ಫ್ಲೋರಲ್ ಟಿ-ಶರ್ಟ್ ಹುಡುಗರ ಟ್ರೆಂಡ್

| ಬಸವರಾಜ ಕಲ್ಲಪ್ಪ ಕೊಪ್ಪದ, ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿ

ಫ್ಯಾಷನ್ ಲೋಕ ಎಂದಿಗೂ ನಿಲ್ಲುವುದಿಲ್ಲ. ಕಾಲಕ್ಕೆ ತಕ್ಕಂತೆ ಬದಲಾವಣೆಯ ಮಹಾಪೂರವನ್ನೇ ಹೊತ್ತು ತರುವ ಫ್ಯಾಷನ್ ಜಗತ್ತು ಅಡಿಯಿಂದ ಮುಡಿಯವರೆಗೂ ಹೊಸತನವನ್ನು ಸೃಷ್ಟಿಸುತ್ತದೆ.

ಅಂತಹ ಹೊಸತನ ಕಾಣುವ ಯುವಕ-ಯುವತಿಯರಿಗೆ ಬೇರೆ-ಬೇರೆ ವಿನ್ಯಾಸದ ಬಟ್ಟೆಗಳು ಮಾರುಕಟ್ಟೆಗಳಲ್ಲಿ ಸಿಗುತ್ತವೆ. ಅಂತಹ ಬಟ್ಟೆಗಳ ಸಾಲಿಗೆ ಫ್ಲೋರಲ್ ಟಿ-ಶರ್ಟ್ ಕೂಡ ಸೇರುತ್ತದೆ. ಈ ಟಿ-ಶರ್ಟ್ ಸಖತ್ ಟ್ರೆಂಡ್ ಹುಟ್ಟುಹಾಕಿದ್ದು, ಹುಡುಗಿಯರೂ ಇಷ್ಟಪಟ್ಟು ಧರಿಸುತ್ತಿದ್ದಾರೆ. ಫ್ಲೋರಲ್ ಟಿ-ಶರ್ಟ್ ಯುವತಿಯರಿಗಿಂತ ಹೆಚ್ಚು ಯುವಕರಿಗೆ ಸ್ಟೈಲಿಶ್ ಲುಕ್ ನೀಡುತ್ತದೆ. ನೀಳಕಾಯದವರಿಗೆ ತುಂಬ ಚೆನ್ನಾಗಿ ಹೊಂದಿಕೊಳ್ಳುವ ಈ ಶರ್ಟ್​ನ ಮತ್ತೊಂದು ವೈಶಿಷ್ಟ್ಯವೆಂದರೆ ಒಂದೇ ಟಿ-ಶರ್ಟ್ ಮೇಲೆ ಬೇರೆ ಬೇರೆ ರೀತಿಯ ಡಿಸೈನ್​ಗಳನ್ನು ಕಾಣಬಹುದು. ಇದೇ ರೀತಿ ಭಿನ್ನ ವಿಭಿನ್ನ ವಿನ್ಯಾಸದ ಫ್ಲೋರಲ್ ಟಿ-ಶರ್ಟ್​ಗಳು ಮಾರುಕಟ್ಟೆಗಳಲ್ಲಿ ಸಿಗುತ್ತವೆ. ಫ್ಯಾಷನ್​ನತ್ತ ಹೆಚ್ಚು ಆಸಕ್ತಿ ಇರುವ ಯುವಕರಿಗೆ ಫ್ಲೋರಲ್ ಶರ್ಟ್ ಚೆನ್ನಾಗಿ ಕಾಣುತ್ತದೆ.

Leave a Reply

Your email address will not be published. Required fields are marked *