ಪ್ರೀತಿ ಹಂಚುವ ಹಬ್ಬ

ನಿಸರ್ಗದ ದಿವ್ಯಶಕ್ತಿಗಳ ಆರಾಧನೆಯಲ್ಲಿ ಸೂರ್ಯನಿಗೇ ಪ್ರಾಶಸ್ತ್ಯ ಜಗದ ಎಲ್ಲ ಬೆಳವಣಿಗೆಗೆ ಆತನೇ ಕಾರಣ. ದಿನಕರ ಮಕರ ವೃತ್ತಕ್ಕೆ ಹತ್ತಿರವಾಗುವ ಸಮಯವೇ ಸಂಕ್ರಾಂತಿ. ಇದು ಸುಗ್ಗಿಹಬ್ಬವೂ ಹೌದು. ಸುಗ್ಗಿ ಹಿಗ್ಗಿನ ಸಂಕೇತ ಮಕರ ಸಂಕ್ರಾಂತಿ.

ಧಾನ್ಯ ಲಕ್ಷ್ಮಿ ಮನೆಗೆ ಬರುವ (ಸುಗ್ಗಿ) ವೇಳೆ ಆಚರಿಸಲಾಗುವ ಸಂಕ್ರಾಂತಿ ಹಬ್ಬ ಸಮೃದ್ಧಿಯ ಸಂಕೇತ. ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಕೇರಳಗಳಲ್ಲಿ ಸಂಕ್ರಾಂತಿ ಆಚರಣೆ ಹೆಚ್ಚಿನ ಪ್ರಮಾಣದಲ್ಲಿದೆ. ಸಾಂಪ್ರದಾಯಿಕವಾಗಿ ಈ ಹಬ್ಬವು ಬೆಳೆಗಳ ಕಟಾವು ಅಥವಾ ಕೊಯ್ಲು ಮಾಡುವ ಸಮಯವನ್ನು ಸೂಚಿಸುತ್ತದೆ. ಬೆಳೆಯನ್ನು ನೀಡಿದ ಭೂತಾಯಿಗೆ, ಸಹಾಯಮಾಡಿದ ಎತ್ತುಗಳಿಗೆ, ಶಕ್ತಿ ಕೊಡುವ ಸೂರ್ಯನಿಗೆ ರೈತರು ನಮಸ್ಕರಿಸಿ, ಹುಗ್ಗಿ ತಿಂದು ಸುಗ್ಗಿ ಮಾಡುತ್ತಾರೆ. ಹೆಣ್ಣು ಮದುವೆಯಾದ ನಂತರದ ಪ್ರಥಮ ವರ್ಷ ಆಚರಿಸಲ್ಪಡುವ ಸಂಕ್ರಾಂತಿಯಂದು, ಐದು ವರ್ಷಗಳಿಗೆ ಐದು ಬಾಳೆಹಣ್ಣುಗಳನ್ನು ಐದು ಮುತೆôದೆಯರಿಗೆ ನೀಡುವ ವಾಡಿಕೆ ರಾಜ್ಯದ ಕೆಲವೆಡೆ ಇದೆ. ಪ್ರತಿವರ್ಷವೂ ಬಾಳೆಹಣ್ಣಿನ ಸಂಖ್ಯೆ ಹೆಚ್ಚುತ್ತದೆ. ಮೊದಲ ವರ್ಷ ಐದು ಬಾಳೆಹಣ್ಣಾದರೆ, ಎರಡನೇ ವರ್ಷ ಹತ್ತು, ಹೀಗೆ ಬಾಳೆಹಣ್ಣಿನ ಸಂಖ್ಯೆ ಏರುತ್ತಾ ಹೋಗುತ್ತದೆ. ಐದನೇ ವರ್ಷ, ಇಪ್ಪತೆôದು ಬಾಳೆಹಣ್ಣುಗಳನ್ನು ಐದು ಮುತೆôದೆಯರಿಗೆ ಎಳ್ಳು ಬೆಲ್ಲ ಮತ್ತು ಕಬ್ಬಿನ ಮಿಶ್ರಣದೊಂದಿಗೆ ನೀಡಬೇಕು. ದಂಪತಿಗೆ ಗಂಡು ಮಗು ಜನಿಸಿದರೆ, ಮಗುವಿನ ಪ್ರಥಮ ಸಂಕ್ರಾಂತಿಯಂದು ಕೃಷ್ಣನ ಬೆಳ್ಳಿಯ ವಿಗ್ರಹವನ್ನು ಆತ್ಮೀಯರಿಗೆ ನೀಡಬೇಕು.

ಹೆಣ್ಣು ಮಗು ಹುಟ್ಟಿದರೆ ಬೆಳ್ಳಿಯ ಸಣ್ಣ ತಟ್ಟೆಯನ್ನು ಆತ್ಮೀಯರಿಗೆ ನೀಡುವ ಸಂಪ್ರದಾಯವೂ ಕೆಲವೆಡೆ ರೂಢಿಯಲ್ಲಿದೆ. ಸಂಕ್ರಾಂತಿ ವೇಳೆ ನದಿಸಂಗಮ, ಸಮುದ್ರದಲ್ಲಿ ಪುಣ್ಯಸ್ನಾನ ಮಾಡುವ ಪರಿಪಾಠ ಮೈಸೂರಿನ ಶ್ರೀರಂಗಪಟ್ಟಣ, ಬಾಗಲಕೋಟೆಯ ಸಂಗಮ, ಕರಾವಳಿಯಲ್ಲಿ ಆಚರಣೆಯಲ್ಲಿದೆ. ಬಿಳಿ ಎಳ್ಳು, ಅರಿಶಿಣ ಹಚ್ಚಿಕೊಂಡು ಸ್ನಾನ ಮಾಡುತ್ತಾರೆ. ಮಕರ ಸಂಕ್ರಮಣದ ಮಾರನೇ ದಿನ ಮಾಡುವ ಕರಿಸ್ನಾನವೂ ವಿಶೇಷ. ಕೆಲ ಕಡೆ ಉಪವಾಸ ಮತ್ತು ದಾನಾದಿಗಳನ್ನೂ ಮಾಡುವರು.

ಮೈಸೂರು ಕಡೆ ಕಿಚ್ಚು ಹಾಯಿಸ್ತಾರೆ: ‘ಸುಗ್ಗಿ ಹಬ್ಬ ಸಂಕ್ರಾಂತಿಯಲ್ಲಿ ‘ಎಳ್ಳು ಬೆಲ್ಲ ತಿಂದು ಒಳ್ಳೆಯ ಮಾತಾಡಿ ಎನ್ನುವ ನಾಣ್ನುಡಿಯಂತೆ ಹೆಣ್ಣುಮಕ್ಕಳು ಮನೆ, ಮನೆಗೆ ತೆರಳಿ ಎಳ್ಳು ಬೆಲ್ಲ ವಿನಿಮಯ ಮಾಡಿಕೊಳ್ಳುವುದರ ಜತೆ ಮೈಸೂರು, ಮಂಡ್ಯ, ಚಾಮರಾಜನಗರಗಳಲ್ಲಿ ರಾಸá-ಗಳನ್ನು ಸ್ವಚ್ಛಗೊಳಿಸಿ ಬಣ್ಣ ರಿಬ್ಬನ್, ಬಲೂನ್​ಗಳಿಂದ ಅಲಂಕರಿಸಿ ಊರ ಪ್ರವೇಶದ್ವಾರದಲ್ಲಿ ಅವುಗಳನ್ನು ಬೆಂಕಿಯಲ್ಲಿ ನೆಗೆಸá-ವುದು ಪದ್ಧತಿ. ದೈವೀಸ್ವರೂಪವಾದ ಬೆಂಕಿಯನ್ನು ದಾಟಿಸá-ವುದರಿಂದ ಯಾವುದೇ ದá-ಷ್ಟಶಕ್ತಿಗಳು ರಾಸá-ಗಳಿಗೆ ತಾಗá-ವುದಿಲ್ಲ. ಅವುಗಳ ಮೈಗೆ ಅಂಟಿಕೊಳ್ಳುವ Åಮಿ, ಜಿಗಣೆಗಳು ಬೆಂಕಿಯಿಂದ ನಾಶವಾಗá-ತ್ತವೆ ಎನ್ನುವ ನಂಬಿಕೆ ಜನರದ್ದು. ಎಣ್ಣೆ ಸ್ನಾನ ಮಾಡá-ವ ಹೆಣ್ಣುಮಕ್ಕಳು ಎಳ್ಳು, ಬೆಲ್ಲ, ಕಬ್ಬು, ಸಕ್ಕರೆ ಅಚ್ಚು ಹಿಡಿದು ಮನೆ ಮನೆಗೆ ತೆರಳಿದರೆ, ಗಂಡುಮಕ್ಕಳು ಹಸು, ಕುರಿಗಳನ್ನು ಸಿಂಗರಿಸಿ ಸಂಜೆ ವೇಳೆಗೆ ಗ್ರಾಮದ ಮá-ಖ್ಯದ್ವಾರದಲ್ಲಿ ಬಂದು ಸೇರá-ತ್ತಾರೆ. ಎಲ್ಲರೂ ಒಟ್ಟಿಗೆ ಸೇರಿ ದೇವರಿಗೆ ಪೂಜೆ ನೆರವೇರಿಸಿ ಜಾನá-ವಾರá-ಗಳನ್ನು ಬೆಂಕಿಯಲ್ಲಿ ಹಾರಿಸುತ್ತಾರೆ. ಬಳಿಕ ದೇವರ ಮೆರವಣಿಗೆ ನಡೆಯá-ತ್ತದೆ.

ಭೂತಾಯಿಗೆ ಅವರೆಕಾಯಿ: ಸಂಕ್ರಾಂತಿ ಸಮಯದಲ್ಲೇ ಅವರೆಕಾಯಿ ಸೀಸನ್ ಕೂಡ. ಪಿರಿಯಾಪಟ್ಟಣ ಭಾಗದಲ್ಲಿ ಹೊಲದಲ್ಲಿಯೇ ಅವರೇಕಾಯಿ ಬೇಯಿಸಿ ಅವುಗಳನ್ನು ಹೊಲದಲ್ಲಿ ಎರಚá-ವ ಮೂಲಕ ಭೂಮಿತಾಯಿಗೆ ನಮಿಸá-ವ ಸಂಪ್ರದಾಯವೂ ಇದೆ. ಈ ಹಿಂದೆ ಕಾಡುಪ್ರಾಣಿಗಳನ್ನು ಬೇಟೆಯಾಡá-ವ ಪದ್ಧತಿ ಇತ್ತಾದರೂ ಈಗ ಪೂಜೆಗಷ್ಟೆ ಆಚರಣೆ ಸೀಮಿತಗೊಂಡಿದೆ.

ಉತ್ತರ ಕರ್ನಾಟಕದಲ್ಲಿ ಸಹಭೋಜನ

ವರ್ಷದ ಆರಂಭದ ಹಬ್ಬ ‘ಸಂಕ್ರಾಂತಿ’ ಯನ್ನು ನಗರ, ಗ್ರಾಮೀಣ ಪ್ರದೇಶದ ಜನರು ಸಡಗರ ಸಂಭ್ರಮ ದಿಂದ ಆಚರಿಸುತ್ತಾರೆ. ಜನ ಕುಟುಂಬಸಮೇತರಾಗಿ ಉದ್ಯಾನ, ಜಮೀನುಗಳಿಗೆ ತೆರಳಿ ಸಹಭೋಜನ ಮಾಡುತ್ತಾರೆ. ಬಗೆ ಬಗೆಯ ಹೋಳಿಗೆ, ಮಾದ್ಲಿ, ಕಡಬು, ಖಡಕ್ ರೊಟ್ಟಿ, ಸಜ್ಜಿ ರೊಟ್ಟಿ, ಶೇಂಗಾ ಚಟ್ನಿ, ಬದನೆಕಾಯಿ, ಹೆಸರು ಕಾಳುಪಲ್ಲೆ ಸಂಕ್ರಾಂತಿಯ ಊಟದ ವಿಶೇಷ. ಸಜ್ಜೆ ಮೆತ್ತಿದ ರೊಟ್ಟಿ ತಯಾರಿ ವಾರದಿಂದಲೇ ನಡೆದಿರುತ್ತದೆ. ಮಾದ್ಲಿ (ಸಿಹಿ) ಸಂಕ್ರಾಂತಿ ಸ್ಪೆಷಲ್. ಗ್ರಾಮೀಣ ಪ್ರದೇಶಗಳಲ್ಲೂ ಹಬ್ಬದ ಸಂಭ್ರಮ ಜೋರಾಗಿಯೇ ಇರುತ್ತದೆ. ರೈತರು ತಮ್ಮ ದನಕರುಗಳನ್ನು ಶೃಂಗರಿಸಿ, ಪೂಜೆ ಸಲ್ಲಿಸಿ ಗ್ರಾಮಗಳಲ್ಲಿ ಮೆರವಣಿಗೆ ಮಾಡುವ ಸಂಪ್ರದಾಯವಿದೆ.

15ಕ್ಕೆ ಹಬ್ಬದಾಚರಣೆ

 

ಜ.14ರ ರಾತ್ರಿ 7.12ಕ್ಕೆ (ಭಾರತದಲ್ಲಿ ಸೂರ್ಯಾಸ್ತದ ಬಳಿಕ) ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುವುದರಿಂದ ಜ.14ರಂದೇ ಸಂಕ್ರಮಣ ಕಾಲವಾದರೂ ಸಂಕ್ರಾಂತಿ ಹಬ್ಬದ ಆಚರಣೆ ಸೋಮವಾರ (ಜ.15) ಸೂರ್ಯೋದಯದ ಬಳಿಕ ಎಂಬುದು ವಿದ್ವಾನ್ ಮಂಜುನಾಥ್ ಅವರ ಅಭಿಪ್ರಾಯ. ಧರ್ಮಶಾಸ್ತ್ರದ ಪ್ರಕಾರ ಜ.15ರ ಮಧ್ಯಾಹ್ನ 12ರವರೆಗೂ ಪುಣ್ಯಕಾಲ ಎಂದೇ ಪರಿಗಣಿಸಲಾಗಿದೆ.

ಇಲ್ಲಿನವರಿಗೆ ಸಂಕ್ರಾಂತಿ ಅಂದ್ರೆ ಭಯ

ಎಲ್ಲ ಕಡೆ ಸಂಕ್ರಾಂತಿ ಶುಭಸಂಕೇತವಾದರೆ ಕೋಲಾರದ ಅರಾಭಿಕೊತ್ತನೂರಿನ ಮಂದಿ ಮಾತ್ರ ಸಂಕ್ರಾಂತಿ ಸಹವಾಸವೇ ಬೇಡವೆಂದು ಹಬ್ಬಕ್ಕೇ ನಿಷೇಧ ಹೇರಿದ್ದಾರೆ. ಹಬ್ಬ ಆಚರಿಸಿದರೆ ರಾಸುಗಳು ಸಾಯುತ್ತವೆ ಎಂಬ ನಂಬಿಕೆಯಿಂದ ಹಬ್ಬ ಕೈಬಿಟ್ಟಿದ್ದಾರೆ. ಶತಶೃಂಗ ಪರ್ವತದ ಮಡಿಲಲ್ಲಿನ ಪುಟ್ಟ ಗ್ರಾಮ ಅರಾಭಿಕೊತ್ತನೂರು. ಸುಮಾರು 400 ವರ್ಷಗಳ ಹಿಂದೆ ಗ್ರಾಮದಲ್ಲಿ ಸಂಕ್ರಾಂತಿ ಆಚರಣೆ ವೇಳೆ ರಾಸುಗಳು ಇದ್ದಕ್ಕಿದ್ದಂತೆ ಮೃತಪಟ್ಟ ಹಿನ್ನೆಲೆಯಲ್ಲಿ ಹಬ್ಬದಾಚರಣೆಯಿಂದ ದೂರವುಳಿದರು. ಅದೇ ರೂಢಿ ಈಗಲೂ ಮುಂದುವರಿದಿದೆ. ಇದಕ್ಕೂ ಮೊದಲು ಹಬ್ಬದ ಬಳಿಕ ರಾಸುಗಳಿಗೆ ಕಿಚ್ಚು ಹಾಯಿಸುವುದು ರೂಢಿಯಲ್ಲಿತ್ತು. ಹಬ್ಬದ ದಿನವೇ ರಾಸುಗಳು ಮೃತಪಟ್ಟಿದ್ದರಿಂದ ಗ್ರಾಮಸ್ಥರು ಬಸವ ದೇವಾಲಯದಲ್ಲಿ ಸೇರಿ ‘ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸು, ಇನ್ನು ಮುಂದೆ ಮಕರ ಸಂಕ್ರಮಣದಂದು ರಾಸುಗಳಿಗೆ ಕಿಚ್ಚು ಹಾಯಿಸುವುದಿಲ್ಲ, ಹಬ್ಬ ಆಚರಿಸುವುದಿಲ್ಲ. ಪ್ರತಿವರ್ಷ ಬಸವ ಜಯಂತಿಯಂದು ದೇವಾಲಯದಲ್ಲಿ ಪೂಜೆ ಸಲ್ಲಿಸುವುದಾಗಿ ಹರಕೆ ಹೊತ್ತ ಮೇಲೆ ರಾಸುಗಳಿಗೆ ಕಾಯಿಲೆ ವಾಸಿಯಾಯಿತು’ ಎಂಬ ಮಾತು ಇಲ್ಲೆಲ್ಲ ಕೇಳಿಬರುತ್ತದೆ. ಇದೇ ಹಬ್ಬವನ್ನು ಬಸವ ಜಯಂತಿಯಂದು ಆಚರಣೆ ಮಾಡುತ್ತಾರೆ.

 

Leave a Reply

Your email address will not be published. Required fields are marked *