More

  ಫೆ.೧೮ ರಂದು ಸಾಹಿತ್ಯ ಪ್ರಶಸ್ತಿ ಸಮಾರಂಭ

  ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲೂ ಕಿನ ಯಂಡಿಗೇರಿಯ ತ್ರಿವೇಣಿ ಶೆಲ್ಲಿಕೇರಿ ಪ್ರತಿಷ್ಠಾನದಿಂದ ರಾಜ್ಯ ಮಟ್ಟದ ಸಾಹಿತ್ಯ ಪ್ರಶಸ್ತಿ ಹಾಗೂ ತಾವು ರಚಿಸಿರುವ ದೀಡೆಕರೆ ಜಮೀನು ಕಥಾಸಂಕ ಲನದ ದ್ವಿತೀಯ ಆವೃತ್ತಿ ಬಿಡುಗಡೆ ಸಮಾರಂಭವನ್ನು ಫೆ.೧೮ ರಂದು ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಬೆಳಿಗ್ಗೆ ೧೦:೩೦ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಮಲ್ಲಿಕಾರ್ಜುನ ಶೆಲ್ಲಿಕೇರಿ ತಿಳಿಸಿದರು.

  ಇಲ್ಲಿನ ಪತ್ರಿಕಾ ಭವನದಲ್ಲಿ ಹಮ್ಮಿಕೊಂಡಿದ್ದ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಹಿತಿ ಅಮರೇಶ ನುಗಡೋಣಿ ಕಾರ್ಯ ಕ್ರಮ ವನ್ನು ಉದ್ಘಾಟಿಸಲಿದ್ದು, ಸಾಹಿತಿ ರಾಘವೇಂದ್ರ ಪಾಟೀ ಲ ಪ್ರಶಸ್ತಿ ಪ್ರಧಾನ ಮಾಡಲಿ ದ್ದಾರೆ. ಡಾ. ಬಾಳಾಸಾಹೇಬ ಲೋಕಾಪುರ ಹಾಗೂ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಶಿವಾನಂದ ಶೆಲ್ಲಿಕೇರಿ ಸೇರಿ ದಂತೆ ಅನೇಕರು ಪಾಲ್ಗೊಳ್ಳ ಲಿದ್ದಾರೆ ಎಂದರು.

  ಕಾದಂಬರಿ ವಿಭಾಗದಲ್ಲಿ ಚೀಮ ನಹಳ್ಳಿ ರಮೇಶಬಾಬು ಅವರ ಮಂಪರು ಕಾದಂಬರಿ ಹಾಗೂ ಕವನಸಂಕಲನ ವಿಭಾಗದಲ್ಲಿ ಭಾಗ್ಯಜ್ಯೋತಿ ಹಿರೇಮಠ ಅವರ ಬಿದಿರ ಬಿನ್ನಹ ಎಂಬ ಕವನಸಂಕಲನಕ್ಕೆ ರಾಜ್ಯದ ಮಟ್ಟದ ತ್ರಿವೇಣಿ ಶೆಲ್ಲಿಕೇರಿ ಸಾಹಿತ್ಯ ಪ್ರಶಸ್ತಿ ದೊರೆತಿದೆ. ಪ್ರಶಸ್ತಿಯು ೧೦ ಸಾವಿರ ರು. ನಗದು ಹಾಗೂ ಸ್ಮರಣಿಕೆ ಒಳಗೊಂಡಿದೆ. ಇನ್ನೂ ಕಥಾಸಂಕಲನ ವಿಭಾಗದಲ್ಲಿ ಸ್ವಾಮಿ ಪೊನ್ನಾವಿ ಅವರ ದಾರಿ ತಪ್ಪಿಸುವ ಗಿಡಕ್ಕೆ ಹಾಗೂ ಗೋವಿಂದರಾಜು ಕಲ್ಲೂರ ಅವರ ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು ಎಂಬ ಕಥಾ ಸಂಕಲನಕ್ಕೆ ಪ್ರಥಮ ಪ್ರಶಸ್ತಿ ಬಂದಿದ್ದು, ಎರಡು ಕೃತಿಗಳಿಗೂ ತಲಾ ೫ ಸಾವಿರ ರು. ನೀಡಲಾಗುತ್ತದೆ ಎಂದು ತಿಳಿಸಿದರು.

  ಎಸ್.ಕೆ.ಮಂಜುನಾಥ ಅವರ ಗಾಳಿಯ ಎದೆಸೀಳಿ ಹೊರಟ ಹಕ್ಕಿ, ಸುಮಿತ್ ಮೇತ್ರಿ ಅವರ ಈ ಕಣ್ಣುಗಳಿಗೆ ಸದಾ ನೀರಡಿಕೆ ಹಾಗೂ ನಂದಿನಿ ಹೆದ್ದುರ್ಗ ಅವರ ಒಂದು ಆದಿಮ ಪ್ರೇಮ, ರಾಜೇಶಕುಮಾರ ಕಲ್ಯಾರ ಈಗಲ್ಸ್ ಲೈನ್, ಫೌಝಿಯ ಸಲೀ ಂರ ನೀ ದೂರ ಹೋದಾಗ, ನಾಗರಾಜ ಕೋರಿ ಅವರ ಕಳವಳದ ದೀಗಿ ಹಾಗೂ ಸುಧಾ ಆಡುಕಳ ಅವರ ನೀಲಿ ಮತ್ತು ಸೇಬು ಎಂಬ ಕೃತಿಗಳು ಮೆಚ್ಚುಗೆ ಪಡೆದಿವೆ. ಮಯೂರ ಮತ್ತು ಸುಧಾ ಪತ್ರಿಕೆ ಕಾರ್ಯಕಾರಿ ಸಂಪಾದಕ ರಘುನಾಥ ಚ.ಹ ಹಾಗೂ ಕಲಬುರ್ಗಿಯ ಸಾಹಿತಿ ಸಂಧ್ಯಾ ಹೊನ ಗುಂಟಿಕರ್ ಅವರು ತೀರ್ಪುಗಾರರಾಗಿದ್ದರು ಎಂದರು.

  ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಶಿವಾನಂದ ಶೆಲ್ಲಿಕೇರಿ, ಮನೋಹರ ಬ್ಯಾಹಟ್ಟಿ, ಡಿ.ಜಿ.ಜಕ್ಕಾನಟ್ಟಿ, ಅನಿಲ ಗುನ್ನಾಪುರ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts