ಫುಟ್​ಪಾತ್​ನಲ್ಲಿ ಕೊಂಡ ಉಂಗುರಕ್ಕೆ 6.5 ಕೋಟಿ

ಲಂಡನ್​: ಡೆಬ್ರಾ ಗಾಂಡರ್ಡ್ ಎಂಬ ಲಂಡನ್​ನ ಮಹಿಳೆಯೊಬ್ಬರಿಗೆ ಉಂಗುರಗಳು ಎಂದರೆ ಬಹಳ ಇಷ್ಟ. ವಜ್ರದ ಉಂಗುರ ಧರಿಸುವ ಆಸೆಯಿದ್ದರೂ ಕೊಳ್ಳುವ ಸಾಮರ್ಥ್ಯವಿಲ್ಲದ ಕಾರಣ ಅವರು 33 ವರ್ಷಗಳ ಹಿಂದೆ ರಸ್ತೆಬದಿಯ ಅಂಗಡಿಯಲ್ಲಿ 850 ರೂ. ಕೊಟ್ಟು ಉಂಗುರ ಖರೀದಿಸಿದ್ದರು. ಇತ್ತೀಚೆಗೆ ಅದನ್ನು ಮಾರಾಟ ಮಾಡಲು ಅಂಗಡಿಗೆ ಹೋಗಿದ್ದ ಸಂದರ್ಭದಲ್ಲಿ ಉಂಗುರದಲ್ಲಿರುವುದು ಅಸಲಿ ವಜ್ರ ಎಂದು ಗೊತ್ತಾಗಿದೆ. ಇದು ಹಳೆಯ ಕಾಲದ ಉಂಗುರವಾದ್ದರಿಂದ ಪ್ರದರ್ಶನಕ್ಕೆ ಇಟ್ಟು ಮಾರಾಟ ಮಾಡುವ ಸಲಹೆಯ ಮೇರೆಗೆ ಡೆಬ್ರಾ ಹಾಗೆಯೇ ಮಾಡಿದರು. ಲಂಡನ್​ನ ವ್ಯಕ್ತಿಯೊಬ್ಬರು 6.5 ಕೋಟಿ ರೂ.ಗೆ ಉಂಗುರ ಖರೀದಿಸಿದ್ದು, ಡೆಬ್ರಾ ಅವರಿಗೆ ತೆರಿಗೆ ಕಡಿತವಾಗಿ 4.5 ಕೋಟಿ ರೂ. ದೊರೆತಿದೆ.