ಬಾಗಲಕೋಟೆ: ಜಿಲ್ಲೆಯ ಯಂಡಿಗೇರಿ ತ್ರೇವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ಕೊಡ ಮಾಡುವ ೨೦೨೪ನೇ ಸಾಲಿನ ರಾಜ್ಯಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿಯನ್ನು ಮೂರು ಕೃತಿಗಳಿಗೆ ನೀಡಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಷ್ಠಾನದಿಂದ ಕಥಾಸಂಕಲನ, ಕಾದಂಬರಿ ಮತ್ತು ಕವನಸಂಕಲನ ವಿಭಾಗಗಳಲ್ಲಿ ಕೃತಿಗಳನ್ನು ಆಹ್ವಾನಿಸಲಾಗಿತ್ತು. ಮೂರು ಸಾಹಿತ್ಯ ಪ್ರಕಾರಗಳಲ್ಲಿ ೧೧೧ ಕೃತಿಗಳು ಸ್ಪರ್ಧೆಗೆ ಬಂದಿದ್ದವು. ಮೂರು ಪ್ರಕಾರ ಸಾಹಿತ್ಯ ಕೃತಿಗಳಲ್ಲಿ ಕಾದಂಬರಿಯಲ್ಲಿ ಗುರುಪ್ರಸಾದ್ ಕಂಟಲಗೆರೆಯವರ ಅಟ್ರಾಸಿಟಿ, ಕಥಾ ಸಂಕಲನದಲ್ಲಿ ಗೋಕಾಕದ ಲಕ್ಷ÷್ಮಣ ಶರೆಗಾರಯವರ ತಿದಿಯ ತುದಿಗೆ ಬೆಂಕಿಯ ಉಗುಳು, ಚಿಕ್ಕಮಂಗಳೂರಿನ ಶಶಿ ತರೀಕೆರೆಯ ಪ್ಯೂಪಾ ಕವನ ಸಂಕಲನ ಆಯ್ಕೆಯಾಗಿದೆ. ಪ್ರಶಸ್ತಿ ವಿಜೇತರಿಗೆ ೧೦ ಸಾವಿರ ರೂ., ಪ್ರಶಸ್ತಿ ಫಲಕ , ಗೌರವ ಸನ್ಮಾನ ನೀಡಲಾಗುವುದು ಎಂದರು.
ಫೆ.೨೩ ರಂದು ಬೆಳಗ್ಗೆ ೧೦.೩೦ಕ್ಕೆ ನವನಗರದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಸಭಾಭವನದಲ್ಲಿ ನಡೆಯಲಿದೆ. ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಖ್ಯಾತ ಕಾದಂಬರಿಕಾರ ಮತ್ತು ಕತೆಗಾರ ಶ್ರೀಧರ ಬಳಿಗಾರ, ಕೇಶವ ಮಳಗಿ ಆಗಮಿಸಲಿದ್ದಾರೆ. ಕಾರ್ಯಕ್ರಮ ಜಿಲ್ಲಾಽಕಾರಿ ಜಾನಕಿ ಕೆ.ಎಂ. ಉದ್ಘಾಟಿಸಲಿದ್ದಾರೆ. ತೋಟಗಾರಿಕೆ ವಿವಿ ಕುಲಪತಿ ಡಾ.ವಿಷ್ಣುವರ್ಧನ ಮುಖ್ಯ ಅಥಿತಿಗಳಾಗಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಮುಖಂಡರಾದ ಮಲ್ಲಿಕಾರ್ಜುನ ಶೆಲ್ಲಿಕೇರಿ, ಚಂದ್ರಶೇಖರ ಕಾಳನ್ನವರ, ಆರ್.ಸಿ.ಚಿತ್ತವಾಡಗಿ, ಮನಹೋರ ಬ್ಯಾಹಟ್ಟಿ ಇದ್ದರು.
=========