ಪ್ರಿಯಕರ ಕೈಕೊಟ್ಟಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ

ಮೈಸೂರು: ಪ್ರೀತಿಸಿದ ಯುವಕ ವಂಚಿಸಿದ್ದರಿಂದ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿದ್ಯಾರ್ಥಿನಿ ಇತ್ತೀಚೆಗೆ ಮೃತಪಟ್ಟಿದ್ದಾಳೆ.
ತಾಲೂಕಿನ ಗೌಡನಹಳ್ಳಿ ಗ್ರಾಮದ ಜಿ.ಎಸ್. ಮಹದೇವ ಅವರ ಪುತ್ರಿ ನಿಸರ್ಗ(20) ಮೃತಳು. ತನ್ನ ಸಾವಿಗೆ ಪ್ರಿಯಕರ ಸುಹಾಸ್ ರೆಡ್ಡಿ, ಆತನ ತಂದೆ ಗೋಪಾಲಕೃಷ್ಣ, ಪೋಷಕರಾದ ಬಾಬುರೆಡ್ಡಿ, ರೂಪಾ, ಸುಹಾಸ್ ರೆಡ್ಡಿಯ ಮತ್ತೊಬ್ಬ ಸ್ನೇಹಿತೆ ಅನನ್ಯಾ ಕಾರಣ ಎಂದು ಡೆತ್‌ನೋಟ್ ಬರೆದಿದ್ದು, ಈ ಬಗ್ಗೆ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಟ್ಟಣದ ಪದವಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ನಿಸರ್ಗ, ನಾಲ್ಕು ವರ್ಷಗಳಿಂದ ಸುಹಾಸ್ ರೆಡ್ಡಿಯನ್ನು ಪ್ರಿತಿಸುತ್ತಿದ್ದು, ಇತ್ತೀಚೆಗೆ ಅನನ್ಯಾ ಎಂಬ ಯುವತಿಯೊಂದಿಗೆ ಓಡಾಡುತ್ತಿದ್ದ. ಇದರಿಂದ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ನಿಸರ್ಗ ಸುಹಾಸ್ ರೆಡ್ಡಿ ಪಾಲಕರ ಗಮನಕ್ಕೆ ತಂದಾಗ ಅವರು ಹೀಯಾಳಿಸಿದ್ದರು ಎನ್ನಲಾಗಿದೆ.
ಇದರಿಂದ ಮನನೊಂದಿದ್ದ ನಿಸರ್ಗ, ಬ್ಲೇಡ್‌ನಿಂದ ಕೈ ಕೊಯ್ದುಕೊಂಡು ತನಗಾದ ವಂಚನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾಳೆ. ಅಲ್ಲದೆ, ಜುಲೈ 9 ರಂದು ಡೆತ್‌ನೋಟ್ ಬರೆದು ಇಲಿ ಪಾಷಣ ಸೇವಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಯುವತಿಯನ್ನು ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತಳ ಪಾಲಕರು ನೀಡಿದ ದೂರಿನ ಮೇರೆಗೆ ಐವರ ವಿರುದ್ಧ್ದ ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಶೋಧ ಕಾರ್ಯ ಕೈಗೊಂಡಿದ್ದಾರೆ.

Share This Article

ಭಾರತದ ಈ 7 ನಗರಗಳಲ್ಲಿ ಮಾಂಸದೂಟ ಸಂಪೂರ್ಣ ನಿಷೇಧ! ಸಸ್ಯಾಹಾರಿ ಆಹಾರಕ್ಕೆ ಮಾತ್ರ ಅವಕಾಶ | No Meat City

No Meat Cities: ಭಾರತ ಒಂದು ವೈವಿಧ್ಯಮಯ ಸಂಸ್ಕೃತಿಗಳು ಮತ್ತು ಪಾಕಪದ್ಧತಿಗಳ ದೇಶ. ಇಲ್ಲಿನ ಸಂಸ್ಕೃತಿ,…

ಚಳಿಗಾಲದಲ್ಲಿ ತುಟಿಗಳು ಒಣಗಿವೆಯೇ? ಇದನ್ನು ಪ್ರಯತ್ನಿಸಿ…Winter Care

Winter Care : ಹವಾಮಾನ ಬದಲಾದಂತೆ ನಮ್ಮ ದೇಹದಲ್ಲಿ ಹಲವಾರು ಬದಲಾವಣೆಗಳು ಸಂಭವಿಸುತ್ತವೆ.ಶೀತ ಋತುವಿನ ನಂತರ…

ಕೈ, ಕಾಲು, ಸೊಂಟದ ಸುತ್ತಲೂ ಕಪ್ಪು ದಾರ ಕಟ್ಟುವ ಅಭ್ಯಾಸ ಇದ್ಯಾ? ಹಾಗಿದ್ರೆ ಮೊದಲು ಇದನ್ನು ತಿಳಿದುಕೊಳ್ಳಿ… Black Thread

Black Thread: ಕೈ, ಕಾಲು ಮತ್ತು ಸೊಂಟದ ಸುತ್ತಲೂ ಕಪ್ಪು ದಾರವನ್ನು  ಕಟ್ಟಿಕೊಳ್ಳುವುದರ ಹಿಂದೆ ಬಲವಾದ…