ಫಲಾನುಭವಿಗೆ ಹಕ್ಕುಪತ್ರ ವಿತರಣೆ

ಹೊನ್ನಾವರ: ತಾಲೂಕಿನ ಹೆರಂಗಡಿ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಣ್ಯ ಭೂಮಿಯಲ್ಲಿ ಬಹುವರ್ಷಗಳಿಂದ ಮನೆ ನಿರ್ವಿುಸಿಕೊಂಡು ವಾಸವಿದ್ದ ಕುಟುಂಬಗಳಿಗೆ ಸರ್ಕಾರದ ಆದೇಶದಂತೆ ಸೋಮವಾರ ಹಕ್ಕುಪತ್ರ ವಿತರಿಸಲಾಯಿತು.

ಹಕ್ಕುಪತ್ರ ವಿತರಿಸಿದ ಶಾಸಕ ಸುನೀಲ ನಾಯ್ಕ ಮಾತನಾಡಿ, ಅನೇಕ ವರ್ಷಗಳ ಪ್ರಯತ್ನ ಇಂದು ಸಾಕಾರಗೊಂಡಿದೆ. ನಮ್ಮ ಜಿಲ್ಲೆ ಶೇ. 85 ರಷ್ಟು ಅರಣ್ಯ ಭೂಮಿ ಹೊಂದಿದ್ದು, ಹೆಚ್ಚಿನವರು ಅರಣ್ಯ ಇಲಾಖೆ ಜಾಗದಲ್ಲಿ ವಾಸವಾಗಿದ್ದಾರೆ. ಸರ್ಕಾರ ಜಾಗ ಮಂಜೂರಿ ಮಾಡಿದ್ದು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ತಹಸೀಲ್ದಾರ್ ವಿವೇಕ ಶೆಣ್ವೆ, ಗ್ರಾಪಂ ಅಧ್ಯಕ್ಷೆ ರಾಜೇಶ್ವರಿ ನಾಯ್ಕ, ಸದಸ್ಯರಾದ ಗಜಾನನ ಹೆಗಡೆ, ಚಂದ್ರಕಾಂತ ಕೊಚರೇಕರ್, ಮಂಜುನಾಥ ನಾಯ್ಕ, ಹತೀಜಾ ಹುಸೇನ್ ಮೋಕ್ತೆಸರ್, ಮೇರಿಬೋನಿಪಾ, ಜಿ.ಟಿ. ಹಳ್ಳೇರ, ಕಂದಾಯ ನಿರೀಕ್ಷಕ ಮಂಜುನಾಥ ನಾಯ್ಕ, ಪಿಡಿಒ ಉದಯ ಬಾಂದೇಕರ್ ಉಪಸ್ಥಿತರಿದ್ದರು.