ಫಲಾನುಭವಿಗಳಿಗೆ ಆಶ್ರಯ ಒದಗಿಸಿ

ಗದಗ:ಆಶ್ರಯ ಯೋಜನೆಯಡಿ 404 ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡಬೇಕು ಎಂದು ತಾಲೂಕಿನ ಬಳಗಾನೂರು ಗ್ರಾಮಸ್ಥರು ಕರ್ನಾಟಕ ರಕ್ಷಣಾ ವೇದಿಕೆ ನೇತೃತ್ವದಲ್ಲಿ ನಗರದ ಜಿಲ್ಲಾಡಳಿತ ಭವನ ಎದುರು ಬುಧವಾರ ಪ್ರತಿಭಟಿಸಿದರು.

ಗ್ರಾಪಂ ವತಿಯಿಂದ ಕಳೆದ ಕೆಲ ವರ್ಷಗಳ ಹಿಂದೆ ನಿರ್ಮಾಣ ಮಾಡಿದ್ದ 404 ಮನೆಗಳನ್ನು ಈವರೆಗೂ ಫಲಾನುಭವಿಗಳಿಗೆ ಹಂಚಿಕೆ ಮಾಡಿಲ್ಲ. ಈ ಹಿಂದೆ ನಡೆದ ಗ್ರಾಪಂ ಸಭೆಯಲ್ಲಿ ಫಲಾನುಭವಿಗಳ ಆಯ್ಕೆ ನಡೆದಿದ್ದರೂ ರಾಜಕೀಯ ಹಸ್ತಕ್ಷೇಪದಿಂದ ಫಲಾನುಭವಿಗಳ ಆಯ್ಕೆ ಅಪೂರ್ಣಗೊಂಡಿದೆ. ಇದರಿಂದಾಗಿ ಅರ್ಹರಿಗೆ ಮನೆಗಳು ದೊರೆಯದೆ, ಬಾಡಿಗೆ ಹಾಗೂ ಮುರುಕಲು ಗುಡಿಸಲುಗಳಲ್ಲಿ ದಿನಕಳೆಯುವಂತಾಗಿದೆ ಎಂದು ದೂರಿದರು.

ಈ ಕುರಿತು ಜಿಲ್ಲಾಧಿಕಾರಿಗಳು ಗಮನ ಹರಿಸಿ, ತಕ್ಷಣವೇ ವಿವಾದ ಬಗೆಹರಿಸಿ ಫಲಾನುಭವಿಗಳ ಆಯ್ಕೆ ಪಟ್ಟಿ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. ಕರವೇ ಜಿಲ್ಲಾಧ್ಯಕ್ಷ ಹನುಮಂತ ಅಬ್ಬಿಗೇರಿ, ನಿಂಗಪ್ಪ ಹೊನ್ನಾಪೂರ, ಆಶಾ ಜೂಲಗುಡ್ಡ, ಗೀತಾ ಕಾಳಗಿ, ಮಾಲತೇಶ ಎಸ್.ಎಂ., ತುಳಸಪ್ಪ ಎಚ್., ಗೀತಾ ಮುಂಡರಗಿ, ಪ್ರಭಾವತಿ ಅಂಗಡಿಮಠ, ಮಾಂತೇಶ ತೋಟದ, ಸಂಕನಗೌಡ ಪಾಟೀಲ, ನಿಂಗನಗೌಡ ಮಾಲಿಪಾಟೀಲ, ಶರಣು ಗೋಡಿ, ಹನುಮಂತ ಪೂಜಾರ, ಪ್ರಶಾಂತ ಪುರದ, ಯಲ್ಲಪ್ಪ ಭೋವಿ ಇದ್ದರು.

Leave a Reply

Your email address will not be published. Required fields are marked *