ಪ್ರಿಯಾಂಕಾ ‘ಲೈಫ್ ಈಸ್ ಬ್ಯೂಟಿಫುಲ್’: ನಟಿಯ ಹುಟ್ಟುಹಬ್ಬಕ್ಕೆ ಚಿತ್ರದ ಪೋಸ್ಟರ್ ಉಡುಗೊರೆ

blank

ಬೆಂಗಳೂರು: ‘ಉಗ್ರಾವತಾರ’ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಮಿಂಚಿದ್ದ ಪ್ರಿಯಾಂಕಾ ಉಪೇಂದ್ರ ಸದ್ಯ ‘ಲೈಫ್ ಈಸ್ ಬ್ಯೂಟಿಫುಲ್’ ಎಂಬ ಹೊಸ ಚಿತ್ರದಲ್ಲಿ ಬಿಜಿಯಾಗಿದ್ದಾರೆ. ಎಂ.ಅರುಣ್ ಕುಮಾರ್ ಹಾಗೂ ಸಾಬು ಅಲೋಸಿಯಸ್ ಜೋಡಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಪ್ರಿಯಾಂಕಾ ಜತೆ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬಾರ್ ಮುಖ್ಯಭೂಮಿಕೆಯಲ್ಲಿದ್ದಾರೆ. ಮಂಗಳವಾರ (ನ.12) ಪ್ರಿಯಾಂಕಾ ಉಪೇಂದ್ರ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಚಿತ್ರತಂಡವು ಪೋಸ್ಟರ್ ಉಡುಗೊರೆ ನೀಡಿದೆ. ಉಪೇಂದ್ರ, ‘ಸಿನಿಮಾದ ಕೆಲ ತುಣುಕುಗಳನ್ನು ನೋಡಿದ್ದೇನೆ. ಚೆನ್ನಾಗಿ ಮೂಡಿಬಂದಿವೆ. ಲ್‌ಟಿ ಮೇಲೆ, ಕೆಳಗೆ ಓಡಾಡುವಂತೆ ಜೀವನ ಕೂಡ. ಅದಕ್ಕಾಗಿ ಈ ಚಿತ್ರಕ್ಕೆ ಈ ಟೈಟಲ್ ಇಟ್ಟಿದ್ದಾರೆ ಅಂತನಿಸುತ್ತದೆ. ಪ್ರಿಯಾಂಕಾ ಹೊರಗಡೆ ಚೆನ್ನಾಗಿ ಮಾತನಾಡಿ, ಮನೇಲಿ ಬೈಯುತ್ತಾರೆ. ಆಕೆ ಅದ್ಬುತ ಕಲಾವಿದೆ. ಅವರಿಂದ ನಾನು ಇನ್ನು ಸಾಕಷ್ಟು ಕಲಿಯುವುದಿದೆ’ ಎಂದರು. ಪ್ರಿಯಾಂಕಾ ಉಪೇಂದ್ರ, ‘ಪೃಥ್ವಿ ತುಂಬಾ ಚೆನ್ನಾಗಿ ಅಭಿನಯಿಸುತ್ತಾರೆ. ಕೆಲ ದಿನಗಳ ಕಾಲ ವರ್ಕ್‌ಶಾಪ್ ಮಾಡಿ ಶೂಟಿಂಗ್‌ಗೆ ಹೋದೆವು. ಹೀಗಾಗಿ ನಮ್ಮಿಂದಲೂ ರ್ಪೆಕ್ಟ್‌ಆಗಿ ಕೆಲಸ ಮಾಡಿಸಿದ್ದಾರೆ. ಡಿ.14ಕ್ಕೆ ನಮ್ಮ ಮದುವೆ ವಾರ್ಷಿಕೋತ್ಸವ, ಆ ಸಂಭ್ರಮಕ್ಕೆ ಒಂದು ಮುನ್ನ ದಿನವೇ ಡಿ.13ಕ್ಕೆ ಈ ಸಿನಿಮಾ ರಿಲೀಸ್ ಆಗಲಿದೆ’ ಎಂದರು. ಲಾಸ್ಯ ನಾಗರಾಜ್, ಸಿದ್ಲಿಂಗು ಶ್ರೀಧರ್, ಮಹಾಂತೇಶ್ ತಾರಾಬಳಗದಲ್ಲಿದ್ದಾರೆ.

Share This Article

ಭಾರತದ ನೋಟಿನಲ್ಲಿರುವ ಮಹಾತ್ಮ ಗಾಂಧಿಜಿ ಅವರ ಫೋಟೋ ಕ್ಲಿಕ್ಕಿಸಿದ್ದು ಯಾವಾಗ & ಎಲ್ಲಿ?; ಇಲ್ಲಿದೆ ಸಂಪೂರ್ಣ ಮಾಹಿತಿ | Information

ಭಾರತದ ನೋಟಿನಲ್ಲಿ ಮಹಾತ್ಮ ಗಾಂಧಿ ಅವರ ಫೋಟೋವನ್ನು ನೀವು ನೋಡಿರಬಹುದು. ಆದರೆ ನೋಟಿನ ಮೇಲೆ ನಗುತ್ತಿರುವ…

ಇಬ್ಬನಿಯಿಂದ ಚಳಿಗಾಲದಲ್ಲಿ ತುಳಸಿ ಗಿಡ ಹಾಳಾಗುತ್ತಿದೆಯೇ?; ಆರೈಕೆಗಾಗಿ ಇಲ್ಲಿದೆ ಸಿಂಪಲ್​ ಟ್ರಿಕ್​​ | Health Tips

ತುಳಸಿಯು ಔಷಧೀಯ ಸಸ್ಯವಾಗಿರುವುದರ ಜತೆಗೆ ಧಾರ್ಮಿಕ ನಂಬಿಕೆಗಳನ್ನೂ ಹೊಂದಿದೆ. ಈ ಸಸ್ಯವನ್ನು ಹಿಂದೂ ಧರ್ಮದಲ್ಲಿ ಅತ್ಯಂತ…

ಬಿಪಿ ಹೆಚ್ಚಾಗಲು ಈ ಆಹಾರ ಪದಾರ್ಥಗಳು ಕಾರಣವೇ; ತಜ್ಞರು ಹೇಳಿದ್ದೇನು? | Health Tips

ನೂಡಲ್ಸ್, ಪಾಪಡ್, ಉಪ್ಪಿನಕಾಯಿ, ಸಾಸ್ ಮತ್ತು ನಮ್ಕೀನ್ ಬಹುತೇಕ ಈ ಎಲ್ಲಾ ಆಹಾರ ಪದಾರ್ಥಗಳು ಪ್ರತಿಯೊಬ್ಬರ…