ಚಿತ್ರದುರ್ಗ: ನಗರದ ಅನೇಕ ಬಾರ್‌ಗಳ ಮೇಲೆ ನಗರಸಭೆ ಹಾಗೂ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿ, ನಿಷೇಧಿತ ಏಕ ಬಳಕೆ ಪ್ಲಾಸ್ಟಿಕ್ ಕಪ್‌ಗಳನ್ನು ವಶಕ್ಕೆ ಪಡೆದು ದಂಡ ವಿಧಿಸಿದರು.
ಮತ್ತೆ ಬಳಸಲು ಮುಂದಾದಲ್ಲಿ ಪರವಾನಗಿ ರದ್ದುಗೊಳಿಸುವ ಎಚ್ಚರಿಕೆ ಮಾಲೀಕರಿಗೆ ನೀಡಿದರು. ನಗರಸಭೆ ಪರಿಸರ ಇಂಜಿನಿಯರ್ ಜಾಫರ್, ಆರೋಗ್ಯ ನಿರೀಕ್ಷಕರಾದ ಸರಳಾ, ಭಾರತಿ, ನಾಗರಾಜ್ ಇತರರಿದ್ದರು.