ಫುಲೆ ಮೊದಲ ಮಹಿಳಾ ಹೋರಾಟಗಾರ್ತಿ

ವಿಜಯವಾಣಿ ಸುದ್ದಿಜಾಲ ಚಿತ್ತಾಪುರ
ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿ. ದಮನಿತರಿಗೆ ಅಕ್ಷರ ಜ್ಞಾನ ಕೊಟ್ಟು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಅಂತೆಯೇ ಅವರನ್ನು ದೇಶದ ಮೊದಲ ಮಹಿಳಾ ಹೋರಾಟಗಾರ್ತಿ ಎನ್ನಲಾಗುತ್ತದೆ ಎಂದು ಸಮಾಜದ ಚಿಂತಕಿ ಕೆ.ನೀಲಾ ಹೇಳಿದರು.

ಪಟ್ಟಣದ ಗಂಗಾ ಪರಮೇಶ್ವರಿ ಶಿಕ್ಷಣ ಸಂಸ್ಥೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಸಾವಿತ್ರಿಬಾಯಿ ಫುಲೆ ಜಯಂತಿ ಮತ್ತು ಐವರು ಶಿಕ್ಷಕಿಯರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ಸುಧಾರಣೆ ಮತ್ತು ಬದಲಾವಣೆ ಶಿಕ್ಷಕರಿಂದ ಮಾತ್ರ ಸಾಧ್ಯ. ಆದ್ದರಿಂದ ಸಾವಿತ್ರಿಬಾಯಿ ಫುಲೆ ಅವರ ಆದರ್ಶ ಮತ್ತು ತತ್ವಸಿದ್ದಾಂತಗಳನ್ನು ತಿಳಿದುಕೊಳ್ಳುವುದು ಅವಶ್ಯಕವಾಗಿದೆ ಎಂದು ಹೇಳಿದರು.

ಶಹಾಬಾದ್ ಡಿವೈಎಸ್ಪಿ ಕೆ.ಬಸವರಾಜ, ಅಧ್ಯಕ್ಷತೆ ವಹಿಸಿದ್ದ ಕಸಾಪ ತಾಲೂಕು ಅಧ್ಯಕ್ಷ ಕಾಶೀನಾಥ ಗುತ್ತೇದಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಶಂಕ್ರಮ್ಮ ಡವಳಗಿ, ಶಿಕ್ಷಣ ಸಂಸ್ಥೆ ಆಡಳಿತಧಿಕಾರಿ ವಿಜಯಕುಮಾರ ಬಿರಾದಾರ ಮಾತನಾಡಿದರು.

ಶಿಕ್ಷಕಿಯರಾದ ಪರ್ವಿನ್ ಸುಲ್ತಾನ್, ನಿರ್ಮಲಾದೇವಿ, ಲಲಿತಾ ದೇವಿ, ಸಂತೋಷಿ, ಸುಶೀಲಾ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು.

ಪಿಎಸ್ಐ ನಟರಾಜ ಲಾಡೆ, ಬಿಆರ್ಸಿ ಮಹೇಶ ಬಡಿಗೇರ್, ಪ್ರಮುಖರಾದ ದೇವಪ್ಪ ನಂದೂರಕರ್, ಮಹ್ಮದ್ ಇಬ್ರಾಹಿಂ, ರೇಖಾ ಮನಗೋಳಿಕರ್, ಸರಸ್ವತಿ ಪಾಟೀಲ್, ಗಂಗಮ್ಮ ನಾಲವಾರ, ವೀರಪಾಕ್ಷರುದ್ರ ಬೆಣ್ಣಿ, ಮುರುಳಿ ಪಾಟೀಲ್, ಪಂಕಜಾ ಸಲಗರ್, ಸಾಯಬಣ್ಣ ಗುಡುಬಾ, ದೇವಿಂದ್ರರೆಡ್ಡಿ ದುಗನೂರ, ನಟರಾಜ ಇದ್ದರು.

ಗೌರವ ಕಾರ್ಯದರ್ಶಿ ಸಿದ್ದಲಿಂಗ ಬಾಳಿ ನಿರೂಪಣೆ ಮಾಡಿದರು. ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು. ಕಾಶೀರಾಯ ಕಲಾಲ್ ವಂದಿಸಿದರು.

ಕಾರ್ಯದರ್ಶಿ ಸಿದ್ದಲಿಂಗ ಬಾಳಿ ನಿರೂಪಣೆ ಮಾಡಿದರು. ಜಗದೇವ ದಿಗ್ಗಾಂವಕರ್ ಸ್ವಾಗತಿಸಿದರು. ಕಾಶೀರಾಯ ಕಲಾಲ್ ವಂದಿಸಿದರು.

2 ಶತಮಾನದ ಹಿಂದೆಯೇ ಅಂದಿನ ತಳಸಮುದಾಯದ ಜನರಿಗೆ, ಮಹಿಳೆಯರಿಗೆ ಶಿಕ್ಷಣದ ಬೆಳಕು ವಿಸ್ತರಿಸಿದ ಸಾವಿತ್ರಿಬಾಯಿ ಫುಲೆ ಜನ್ಮ ದಿನವನ್ನು ಶಿಕ್ಷಕಿಯರ ದಿನ ಅಥವಾ ಶಿಕ್ಷಣ ದಿನ ಎಂದು ಘೋಷಿಸಬೇಕು ಎಂಬ ಬೇಡಿಕೆ ಇದೆ. ಇದಕ್ಕೆ ಎಲ್ಲರೂ ಧ್ವನಿಗೂಡಿಸಿ ಸರ್ಕಾರದ ಮೇಲೆ ಒತ್ತಡ ಹಾಕುವ ಕೆಲಸ ಮಾಡಬೇಕಿದೆ.
| ಕೆ. ನೀಲಾ, ಹೋರಾಟಗಾರ್ತಿ, ಕಲಬುರಗಿ