Friday, 14th December 2018  

Vijayavani

ಚಾಮರಾಜನಗರದಲ್ಲಿ ವಿಷವಾದ ಮಾರಮ್ಮನ ಪ್ರಸಾದ- ನಾಲ್ವರ ಸಾವು-40ಕ್ಕೂ ಹೆಚ್ಚು ಭಕ್ತರು ಅಸ್ವಸ್ಥ, ಜಿಲ್ಲಾಧಿಕಾರಿ ಭೇಟಿ        ರಾಜಸ್ಥಾನ ಸಿಎಂ ಆಗಿ ಆಶೋಕ್ ಗೆಹ್ಲೋಟ್, ಯುವ ನಾಯಕ ಸಚಿನ್ ಪೈಲಟ್​​ಗೆ ಡಿಸಿಎಂ ಪಟ್ಟ- ಕಾಂಗ್ರೆಸ್​ನಿಂದ ಅಧಿಕೃತ ಘೋಷಣೆ        ಚೆನ್ನೈನ ರೇಲಾ ಆಸ್ಪತ್ರೆಗೆ ಭೇಟಿ ನೀಡಿ ಸಿದ್ಧಗಂಗಾ ಶ್ರೀಗಳ ಆರೋಗ್ಯ ವಿಚಾರಿಸಿದ ಬಿಎಸ್​ವೈ- ಸಿಎಂ ಎಚ್​ಡಿಕೆ ಚೆನ್ನೈಗೆ ಪ್ರಯಾಣ        ಭದ್ರತೆಗಾಗಿ ರಫೇಲ್ ಖರೀದಿ-ಸುಪ್ರೀಂಕೋರ್ಟ್ ತೀರ್ಪಿನಿಂದ ಭ್ರಮನಿರಸನ-ರಾಗಾ ವಿರುದ್ಧ ಹಾಲಿ ಮಾಜಿ ರಕ್ಷಣಾ ಸಚಿವರ ಕಿಡಿ        ನಾಲ್ಕು ದಿನದಲ್ಲಿ ಎಲ್ಲ ಸರಿಹೋಗುತ್ತೆ-ಪ್ರಯಾಣಿಕರಿಗೆ ಯಾವುದೇ ಆತಂಕ ಬೇಡ-ಪಿಲ್ಲರ್ ಬಿರುಕಿಗೆ BMRCL ಎಂಡಿ ಸ್ಪಷ್ಟನೆ        ನನಗೂ ಸಚಿವೆಯಾಗುವ ಆಸೆ ಇದೆ- ಅಂತರಂಗ ತೆರೆದಿಟ್ಟ ಲಕ್ಷ್ಮೀ ಹೆಬ್ಬಾಳ್ಕರ್- ಕೈ ಸಚಿವಾಕಾಂಕ್ಷಿಗಳ ಪಟ್ಟಿಗೆ ಈಗ ಹೊಸ ಸೇರ್ಪಡೆ       
Breaking News

ಪ್ರೇಮ ವೈಫಲ್ಯಕ್ಕೆ ಸೆಲೆಬ್ರೇಷನ್ ಗೀತೆ

Saturday, 11.08.2018, 3:03 AM       No Comments

ಬೆಂಗಳೂರು: ‘ಸಿಂಪಲ್’ ಸುನಿ ಮೊದಲಿನಿಂದಲೂ ತಾವೆಷ್ಟು ಭಿನ್ನ ನಿರ್ದೇಶಕ ಎಂಬುದನ್ನು ರುಜುವಾತು ಪಡಿಸಿಕೊಂಡೇ ಬಂದಿದ್ದಾರೆ. ಈ ಬಾರಿಯೂ ಅವರು ಹೊಸ ಕಾನ್ಸೆಪ್ಟ್​ವೊಂದನ್ನು ಪರಿಚಯಿಸಿದ್ದಾರೆ. ಇದುವರೆಗೂ ಕನ್ನಡ ಸಿನಿಮಾಗಳಲ್ಲಿ ಲವ್ ಫೇಲ್ಯೂರ್ ಆದಾಗ ಎಣ್ಣೆ ಸಾಂಗ್, ಪ್ಯಾಥೋ ಸಾಂಗ್ ಇಡುತ್ತಿದ್ದರು. ಆದರೆ, ‘ಬಜಾರ್’ ಸಿನಿಮಾದಲ್ಲಿ ಪ್ರೀತಿ ಸೋತಾಗ ಸೆಲೆಬ್ರೇಷನ್ ಸಾಂಗ್ ಇಟ್ಟಿದ್ದಾರೆ. ಪ್ರೀತಿ ಕಳೆದುಕೊಂಡ ನಾಯಕ ಕಂಠಪೂರ್ತಿ ಮದ್ಯ ಕುಡಿದು, ಫ್ಯಾಥೋ ಮೂಡ್​ನಲ್ಲಿ ಹಾಡುವ ಹಾಡುಗಳು ಕನ್ನಡದಲ್ಲಿ ಸಾಕಷ್ಟು ಬಂದುಹೋಗಿವೆ. ಅಂಥ ಹಾಡುಗಳಿಗೆ ಒಳ್ಳೆಯ ಪ್ರತಿಕ್ರಿಯೆ ಸಹ ಸಿಕ್ಕಿದೆ. ಆದರೆ, ಪ್ರೇಮ ವೈಫಲ್ಯಕ್ಕೆ ಫ್ಯಾಥೋ ಹಾಡಿನ ಬದಲು ಸಂಭ್ರಮಿಸುವ ಹಾಡನ್ನು ಸೇರಿಸಿದ್ದಾರೆ ಸುನಿ. ‘ಆ ಮಿನುಗುವ ಕಣ್ಣಲ್ಲಿ ನನ್ನೇ ನೋಡಿದ್ದೆ.. ಆ ಕಣ್ಣಲಿ ನನ್ನ ಜೀವವ ಮುಡಿಪಿಟ್ಟೆ..’ ಎಂದು ಶುರುವಾಗುವ ಈ ಹಾಡನ್ನು ವಿಜಯ್ ಪ್ರಕಾಶ್ ಮತ್ತು ಸಾಧು ಕೋಕಿಲ ಹಾಡಿದ್ದು, ಸುನಿ ಸಾಹಿತ್ಯ ಬರೆದಿದ್ದಾರೆ. ಚಿತ್ರದಲ್ಲಿ ನಾಯಕನಾಗಿ ಧನ್​ವೀರ್ ನಟಿಸಿದ್ದು, ಅವರಿಗೆ ಜೋಡಿಯಾಗಿ ಅದಿತಿ ಪ್ರಭುದೇವ್ ಬಣ್ಣ ಹಚ್ಚಿದ್ದಾರೆ. ಶುಕ್ರವಾರ (ಆ.10) ಸಂಜೆ ಈ ಸೆಲೆಬ್ರೇಷನ್ ಹಾಡಿನ ಲಿರಿಕಲ್ ವಿಡಿಯೋ ಹಾಡು ಬಿಡುಗಡೆಯಾಗಿದೆ.

ಪ್ರೇಮ ವೈಫಲ್ಯ ಆದವರಿಗೆ ಫೀಲಿಂಗ್ ಸಾಂಗ್, ಎಣ್ಣೆ ಸಾಂಗ್, ಸಿಂಪಥಿ ಮತ್ತು ಫ್ಯಾಥೋ ಹಾಡುಗಳಿವೆ. ಆದರೆ, ಸೆಲೆಬ್ರೇಷನ್ ಸಾಂಗ್ ಇಲ್ಲ. ಹಾಗಾಗಿ ‘ಬಜಾರ್’ ಮೂಲಕ ಅಂಥ ಒಂದು ಗೀತೆ ನೀಡಿದ್ದೇವೆ.

| ಸುನಿ ನಿರ್ದೇಶಕ

Leave a Reply

Your email address will not be published. Required fields are marked *

Back To Top