ಫೆ.೧೫ ರಂದು ಸಂತ ಸೇವಾಲಾಲ ಜಯಂತಿ

blank

ಬಾಗಲಕೋಟೆ: ಜಿಲ್ಲೆಯಲ್ಲಿ ಸಂತ ಸೇವಾಲಲ ಜಯಂತಿಯನ್ನು ಅದ್ದೂರಿಯಾಗಿ ಫೆ.೧೫ ರಂದು ಆಚರಿಸಲು ನಿರ್ಧರಿಸಲಾಗಿದೆ ಎಂದು ಬಂಜಾರ ಸಮುದಾಯದ ಮುಖಂಡ ರಾಜು ಲಮಾಣಿ ಹೇಳಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ವರ್ಷವೂ ಸಂತ ಸೇವಾಲಾಲ ಜಯಂತಿ ನಿಮಿತ್ತ ಪ್ರತಿ ತಾಂಡಾಗಳಲ್ಲಿ ವೃತ, ಕೀರ್ತನೆ, ಭಜನೆ ನಡೆಯುತ್ತಿದೆ. ಇನ್ನೂ ಅಯ್ಯಪ್ಪ ಮಾಲಾಧಾರಿಗಳ ಮಾದರಿಯಲ್ಲಿ ಬಂಜಾರ ಸಮುದಾಯದವರು ಮಾಲಾಧಾರಿ ಧರಿಸಿದ್ದು ಫೆ.೧೫ ರಂದು ನೆಡಯುವ ಜಯಂತಿ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗದಿಂದ ಭಾಗವಹಿಸಲಿದ್ದಾರೆ ಎಂದರು.

ಜಯ0ತಿ ಅಂಗವಾಗಿ ನವನಗರದ ಜಿಲ್ಲಾಡಳಿತ ಭವನದಿಂದ ಸಕಲ ವಾಧ್ಯಗಳೊಂದಿಗೆ ಆರಂಭಗೊಳ್ಳುವ ಮೆರವಣಿಗೆ ನವನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ನಂತರ ನವನಗರದ ಕಲಾಭವನಕ್ಕೆ ತಲುಪಿ ವೇದಿಕೆಯ ಕಾರ್ಯಕ್ರಮವಾಗಿ ಮಾರ್ಪಡಲಿದೆ ಎಂದು ತಿಳಿಸಿದರು.

ಮುಖಂಡ ಮೋತಿಲಾಲ ಲಮಾಣಿ ಮಾತನಾಡಿ, ಬಂಜಾರ ಸಮುದಾಯದವರನ್ನು ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಜಾಗೃತಿ ಮೂಡಿಸುವ ಸಲುವಾಗಿ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಮುಖಂಡರಾದ ಸುಭಾಸ ಲಮಾಣಿ, ತುಕರಾಮ ರಾಠೋಡ ಇದ್ದರು.

Share This Article

ಜ್ಯೋತಿಷ್ಯದ ಪ್ರಕಾರ ಅಂಗೈ ತುರಿಕೆ ಏನನ್ನು ಸೂಚಿಸುತ್ತೆ ಗೊತ್ತಾ..? ಶುಭವೋ..ಅಶುಭವೋ devotional

devotional: ಕಣ್ಣು ಮಿಟುಕಿಸುವುದು, ತುಟಿಗಳು ನಡುಗುವುದು ಮತ್ತು ಕಣ್ಣು ರೆಪ್ಪೆಗಳು ಮಿಟುಕಿಸುವುದು ಮುಂತಾದ ಶಕುನಗಳನ್ನು ಅನುಸರಿಸುತ್ತಾರೆ.…

ಸಿಹಿಯಾದ, ರಸಭರಿತ ಕಲ್ಲಂಗಡಿ ಹಣ್ಣನ್ನು ಆಯ್ಕೆ ಮಾಡೋದು ಹೇಗೆ? ಈ ಸಿಂಪಲ್​ ಟ್ರಿಕ್ಸ್​ ಫಾಲೋ ಮಾಡಿದ್ರೆ ಸಾಕು! Watermelon

Watermelon : ಎಲ್ಲಡೆ ಬೇಸಿಗೆ ಆರಂಭವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸುಡುವ ಬಿಸಿಲಿನಿಂದಾಗಿ…

ಪುರುಷರಿಗಿಂತ ಮಹಿಳೆಯರ ಮೇಲೆಯೇ ಮದ್ಯಪಾನದ ಎಫೆಕ್ಟ್​ ಜಾಸ್ತಿ! ಅಚ್ಚರಿಯ ಕಾರಣ ಹೀಗಿದೆ… Alcohol

Alcohol : ಇತ್ತೀಚಿನ ದಿನಗಳಲ್ಲಿ ಮದ್ಯ ಮತ್ತು ಸಿಗರೇಟ್ ಪುರುಷರಿಗೆ ಮಾತ್ರ ಸೀಮಿತವಾಗಿಲ್ಲ. ಮಹಿಳೆಯರೂ ಸಹ…