ಫುಡ್​ಕೋರ್ಟ್ ಸ್ಥಾಪಿಸಲು ಮನವಿ

ಶಿಕಾರಿಪುರ: ಶಿಕಾರಿಪುರದಲ್ಲಿ ಫುಡ್​ಕೋರ್ಟ್ ನಿರ್ಮಾಣ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಯಕರ್ನಾಟಕ ಸಂಘಟನೆ ಸದಸ್ಯರು ಬುಧವಾರ ತಹಸೀಲ್ದಾರ್​ಗೆ ಮನವಿ ಸಲ್ಲಿಸಿದರು.

ಸಂಘಟನೆಯ ಗೌರವಾಧ್ಯಕ್ಷ ಹುಲಗಿ ಕೃಷ್ಣ ಮಾತನಾಡಿ, ಹಳೇ ಸಂತೆ ಮೈದಾನದ ಧೂಳು ಸುತ್ತಲೂ ಇರುವ ಆಹಾರದ ಅಂಗಡಿಗಳ ಮೇಲೆ ಹಾಗೂ ಮಾಂಸದಂಗಡಿಗಳ ಮೇಲೆ ಬೀಳುತ್ತಿದೆ. ಆದ್ದರಿಂದ ಮೈದಾನಕ್ಕೆ ಕಾಂಕ್ರಿಟ್ ಹಾಕಿಸಬೇಕು ಎಂದು ಆಗ್ರಹಿಸಿದರು.

ಶಿಕಾರಿಪುರ ಪಟ್ಟಣಕ್ಕೆ ಫುಡ್​ಕೋರ್ಟ್ ಅಗತ್ಯವಿದೆ. ಬೀದಿ ಬದಿಯಲ್ಲಿ ತಿಂಡಿ ಗಾಡಿಗಳು ಇರುವುದರಿಂದ ಧೂಳು ಕೂರುತ್ತಿದೆ. ಆದ್ದರಿಂದ ಎಲ್ಲ ತಿಂಡಿ ಅಂಗಡಿಗಳು ಒಂದೆಡೆ ಸಿಗುವಂತೆ ಮಾಡಲು ಹಳೇ ಸಂತೆ ಮೈದಾನದಲ್ಲಿ ಫುಡ್​ಕೋರ್ಟ್ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.

ಪಟ್ಟಣದಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಸ್ಪೀಡ್ ಕಂಟ್ರೋಲ್ ಮಾಡಲು ಹಂಪ್​ಗಳನ್ನು ಹಾಕಬೇಕು. ಉಪಖಜಾನೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದು, ಅಧಿಕಾರಿಗಳು ಜನರಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೆ ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಮಂಜುನಾಥ, ನಜೀರ್ ಅಹ್ಮದ್, ಆನಂದ್, ಇಬ್ರಾಹಿಂ, ಪ್ರದೀಪ್, ಮಾಲತೇಶ್, ರವಿನಾಯ್ಕ, ವೀರಭದ್ರ, ರಾಕೇಶ್, ವಿನಾಯಕ, ಮಾರುತಿ, ಕಿರಣ್, ರಾಜಶೇಖರ್, ಸಂತೋಷ್ ಮತ್ತಿತರರು ಇದ್ದರು.

Leave a Reply

Your email address will not be published. Required fields are marked *