ಬಾಗಲಕೋಟೆ: ಸಪ್ತ ಗ್ರಾಮಗಳ ಅಽಪತಿ ವಿಜಯಪುರ ಜಿಲ್ಲೆಯ ನೀಡಗುಂದಿ ತಾಲೂಕಿನ ಯಲಗೂರ ಗ್ರಾಮದ ಯಲಗೂರೇಶ್ವರ ದೇವರ ಕಾರ್ತಿಕೋತ್ಸವ – ಫೆ.೧೫, ೧೬ ರಂದು ಜರಗಲಿದ್ದು, ಪ್ರತಿ ದಿನ ಬೆಳಗ್ಗೆ ಪಂಚಾಮೃತ ಅಭಿಷೇಕ ಪವಮಾನ ಹೋಮ, ಮಹಾಪೂಜೆ, ೧೦ ಗಂಟೆಗೆ ದಿಂಡಿನ ಸ್ಪರ್ಧೆ, ತೀರ್ಥ ಪ್ರಸಾದ, ಹರಿದಾಸರ ಕೀರ್ತನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
-ಫೆ.೧೫ ರಂದು ಶಾಂತಾ ಅಭಿಜಿತ್ ದೇಶಪಾಂಡೆ, ಡಾ.ಸಂಗೀತಾ ಕಾಖಂಡಕಿ, ವಸಂತರಾವ ಕುಲಕರ್ಣಿ, ಸ್ವಾತಿ ಉತ್ತರೇಶ್ವರ, ಸ್ನೇಹಾ ಕೆರೂರ(ಗುಡಿ), ಗೌರಿ ಕುಲಕರ್ಣಿ, ದಿಲೀಪ ಕುಲಕರ್ಣಿ, ಭವಾನಿ ದತ್ತಾತ್ರೇಯ ಥಿಟೆ, ವಿಶಾಲ ಕಟ್ಟಿ, ವಿಭಾ ಹೆಗಡೆ, ಸ್ಥಾಯಿ ನಾಕೋಡ, ಪಂ. ರವೀಂದ್ರ ಸೊರಗಾವಿ, ಪಂ.ಬಾಲಚAದ್ರ ನಾಕೋಡ, ರಾಧಾ ದೇಸಾಯಿ, ರಜತ ಆರ್. ಕುಲಕರ್ಣಿ, ಬಿ.ಬಿ. ಕುಲಕರ್ಣಿ, ವೈಷ್ಣವಿ ಪಂಚಮುಖಿ, ಶ್ರೀಹರಿ ಕುಲಕರ್ಣಿ, ಗೀತಾ ಕುಲಕರ್ಣಿ ಮತ್ತು ಚೇತನಾ ಗುಡಿ(ನಾಯಕ), ರತ್ನಾ ಕುಲಕರ್ಣಿ, ನಾರಾಯಣ ತಾಸಗಾಂವ, ರಾಘವೇಂದ್ರ ಕಟ್ಟಿ, ಪಂ.ಕುಮಾರ ಮರಡೂರ, ಪಂ.ಜಯತೀರ್ಥ ಮೆವುಂಡಿ ಹಾಗೂ ವಿದೂಷಿ ಸಂಗೀತ ಕಟ್ಟಿ ಅವರ ಗಾಯನ ನಡೆಯಲಿದೆ.
ಸುಪ್ರೀತ ಬೆಂಗಳೂರು ಮತ್ತು ಶಿವಕುಮಾರ ಗೆಜ್ಜಿ ಇವರಿಂದ ಕೊಳಲು ವಾದನ, ಡಾ.ಪುಟ್ಟರಾಜ ಬಸವಂತ ಭಜಂತ್ರಿ ಅವರಿಂದ ಶಹನಾಯಿ ವಾದನ, ಪಂ.ಶ್ರೀಕಾAತಾಚಾರ್ಯ ಬಿದರಕುಂದಿ ಅವರಿಂದ ಉಪನ್ಯಾಸ ಸೇರಿದಂತೆ ಅಹೋರಾತ್ರಿ ಸಂಗೀತ, ಸಾಂಸ್ಕೃತಿಕ, ದಾಸವಾಹಿನಿ ಕಾರ್ಯಕ್ರಮಗಳು ಹಾಗೂ ಸಮಾರಂಭ ಜರುಗಲಿವೆ. ಬೆಳಗ್ಗೆ ಪಲ್ಲಕ್ಕಿ ಸೇವೆ, ಕಕ್ಕಡಾರತಿ ದೀಪೋತ್ಸವ ನಡೆದು, ನಂತರ ಕಾರ್ತಿಕ ಇಳಿಸಲಾಗುತ್ತದೆ.
ಫೆ..೧೬ ರಂದು ಹರಶವಿಗೆ ಹಾಗೂ ಅನ್ನಸಂತರ್ಪಣೆ, ಭೀರಲಿಂಗೇಶ್ವರ ಗೊಂಬೆಗಳ ಕುಣಿತ, ಸಂಜೆ ರಥೋತ್ಸವ ಮತ್ತು ಪ್ರಸಾದ ವಿತರಣೆ, ರಾತ್ರಿ ೮ ಗಂಟೆಗೆ ಹೊಂಡ ಪೂಜೆ ಮತ್ತು ಪಂ.ನಾರಾಯಣ ಹಿರೇಕೊಳಚಿ ಇವರಿಂದ ವಾಯಲಿನ್, ಶ್ರೀಚಿದಾನಂದ ಕುಲಕರ್ಣಿ, ಅಂತರರಾಷ್ಟಿçÃಯ ಕಲಾವಿದರು ಇಳಕಲ್ಲ ಅವರಿಂದ ನೃತ್ಯ ರೂಪಕ, ಪಂ.ಕುಮಾರ ಮರಡೂರ, ಪಂ.ಜಯತೀರ್ಥ ಮೆವುಂಡಿ ಹಾಗೂ ವಿದೂಷಿ ಸಂಗೀತಾ ಕಟ್ಟಿ ಕುಲಕರ್ಣಿ ಗಾಯನ ನಡೆಯಲಿದೆ. ಪಂ.ರಾಜೇAದ್ರ ನಾಕೋಡ ಅವರ ತಬಲಾ ಸೋಲೋ ಜರುಗಲಿದೆ.
ಇನ್ನು – ಫೆ.೧೬ ರಂದು ರಾತ್ರಿ ಅಕ್ಕ ಅಪರಂಜಿ- ತಂಗಿ ಗುಲಗಂಜಿ ನಾಟಕ ಪ್ರದರ್ಶನ ನಡೆಯಲಿದೆ, – ಫೆ.೧೭ ರಂದು ಸಂಜೆ ೪ ಗಂಟೆಗೆ ಹಾಗೂ ಜಂಗೀ ಕುಸ್ತಿಗಳು ಜರುಗುವವು, ಅದೇ ದಿನ ರಾತ್ರಿ ೧೦-೩೦ ಗಂಟೆಗೆ ತವರಿಗೆ ಬಂದ ತಂಗಿ ನಾಟಕ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಕಾರ್ತಿಕೋತ್ಸವದ ಅಂಗವಾಗಿ ಫೆ..೧೫ ರಂದು ದೇವಸ್ಥಾನದ ಆವರಣದಲ್ಲಿ ಆರೋಗ್ಯ ತಪಾಸಣೆ ಶಿಬಿರ ಬೆಳಗ್ಗೆ ೧೧.೩೦ ರಿಂದ ಜರುಗಲಿದೆ ಎಂದು ಯಲಗೂರೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಂತ ಓಂಕಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.