ಫೆಡ್ ಕಪ್​ನಲ್ಲಿ ಭಾರತಕ್ಕೆ 4ನೇ ಸ್ಥಾನ

ಅಸ್ತಾನ(ಕಜಾಕ್​ಸ್ತಾನ): ಕ್ಲಾಸಿಫಿಕೇಷನ್ ಪಂದ್ಯದಲ್ಲಿ ದಕ್ಷಿಣ ಕೊರಿಯಾ ವಿರುದ್ಧ 1-2 ಅಂತರದಲ್ಲಿ ಸೋಲು ಕಂಡ ಭಾರತ ತಂಡ ಫೆಡ್ ಕಪ್ ಮಹಿಳಾ ಟೆನಿಸ್ ಟೂರ್ನಿಯಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟಿತು. ಪ್ರಮುಖ ಆಟಗಾರ್ತಿ ಕರ್ವನ್ ಕೌರ್ ಥಂಡಿ ಗಾಯಗೊಂಡಿದ್ದು ಪಂದ್ಯದಲ್ಲಿ ಭಾರತಕ್ಕೆ ಹಿನ್ನಡೆಯಾಯಿತು.

ಭಾರತ ತಂಡದ ನಾಯಕ ವಿಶಾಲ್ ಉಪ್ಪಾಲ್, ಥಂಡಿ ಬದಲಾಗಿ ರಾಷ್ಟ್ರೀಯ ಚಾಂಪಿಯನ್ ಮಹಕ್ ಜೈನ್​ಗೆ ಫೆಡ್ ಕಪ್ ಪದಾರ್ಪಣೆಯ ಅವಕಾಶ ನೀಡಿದರು. ಹೋರಾಟದ ಆಟವಾಡಿದರೂ ಮಹಕ್ ಜೈನ್ 2-6, 6-3, 1-6 ರಿಂದ ನಾ ರಿ ಕಿಮ್ೆ ಶರಣಾದರು. ಆ ಬಳಿಕ ಅಂಕಿತಾ ರೈನಾ 1 ಗಂಟೆ 18 ನಿಮಿಷದ ಹೋರಾಟದಲ್ಲಿ ಸುನಾಮ್ ಜಿಯಾಂಗ್​ರನ್ನು 6-3, 6-3ರಿಂದ ಸೋಲಿಸಿ ಸಮಬಲಕ್ಕೆ ಕಾರಣರಾಗಿದ್ದರು. ಆದರೆ ಡಬಲ್ಸ್ ಪಂದ್ಯದಲ್ಲಿ ಅಂಕಿತಾ ಹಾಗೂ ಪ್ರಾರ್ಥನಾ ಥೊಂಬಾರೆ ಜೋಡಿ 4-6, 4-6 ರಿಂದ ಕೊರಿಯಾದ ಸು ಜೀಯಾಂಗ್ ಹಾಗೂ ಕಿಮ್ ಜೋಡಿಗೆ ಸೋತು ನಿರಾಸೆ ಕಂಡಿತು. -ಏಜೆನ್ಸೀಸ್

Leave a Reply

Your email address will not be published. Required fields are marked *