ಸಿನಿಮಾ

ಪ್ಲಾಸ್ಟಿಕ್ಸ್ ತಂತ್ರಜ್ಞಾನದಲ್ಲಿ ಡಿಪ್ಲೊಮಾ ಕೋರ್ಸ್​ಗಳು

ಹುಬ್ಬಳ್ಳಿ: ಮೈಸೂರಿನಲ್ಲಿರುವ ಕೇಂದ್ರೀಯ ಪೆಟ್ರೋಕೆಮಿಕಲ್ಸ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆ (ಸಿಪೆಟ್)ಯು ನೀಡುವ ಡಿಪ್ಲೊಮಾ ಕೋರ್ಸ್​ಗಳು ಉದ್ಯೋಗ ಭರವಸೆಯನ್ನು ನೀಡುತ್ತದೆ. ಇಲ್ಲಿ ವ್ಯಾಸಂಗ ಮಾಡಿದ ಪ್ರತಿಯೊಬ್ಬ ವಿದ್ಯಾರ್ಥಿಗೂ ಉದ್ಯೋಗ ದೊರಕಿದೆ ಹಾಗೂ ಅನೇಕರು ಸ್ವಉದ್ಯೋಗ ಆರಂಭಿಸಿದ್ದಾರೆ ಎಂದು ಸಂಸ್ಥೆಯ ಸಹಾಯಕ ತಾಂತ್ರಿಕ ಅಧಿಕಾರಿ ಡಿ.ಎಲ್. ಶ್ರೀನಾಥ ತಿಳಿಸಿದರು.

ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಸಂಬಂಧ ಸುಮಾರು 350 ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದರು.

ಎಸ್​ಎಸ್​ಎಲ್​ಸಿ ಪಾಸಾದವರು 3 ವರ್ಷಗಳ ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಟೆಕ್ನಾಲಜಿ (ಡಿಪಿಟಿ) ಅಥವಾ ಡಿಪ್ಲೊಮಾ ಇನ್ ಪ್ಲಾಸ್ಟಿಕ್ಸ್ ಮೌಲ್ಡ್ ಟೆಕ್ನಾಲಜಿ (ಡಿಪಿಎಂಟಿ) ಕೋರ್ಸ್​ಗಳಿಗೆ, ಬಿಎಸ್ಸಿ ತೇರ್ಗಡೆಯಾದವರು ಎಂಎಸ್ಸಿ ಇನ್ ಪಾಲಿಮರ್ ಸೈನ್ಸ್ ಅಥವಾ ಪಿಜಿ ಡಿಪ್ಲೊಮಾ ಇನ್ ಪ್ಲಾ ಸ್ಟಿಕ್ಸ್ ಪ್ರೊಸೆಸಿಂಗ್ ಆಂಡ್ ಟೆಸ್ಟಿಂಗ್ ಕೋರ್ಸ್​ಗೆ ಪ್ರವೇಶ ಪಡೆಯಬಹುದಾಗಿದೆ. ಪ್ರತಿ ಕೋರ್ಸ್​ನಲ್ಲಿ 60 ವಿದ್ಯಾರ್ಥಿಗಳಿಗೆ ಪ್ರವೇಶಾವಕಾಶ ಇರುತ್ತದೆ ಎಂದು ಹೇಳಿದರು.

ಅರ್ಜಿ ಸಲ್ಲಿಸಲು ಮೇ 28 ಕೊನೆಯ ದಿನಾಂಕವಾಗಿದೆ. ಪ್ರವೇಶಕ್ಕೆ ಅಖಿಲ ಭಾರತ ಮಟ್ಟದಲ್ಲಿ ಪ್ರವೇಶ ಪರೀಕ್ಷೆ (ಸಿಎಟಿ) ನಡೆಯಲಿದೆ. ಸಿಎಟಿ ದಿನಾಂಕ ನಿಗದಿಯಾಗಿಲ್ಲ. ನಮ್ಮಲ್ಲಿ ಪ್ರವೇಶ ಪಡೆದವರಿಗೆ ವಸತಿ ನಿಲಯ ಸೌಲಭ್ಯವಿದೆ. ಪ್ರತಿ ಸೆಮಿಸ್ಟರ್​ಗೆ 20 ಸಾವಿರ ರೂ. ಶುಲ್ಕವಿರಲಿದೆ. ಎಸ್​ಸಿ, ಎಸ್​ಟಿ, ಒಬಿಸಿ ವಿದ್ಯಾರ್ಥಿಗಳಿಗೆ ಕೇಂದ್ರ ಸರ್ಕಾರದ ಶಿಷ್ಯವೇತನ ಸಿಗಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ತಾಂತ್ರಿಕ ಅಧಿಕಾರಿ ಲಕ್ಷ್ಮಣ ಇದ್ದರು.

Latest Posts

ಲೈಫ್‌ಸ್ಟೈಲ್