊರಬ: ಚುನಾವಣೆ ಸಮೀಪಿಸುತ್ತಿದ್ದಂತೆ ಮಧು ಬಂಗಾರಪ್ಪ ಸೊರಬ ಕ್ಷೇತ್ರದಲ್ಲಿ ರಕ್ತಕ್ರಾಂತಿ ಮಾಡುವ ಹೇಳಿಕೆ ನೀಡುತ್ತಿದ್ದಾರೆ. ಬಂಗಾರಪ್ಪ ಅವರ ಪುತ್ರನಾಗಿ ಇಂತಹ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಕುಮಾರ್ ಬಂಗಾರಪ್ಪ ವಾಗ್ದಾಳಿ ಮಾಡಿದ್ದಾರೆ.
ಹಾಲಗಳಲೆ ಗ್ರಾಮದಲ್ಲಿ ಮಂಜೂರಾದ ಅಭಿವೃದ್ಧಿ ಕಾಮಗಾರಿಗಳ ಕುರಿತು ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿ ನಂತರ ಮಾತನಾಡಿದ ಅವರು, ತಾಳಗುಪ್ಪದಲ್ಲಿ ಅಕ್ರಮ ಸಾಗುವಳಿ ತೆರವು ಪ್ರಕ್ರಿಯೆ ಹೈಕೋರ್ಟ್ ತೀರ್ಪಿನ ಅನ್ವಯ ನಡೆದಿದೆ. ಆದರೆ ಮಾಜಿ ಶಾಸಕ ಎಸ್. ಮಧು ಬಂಗಾರಪ್ಪ ಬಿಜೆಪಿ ಸರ್ಕಾರಕ್ಕೆ ಮಸಿ ಬಳಿಯುವ ಯತ್ನದಲ್ಲಿ ತೊಡಗಿದ್ದಾರೆ. ಈ ಹಿಂದೆ ಸಹ ತಾಳಗುಪ್ಪ ರೈತರ ಹೆಸರಿನೊಂದಿಗೆ ಪಾದಯಾತ್ರೆ ನಡೆಸುವ ಮೂಲಕ ಗೆಲುವು ಸಾ„ಸಿದ ಮಧು ಬಂಗಾರಪ್ಪ, ನಂತರದ ದಿನಗಳಲ್ಲಿ ಆ ಭಾಗದ ರೈತರ ಕುರಿತು ಗಮನ ನೀಡಲಿಲ್ಲ ಎಂದು ಟೀಕಿಸಿದರು.
ಬಿಜೆಪಿ ಸರ್ಕಾರ ಬಗರ್‍ಹುಕುಂ ಸಾಗುವಳಿದಾರರ ಹಿತರಕ್ಷಣೆಗೆ ಬದ್ಧವಾಗಿದೆ. ರಾಜ್ಯದಲ್ಲಿ ಈಗಾಗಲೇ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿದ ರೈತರಿಗೆ ಭೂ ಹಕ್ಕು ಕೊಡಿಸುವ ಉದ್ದೇಶದಿಂದ 9 ಲಕ್ಷ ಹೆಕ್ಟೇರ್ ಪ್ರದೇಶದ ಅರಣ್ಯ ಭೂಮಿಯನ್ನು ಕಂದಾಯ ಭೂಮಿಯನ್ನಾಗಿ ಪರಿವರ್ತಿಸುವಂತೆ ಕೇಂದ್ರ ಸರ್ಕಾರಕ್ಕೆ ಅಫಿಡೆವಿಟ್ ಸಲ್ಲಿಸಲಾಗಿದೆ. ಆದರೆ, ಕ್ಷೇತ್ರದಲ್ಲಿ ಮಾಜಿ ಶಾಸಕರು ಜನರಲ್ಲಿ ಆತಂಕದ ವಾತಾವರಣ ಸೃಷ್ಟಿಸುತ್ತಿದ್ದಾರೆ. ಜನತೆ ಭಯ ಪಡುವ ಅಗತ್ಯವಿಲ್ಲ. ರಾಜ್ಯ ಸರ್ಕಾರ ಕಳೆದ ಐದು ವರ್ಷಗಳ ಅವ„ಯಲ್ಲಿ ಯಾವುದೇ ರೈತರನ್ನು ಒಕ್ಕಲೆಬ್ಬಿಸಿಲ್ಲ. ತಾಳಗುಪ್ಪ ಘಟನೆಯು ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ನಡೆದ ಘಟನೆಯಾಗಿದೆ ಎಂದು ಸ್ಪಷ್ಟಪಡಿಸಿದರು.
ಕ್ಷೇತ್ರದ ಅಭಿವೃದ್ಧಿ: ಕ್ಷೇತ್ರದಲ್ಲಿ ಭವಿಷ್ಯದ ದೃಷ್ಟಿಯನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಲಾಗುತ್ತಿದೆ. ಆರಂಭದಲ್ಲಿ ಕೇವಲ ಎರಡು ವಿದ್ಯುತ್ ಗ್ರಿಡ್‍ಗಳಿದ್ದವು. ಇದೀಗ ಸುಮಾರು 15 ಗ್ರಿಡ್‍ಗಳಾಗಿವೆ. ಮುಂದಿನ 25 ವರ್ಷಗಳ ಅವ„ಗೆ ಸಮರ್ಪಕ ವಿದ್ಯುತ್ ಪೂರೈಸಲು 30 ಗ್ರಿಡ್‍ಗಳ ಅವಶ್ಯಕತೆ ಇದೆ ಎಂದು ಕುಮಾರ ಬಂಗಾರಪ್ಪ ಹೇಳಿದರು.
ಬದಲಾಗುತ್ತಿರುವ ಸನ್ನಿವೇಶದಲ್ಲಿ ವಿದ್ಯುತ್ ಮೇಲಿನ ಅವಲಂಬನೆ ಹೆಚ್ಚುತ್ತಿದೆ. ಡಿಸೇಲ್, ಪೆಟ್ರೋಲ್ ವಾಹನಗಳ ಬಳಕೆ ಕಡಿಮೆಯಾಗಿ ವಿದ್ಯುತ್ ಚಾಲಿತ ವಾಹನಗಳ ಸಂಖ್ಯೆ ಹೆಚ್ಚಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ವಿದ್ಯುತ್ ಗ್ರಿಡ್‍ಗಳ ನಿರ್ಮಾಣ ಮಾಡಲಾಗುತ್ತಿದೆ. ಭವಿಷ್ಯದ ಅಭಿವೃದ್ಧಿ ಪರ ಚಿಂತನೆಗಳನ್ನಿಟ್ಟುಕೊಂಡು ಯೋಜನೆಗಳನ್ನು ರೂಪಿಸಿದಾಗ ಮಾತ್ರ ಕ್ಷೇತ್ರವೂ ಸಹ ಅಭಿವೃದ್ಧಿಯಾಗಲು ಸಾಧ್ಯವಿದೆ. ಕ್ಷೇತ್ರದಲ್ಲಿ ಸುಮಾರು 1900 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆದಿದೆ ಎಂದು ತಿಳಿಸಿದರು.

Share This Article

ಬೇಸಿಗೆಯ ಆರೋಗ್ಯಕ್ಕಾಗಿ ಇವುಗಳಿಗೆ ವಿದಾಯ ಹೇಳಿ! ಇಲ್ಲದಿದ್ದರೆ ಅನಾರೋಗ್ಯಕ್ಕೊಳಗಾಗುವುದು ಖಂಡಿತ Summer Foods

Summer Foods : ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ದೇಹದ ಉಷ್ಣತೆಯು ಸ್ವಾಭಾವಿಕವಾಗಿ ಹೆಚ್ಚಾಗುತ್ತದೆ. ಆದ್ದರಿಂದ ದೇಹವನ್ನು…

ಈ ಕೆಟ್ಟ ಅಭ್ಯಾಸಗಳು ನಿಮ್ಮ ಮನೆಯ ಶಾಂತಿ, ನೆಮ್ಮದಿ ಕೆಡಿಸುತ್ತವೆ! ಹುಷಾರ್​…Vastu Tips

Vastu Tips:  ನಮ್ಮ ದೈನಂದಿನ ಅಭ್ಯಾಸಗಳು ಮತ್ತು ಸುತ್ತಮುತ್ತಲಿನ ಪ್ರದೇಶಗಳು ಸಹ ನಮ್ಮ ಮನೆಯ ವಾಸ್ತುಗೆ…

ರಾತ್ರಿ ಬಾಯಿ ತೆರೆದು ಮಲಗುವುದು ಆರೋಗ್ಯಕ್ಕೆ ಒಳ್ಳೆಯದಲ್ಲ! ಇಂದೇ ಈ ಅಭ್ಯಾಸ ಬಿಟ್ಟು ಬಿಡಿ.. Sleeping Disorder

Sleeping Disorder : ಸಾಮಾನ್ಯವಾಗಿ ನಿದ್ದೆ ಮಾಡುವಾಗ ಕೆಲವರಿಗೆ  ಬಾಯಿ ತೆರೆದುಕೊಂಡು ಮಲಗುವ ಅಭ್ಯಾಸ ಇರುತ್ತದೆ.…