ಪ್ರಿಯಾಂಕ್ ಖರ್ಗೆ ಕ್ಷಮೆಯಾಚಿಸಲಿ

ಶಿವಮೊಗ್ಗ: ಸಿದ್ಧಗಂಗಾ ಶ್ರೀಗಳು ಶಿವೈಕ್ಯರಾದ ಹಿನ್ನೆಲೆಯಲ್ಲಿ ಶೋಕಾಚರಣೆ ಇದ್ದರೂ ಕಾರ್ಯಕ್ರಮ ಆಯೋಜಿಸಿದ್ದ ಸಮಾಜಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದ ಜನರ ಕ್ಷಮೆಯಾಚಿಸಬೇಕು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದ್ದಾರೆ.

ಸಚಿವರೇ ಕಾನೂನು ಮೀರಿ ನಡೆಯುತ್ತೇನೆಂದರೆ ಸಾಮಾನ್ಯ ಜನರಿಗೆ ಕಾನೂನು ಜ್ಞಾನ ಹೇಳುವವರು ಯಾರು ಎಂದು ಬá-ಧವಾರ ಸá-ದ್ದಿಗಾರರೊಂದಿಗೆ ಮಾತನಾಡಿ ಪ್ರಶ್ನಿಸಿದರು.

ಕೊಲೆ ಯತ್ನದ ಭೀತಿ: ಆಸ್ಪತ್ರೆಯಿಂದ ಹೊರಬಂದರೆ ಕೊಲೆ ಯತ್ನ ನಡೆಯಬಹುದೆಂಬ ಭೀತಿ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್​ಗೆ ಉಂಟಾಗಿದೆ. ಹೀಗಾಗಿ ಅವರು ಆಸ್ಪತ್ರೆಯಿಂದ ಹೊರಬರುತ್ತಿಲ್ಲ. ಇಡೀ ಪ್ರಕರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ರಾಜ್ಯದ ಜನರ ಮುಂದೆ ಕ್ಷಮೆಯಾಚಿಸಬೇಕೆಂದು ಒತ್ತಾಯಿಸಿದರು.

ಆನಂದ್ ಸಿಂಗ್ ಕೊಲೆಗೆ ಯತ್ನಿಸಿದ ಶಾಸಕ ಗಣೇಶ್ ಬಂಧನವಾಗಿಲ್ಲ. ಎಲ್ಲೆಡೆಯಿಂದ ಒತ್ತಡ ಬಂದ ಬಳಿಕವಷ್ಟೇ ಗಣೇಶ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಆದರೆ ರೆಸಾರ್ಟ್​ನಲ್ಲಿ ಪಾನಗೋಷ್ಠಿ ಏರ್ಪಡಿಸಿದ್ದವರು ಯಾರು? ಮದ್ಯ ಸೇವನೆಗೆ ಅವಕಾಶ ಕೊಟ್ಟವರು ಯಾರು? ಕೊಲೆ ಯತ್ನ ಮಾಡಿದವರು ಯಾರು? ಅಲ್ಲಿ ನಡೆದಿದ್ದಾರೂ ಏನು? ಎಂಬುದನ್ನು ರಾಜ್ಯದ ಜನತೆಗೆ ಸರ್ಕಾರ ತಿಳಿಸಬೇಕು ಎಂದು ಆಗ್ರಹಿಸಿದರು.