ಫೆಂಗಲ್‌ನಿಂದ ಬೆಳೆ ರಕ್ಷಣೆಗೆ ಮಾರ್ಗೋಪಾಯ ತಿಳಿಸಿ

blank

ಚಿತ್ರದುರ್ಗ: ಫೆಂಗಲ್ ಚಂಡಮಾರುತದಿಂದ ಹಿಂಗಾರು ಕಡಲೆ ಮತ್ತಿತರ ಬೆಳೆಗಳಿಗೆ ತೊಂದರೆಯಾಗದಂತೆ ರೈತರಿಗೆ ಸೂಕ್ತ ಸಲಹೆ ಕೊಡಬೇಕು ಎಂದು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ತಾಪಂ ಕಚೇರಿಯಲ್ಲಿ ಸೋಮವಾರ ತುರುವನೂರು ಹೋಬಳಿಯ ಆರು ಗ್ರಾಪಂಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಪ್ರಾಕೃತಿಕ ವಿಕೋಪಗಳಿಂದಾಗುವ ಬೆಳೆನಾಶಕ್ಕೆ ಸರ್ಕಾರ ಪರಿಹಾರ ಕೊಟ್ಟರೂ, ರೈತರಿಗೆ ಆದ ನಷ್ಟವನ್ನು ಸಂಪೂರ್ಣ ಭರಿಸಲಾಗದು. ಆದ್ದರಿಂದ ಚಂಡಮಾರುತದಿಂದ ಬೆಳೆಗಳಿಗೆ ತೊಂದರೆಯಾಗದಂತೆ ಕೃಷಿ ವಿಜ್ಞಾನಿಗಳ ನೆರವಿನೊಂದಿಗೆ, ಸೂಕ್ತ ಔಷಧೋಪಚಾರಕ್ಕೆ ಸಲಹೆ ನೀಡಬೇಕು. ಇಲಾಖೆಯಿಂದ ಅಗತ್ಯ ಔಷಧ ಪೂರೈಸಲು ಕ್ರಮ ವಹಿಸಬೇಕು ಎಂದು ತಿಳಿಸಿದರು.
ಎಸ್‌ಎಸ್‌ಸಿಇಪಿ, ಟಿಎಸ್‌ಪಿ ಯೋಜನೆಯಡಿ ಕೃಷಿ ಉಪಕರಣಗಳಿಗೆ ಅಧಿಕ ಬೇಡಿಕೆ ಇದೆ. ಆದರೆ, ಅನುದಾನದ ಕೊರತೆ ಇದೆ. ಸಾಮಾನ್ಯ ವರ್ಗದವರ ಕೋಟಾದಡಿ ಬೇಡಿಕೆ ಕಡಿಮೆ ಇದೆ. ಕೃಷಿ ಉಪಕರಣಗಳ ಖರೀದಿಗೆಂದು ಪರಿಶಿಷ್ಟ ಜಾತಿ,ಪಂಗಡದ ಫಲಾನುಭವಿಗಳಿಗೆ ಶೇ.90 ಸಹಾಯಧನ ಹಾಗೂ ಸಾಮಾನ್ಯ ವರ್ಗದವರಿಗೆ ಶೇ.50 ಅನುದಾನ ಕೊಡಲಾಗುತ್ತದೆ ಎಂದು ಕೃಷಿ ಅಧಿಕಾರಿ ತಿಳಿಸಿದರು.
ಅನುದಾನ ಹೆಚ್ಚಾದರೆ ಎಸ್‌ಎಸ್‌ಸಿಇಪಿ, ಟಿಎಸ್‌ಪಿಯಡಿ ಹೆಚ್ಚಿನ ಸಂಖ್ಯೆಯ ಅರ್ಹ ಫಲಾನುಭವಿಗಳಿಗೆ ನೆರವು ದೊರಕಲಿದೆ ಎಂದ ಶಾಸಕರು, ಅಧಿಕ ಮಳೆಯಿಂದ ಬೆಳೆ ಕಳೆದುಕೊಂಡಿರುವ ಎಲ್ಲ ರೈತರಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಗಮನ ಹರಿಸಬೇಕೆಂದು ತಾ ಕೀತು ಮಾಡಿದರು.
ಶುದ್ಧ ಕುಡಿವ ನೀರು ಘಟಕಗಳ ನಿರ್ವಹಣೆ ಕುರಿತಂತೆ ತಾಪಂ ಸಭೆಯಲ್ಲಿ ಪ್ರಗತಿ ಪರಿಶೀಲಿಸಿ ತಮಗೆ ವರದಿ ಕೊಡುವಂತೆ ಇಒ ರವಿಕುಮಾರ್‌ಗೆ ನಿರ್ದೇಶಿಸಿದರು.
ಕಳೆದ 3 ವರ್ಷಗಳಿಂದ ಖಾಲಿ ಇರುವ ತುರುವನೂರು ಪಶು ವೈದ್ಯ ಆಸ್ಪತ್ರೆಗೆ ಕೂಡಲೇ ವೈದ್ಯರನ್ನು ನಿಯೋಜಿಸಬೇಕು. ದೇವರ ಎತ್ತುಗಳ ನಿರ್ವಹಣೆಗೆ ಡಿಸೆಂಬರ್ ಒಳಗೆ ಟ್ರಸ್ಟ್‌ಗಳನ್ನು ರಚಿಸುವಂತೆ ಪಶು ವೈದ್ಯಕೀಯ ಸೇವಾ ಇಲಾಖೆ ಅಧಿಕಾರಿಗೆ ಸೂಚಿಸಿದರು.
ಚಳ್ಳಕೆರೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕೌಶಲಾಭಿವೃದ್ಧಿ ಕೇಂದ್ರ ಆರಂಭಿಸಲು ವಿಟಿಯು ಜತೆ ಒಪ್ಪಂದವಾಗಿದೆ ಎಂದರು. ತೋಟಗಾರಿಕೆ, ಶಿಕ್ಷಣ ಮತ್ತಿತರ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಯಿತು. ಎಸಿ ಎಂ. ಕಾರ್ತಿಕ್,ಜಿಪಂ ಡಿಎಸ್ ಕೆ. ತಿಮ್ಮಪ್ಪ, ಇಒ ರವಿಕುಮಾರ್,ನಾಗರಾಜ್ ಇದ್ದರು.

Share This Article

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits

Coconut Oil Benefits:  ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…

ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..

Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…

Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?

Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…