More

  ಪ್ರೀತಿ ಹಂಚುವುದೇ ಸಂಕ್ರಮಣ

  ಲಕ್ಷ್ಮೇಶ್ವರ: ಭಾರತೀಯರ ಎಲ್ಲ ಹಬ್ಬ, ಉತ್ಸವ, ಆಚರಣೆಗಳಲ್ಲಿ ವೈಜ್ಞಾನಿಕ ಸತ್ಯ ಅಡಕವಾಗಿದೆ. ಅದರಂತೆ ಸಂಕ್ರಮಣ ಪ್ರೀತಿ ಹಂಚುವ ಹಬ್ಬವಾಗಿದೆ ಎಂದು ಸಮೀಪದ ಮುಕ್ತಿಮಂದಿರ ಧರ್ಮಕ್ಷೇತ್ರದ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

  ಮಕರ ಸಂಕ್ರಮಣದ ಹಿನ್ನೆಲೆಯಲ್ಲಿ ಬುಧವಾರ ಕ್ಷೇತ್ರಕ್ಕೆ ಬಂದಿದ್ದ ಭಕ್ತರಿಗೆ ಎಳ್ಳು-ಬೆಲ್ಲ ವಿತರಿಸಿ ಅವರು ಮಾತನಾಡಿದರು. ಸಂಕ್ರಮಣ ಕಾಲದಲ್ಲಿ ಚಳಿ ಹೆಚ್ಚಿರುತ್ತದೆ. ಅದರಿಂದ ದೇಹ ರಕ್ಷಿಸುವ ಸಲುವಾಗಿ ಉಷ್ಣಕಾರಕ ಪದಾರ್ಥಗಳಾದ ಎಳ್ಳು-ಬೆಲ್ಲ ಸೇವಿಸಬೇಕು ಎಂಬುದನ್ನು ಸಾವಿರಾರು ವರ್ಷಗಳ ಹಿಂದೆಯೇ ಹಿರಿಯರು ತೋರಿಸಿಕೊಟ್ಟಿದ್ದಾರೆ. ಅಲ್ಲದೆ, ಮಕರ ಸಂಕ್ರಾಂತಿಯಂದು ನದಿಗಳಲ್ಲಿ ಸ್ನಾನ ಮಾಡುವುದರಿಂದ ಮಾಡಿದ ಪಾಪಗಳು ದೂರವಾಗಿ ಪುಣ್ಯ ಲಭಿಸುತ್ತದೆ ಎಂಬ ನಂಬಿಕೆ ಜನರಲ್ಲಿದೆ ಎಂದ ಅವರು, ಮುಕ್ತಿಮಂದಿರದಲ್ಲಿ ತ್ರಿಕೋಟಿ ಶಿವಲಿಂಗ ಸ್ಥಾಪನೆ ಕೆಲಸ ಭರದಿಂದ ಸಾಗಿದೆ. ಈಗಾಗಲೇ ಸಾವಿರಾರು ಬೃಹತ್ ಶಿವಲಿಂಗಗಳು ಕ್ಷೇತ್ರಕ್ಕೆ ಬಂದಿದ್ದು ಅವುಗಳ ಸ್ಥಾಪನೆ ನಂತರ ಕ್ಷೇತ್ರದ ಕೀರ್ತಿ ಹೆಚ್ಚಲಿದೆ ಎಂದರು.

  ಗೋವನಾಳ, ಶಿಗ್ಲಿ, ರಾಮಗಿರಿ, ಬಸಾಪುರ, ಕುಂದಗೋಳ ತಾಲೂಕಿನ ಕಳಸ, ಸಂಕ್ಲಿಪೂರ, ಸುಲ್ತ್ತಾನಪುರ, ಹರ್ಲಾಪುರ, ಗುಡಗೇರಿ ಗ್ರಾಮಗಳಿಂದ ನೂರಾರು ಭಕ್ತರು ಚಕ್ಕಡಿ, ಟ್ರ್ಯಾಕ್ಟರ್, ಕಾರು, ದ್ವಿಚಕ್ರ ವಾಹನ ಸೇರಿ ಮತ್ತಿತರ ವಾಹನಗಳಲ್ಲಿ ಕ್ಷೇತ್ರಕ್ಕೆ ಆಗಮಿಸಿದ್ದರು. ಶ್ರೀಗಳ ದರ್ಶನಾಶೀರ್ವಾದ ಪಡೆದರು. ಬಂದ ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts