ಫೈನಲ್​ಗೆ ಭಾರತೀಯರ ಬೆಂಬಲ ಕೋರಿದ ಕೇನ್

ಲಂಡನ್: ಸೆಮಿಫೈನಲ್​ನಲ್ಲಿ ವಿರಾಟ್ ಕೊಹ್ಲಿ ಪಡೆಗೆ ಸೋಲುಣಿಸಿದ್ದರೂ ಕೋಪಗೊಳ್ಳದೆ, 150 ಕೋಟಿ ಭಾರತೀಯರು ಫೈನಲ್ ಪಂದ್ಯದಲ್ಲಿ ತಮಗೆ ಬೆಂಬಲ ನೀಡಬೇಕೆಂದು ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಕೋರಿದ್ದಾರೆ. ‘ಭಾರತೀಯರ ಕ್ರಿಕೆಟ್ ಪ್ರೀತಿ ಸಾಟಿ ಇಲ್ಲದ್ದು. ಭಾರತದಂಥ ದೇಶ ಕ್ರಿಕೆಟ್ ಆಡುತ್ತಿರುವುದು ನಮ್ಮ ಭಾಗ್ಯ.

ಫೈನಲ್ ಪಂದ್ಯದಲ್ಲಿ 1.5 ಬಿಲಿಯನ್ ಭಾರತೀಯರು ನಮ್ಮನ್ನು ಬೆಂಬಲಿಸುವ ನಿರೀಕ್ಷೆಯಲ್ಲಿದ್ದೇವೆ’ ಎಂದು ವಿಲಿಯಮ್ಸನ್ ಹೇಳಿದ್ದಾರೆ. ಕ್ರಿಕೆಟ್ ವಿಶ್ವಕಪ್​ನಲ್ಲಿ ಸತತ 2ನೇ ಬಾರಿ ಫೈನಲ್​ಗೇರಿದ ಹೊರತಾಗಿಯೂ ನ್ಯೂಜಿಲೆಂಡ್​ನಲ್ಲಿ ರಗ್ಬಿ ಆಟವೇ ನಂ.1 ಕ್ರೀಡೆಯಾಗಿರಲಿದೆ ಎಂದವರು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *