ಬಾಗಲಕೋಟೆ: ಸಕಲ ಹಿಂದೂ ಸಮಾಜ, ಕರ್ನಾಟಕ ಕ್ಷತ್ರೀಯ ಒಕ್ಕೂಟ ಹಾಗೂ ಮರಾಠಾ ಹಿತ ಚಿಂತಕರ ಸಂಘದ ಆಶ್ರಯದಲ್ಲಿ ಫೆ.೧೯ ರಂದು ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ನಗರದಲ್ಲಿ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಮರಾಠ ಚಿಂತಕ ಸಂಘದ ಅಧ್ಯಕ್ಷ ಡಾ.ಶೇಖರ ಮಾನೆ ಹೇಳಿದರು.
ಅಂದು ಬೆಳಗ್ಗೆ ೧೦ ಗಂಟೆಗೆ ಮೆರವಣಿಗೆ ನಡೆಯಲಿದ್ದು, ಹೊಳೇ ಆಂಜನೇಯ ದೇವಸ್ಥಾನದಿಂದ ಬಸವೇಶ್ವರ ವೃತ್ತ, ಎಂ.ಜಿ.ರಸ್ತೆ, ವಲ್ಲಬಭಾಯಿ ಚೌಕ್, ಕಿಲ್ಲಾ, ಕಾಯಿಪಲ್ಲೆ ಮಾರ್ಕೆಟ್ ತಲುಪಲಿದೆ. ನಂತರ ೧೨.೩೦ ಗಂಟೆಗೆ ಹೊಳೆ ಆಂಜನೇಯ ದೇವಸ್ಥಾನದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಉದ್ಘಾಟಿಸಲಿದ್ದಾರೆ. ಮುಖ್ಯ ಭಾಷಣಕಾರರಾಗಿ ಶ್ರೀರಾಮ ಸೇನೆ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ, ಹಿಂದು ಧರ್ಮ ಜಾಗರಣ ವೇದಿಕೆ ಉತ್ತರ ಪ್ರಾಂತ ಪ್ರಚಾರಕ ಡಾ.ಹಣಮಂತ ಮಳಲಿ ಆಗಮಿಸಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬೈಕ್ ರ‍್ಯಾಲಿ: ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಅಂಗವಾಗಿ ಬೈಕ್ ರ‍್ಯಾಲಿ ಹಮ್ಮಿಕೊಳ್ಳಲಾಗಿದೆ. ಫೆ.೧೭ ರಂದು ಬೆಳಗ್ಗೆ ೯ ಗಂಟೆಗೆ ನವನಗರದ ಸೆಕ್ಟರ್ ನಂ.೧ ರಲ್ಲಿಯ ಮರಾಠ ಭವನದಿಂದ ಆರಂಭವಾಗುವ ರ‍್ಯಾಲಿ ಎಂಬಿಎ ಕಾಲೇಜು, ವಿದ್ಯಾಗಿರಿ ಸರ್ಕಲ್, ಕಾಳಿದಾಸ ಸರ್ಕಲ್, ಸರ್ಕಾರಿ ಆಸ್ಪತ್ರೆ, ಹಳೆ ಆರ್‌ಟಿಓ ಸರ್ಕಲ್, ಪೊಲೀಸ್, ಎಪಿಎಂಸಿ ಸರ್ಕಲ್, ರೈಲು ನಿಲ್ದಾಣ, ಮಾನೆ ಆಸ್ಪತ್ರೆ, ಹಳೆ ಕೋರ್ಟ, ಅಂಬೇಡ್ಕರ ಸರ್ಕಲ್, ಹಳೆ ಕಾಯಿಪಲ್ಲೆ ಮಾರ್ಕೆಟ್, ಅಂಬಾಭವಾನಿ ದೇವಸ್ಥಾನ ತಲುಪಲಿದೆ ಎಂದರು.
ಮುಖಂಡರಾದ ಸಿ.ಎಸ್.ಪಾಟೀಲ, ಡಾ.ಗಿರೀಶ ಮಾಸೂರಕರ, ಶರದ್ ಕಲಬುರ್ಗಿ, ಕಲ್ಪನಾ ಸಾವಂತ, ಬಿ.ಆರ್.ಸೂರ್ಯವಂಶಿ, ಜ್ಯೋತಿ ಕದಾಂಪುರ ಸೇರಿದಂತೆ ಇದ್ದರು.
ಫೆ.೧೯ ರಂದು ಛತ್ರಪತಿ ಶಿವಾಜಿ ಮಹಾರಾಜ ಜಯಂತಿ

ಸಂಜೆ ಉಪ್ಪನ್ನು ದಾನ ಮಾಡುವುದು ಒಳ್ಳೆಯದಲ್ಲ! ಮನೆಯಲ್ಲಿ ಎದುರಾಗುತ್ತದೆ ಹಣದ ಸಮಸ್ಯೆ..salt
salt : ಉಪ್ಪು ಅಡುಗೆಯಲ್ಲಿ ಕೇವಲ ರುಚಿ ಹೆಚ್ಚಿಸುವ ವಸ್ತುವಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಇದು ಮನೆಯಲ್ಲಿ…
ನವವಿವಾಹಿತರಿಗೆ ಈ ಉಡುಗೊರೆಗಳನ್ನು ಎಂದಿಗೂ ನೀಡಬೇಡಿ! ಜೀವನ ಹಾಳಾಗುತ್ತದೆ… gifts
gifts: ಹೊಸದಾಗಿ ಮದುವೆಯಾದ ಹೆಣ್ಣುಮಗಳಿಗೆ ಉಡುಗೊರೆಗಳನ್ನು ನೀಡುವುದು ಸಾಮಾನ್ಯ. ತಾಯಿಯ ಮನೆಯಿಂದ ಮಗಳಿಗೆ ಕೆಲವು ರೀತಿಯ…
ಈ ಸುಡುವ ಬಿಸಿಲಿನಲ್ಲಿ ಐಸ್ ಕ್ರೀಮ್ ತಿನ್ನುವುದರಿಂದ ನಿಜವಾಗಿಯೂ ದೇಹ ತಂಪಾಗುತ್ತದೆಯೇ? ice cream
ice cream: ನಾವು ಒಂದು ಚಮಚ ಐಸ್ ಕ್ರೀಮ್ ಅನ್ನು ಬಾಯಿಯಲ್ಲಿ ಇಟ್ಟ ತಕ್ಷಣ ತಂಪನ್ನು…