More

  ಪ್ರೇಮ ಪ್ರಕರಣ ಯುವಕನ ಕೊಲೆ

  ಬಸವಕಲ್ಯಾಣ: ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಜಗಳ ಯುವಕನೊಬ್ಬನ ಕೊಲೆಯಲ್ಲಿ ಅಂತ್ಯವಾದ ಘಟನೆ ಬುಧವಾರ ತಾಲೂಕಿನ ಪ್ರೇಮಸಿಂಗ್ ತಾಂಡಾವೊಂದರಲ್ಲಿ ನಡೆದಿದೆ.

  ಮಾರುತಿ ಖೂಬಾ ಚಿನ್ನಿರಾಠೋಡ್ (21) ಕೊಲೆಯಾದ ಯುವಕ. ಈತ ಹಿಂದೆ ಪ್ರೇಮಸಿಂಗ್ ತಾಂಡಾದ ಯುವತಿಯೊಬ್ಬಳ ಪ್ರೇಮದಲ್ಲಿ ಸಿಲುಕಿದ್ದ. ಮಾರುತಿಗೆ ಕಳೆದ ಕೆಲ ತಿಂಗಳ ಹಿಂದೆ ಬೇರೆ ಯುವತಿಯೊಂದಿಗೆ ಮದುವೆಯಾಗಿತ್ತು. ಹೀಗಾಗಿ ಈತನಿಂದ ದೂರವಾದ ಪ್ರೇಯಸಿ ಹಿರನಾಗಾಂವ್ ಗ್ರಾಮದ ಸುಭಾಷ ನಾಗೂರೆಯೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಳು ಎನ್ನಲಾಗಿದೆ.

  ಮಾರುತಿ ಬುಧವಾರ ಸಂಜೆ ಹಳೇ ಪ್ರೇಯಸಿ ಮನೆಗೆ ಆಗಮಿಸಿದ್ದ ವೇಳೆ ಯುವತಿ ಕುಟುಂಬಸ್ಥರು ಪ್ರಿಯಕರ ಸುಭಾಷ ನಾಗೂರೆ ಜತೆ ಸೇರಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ತಂತಿಯಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಕೊಲೆ ವಿಷಯ ಗೊತ್ತಾಗುತಿದ್ದಂತೆ ರೊಚ್ಚಿಗೆದ್ದ ತಾಂಡಾದ ಸುಮಾರು 25 ಜನರ ಗುಂಪು ಕಿಡಿಗೇಡಿಗಳ ಮೇಲೆ ದಾಳಿ ನಡೆಸಿ ಮನ ಬಂದಂತೆ ಥಳಿಸಿದ್ದಾರೆ. ಘಟನೆಯಲ್ಲಿ ಗಾಯಗೊಂಡ ಮೂವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  ಸುದ್ದಿ ತಿಳಿದ ಹುಮನಾಬಾದ್ ಎಎಸ್ಪಿ ಶಿವಾಂಶು ರಾಜಪುತ, ಮಂಠಾಳ ಸಿಪಿಐ ರಘುವೀರಸಿಂಗ್ ಠಾಕೂರ್, ಪಿಎಸ್ಐ ಬಸಲಿಂಗಪ್ಪ ನೇತೃತ್ವದ ಪೊಲೀಸ್ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಈ ಕುರಿತು ಮುಡಬಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ಹಾಗೂ ನಂತರ ನಡೆದ ಹಲ್ಲೆ ಘಟನೆಗೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts