ಪ್ರಾಧಿಕಾರದಿಂದಲೇ ಹೆದ್ದಾರಿ ಸುಂಕ ವಸೂಲಿ

ರಾಮನಗರ: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಪ್ರಯಾಣಿಕರಿಂದ ಹೆದ್ದಾರಿ ಪ್ರಾಧಿಕಾರವೇ ನೇರ ಸುಂಕ ವಸೂಲಿ ಮಾಡಲು ಮುಂದಾಗಿದೆ.

ರಸ್ತೆ ನಿರ್ವಿುಸಿದ ಕಂಪನಿಗೆ ಇದುವರೆಗೆ ಸುಂಕ ವಸೂಲಿ ಹಕ್ಕು ನೀಡುತ್ತಿದ್ದ ಪ್ರಾಧಿಕಾರ, ಸಮಸ್ಯೆ ತಲೆದೋರಿದ ಹಿನ್ನೆಲೆಯಲ್ಲಿ ತಾನೇ ಸುಂಕ ವಸೂಲಿ ಮಾಡಲು ಹೊಸ ನೀತಿ ರೂಪಿಸಿದೆ. ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ-275ರ ಸುಂಕವನ್ನು ಪ್ರಾಧಿಕಾರದ ಸಿಬ್ಬಂದಿಯೇ ಸಂಗ್ರಹಿಸಲಿದ್ದಾರೆ ಎಂದು ಪ್ರಾಧಿಕಾರದ ತಾಂತ್ರಿಕ ಅಧಿಕಾರಿ ವರುಣ್ ತಿಳಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ-4, 275 ಸೇರಿ ಇತರೆಡೆ ಸುಂಕ ವಸೂಲಿಯನ್ನು ರಸ್ತೆ ನಿರ್ವಿುಸಿದ ಗುತ್ತಿಗೆ ಕಂಪನಿಗಳಿಗೆ ವಹಿಸಲಾಗಿತ್ತು. ಗುತ್ತಿಗೆ ಕಂಪನಿಗಳು ನಿಯಮ ಮೀರಿ ಸುಂಕ ಕೇಂದ್ರ ನಿರ್ಮಾಣ ಹಾಗೂ ವಸೂಲಿ ಮಾಡುವ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಪ್ರಾಧಿಕಾರವೇ 275ರಲ್ಲಿ ಸುಂಕ ವಸೂಲಿಗೆ ಮುಂದಾಗಿದೆ.

15 ವರ್ಷಕ್ಕೆ ಗುತ್ತಿಗೆ: ಬೆಂಗಳೂರಿನ ಕೆಂಗೇರಿ ಸಮೀಪದ ಪಂಚಮುಖಿ ಗಣಪತಿ ದೇವಾಲಯದಿಂದ ಮೈಸೂರಿನ ಕೊಲಂಬಿಯಾ ಏಷ್ಯಾ ಆಸ್ಪತ್ರೆವರೆಗೆ 150 ಕಿ.ಮೀ. ಉದ್ದದ ರಸ್ತೆ ನಿರ್ವಣವಾಗಲಿದೆ. ಮಧ್ಯಪ್ರದೇಶದ ಭೋಪಾಲ್​ನ ದಿಲೀಪ್ ಬಿಲ್ಡ್​ಕಾರ್ನ್ ಕಂಪನಿಗೆ ರಸ್ತೆ ನಿರ್ವಣದ ಗುತ್ತಿಗೆ ದೊರೆತಿದೆ. ಕಂಪನಿ 2 ಲೇನ್ ಸರ್ವಿಸ್ ರಸ್ತೆ , 6 ಲೇನ್ ಹೆದ್ದಾರಿಯನ್ನು ನಿರ್ವಿುಸಿಕೊಡಲು ಒಪ್ಪಂದಕ್ಕೆ ಸಹಿ ಹಾಕಿದೆ. ನಿರ್ಮಾಣ ಆರಂಭವಾದ 3 ತಿಂಗಳಲ್ಲಿ ಕಾಮಗಾರಿ ಮುಗಿಸುವುದಾಗಿ ಕಂಪನಿ ತಿಳಿಸಿದೆ.

ದಿಲೀಪ್ ಬಿಲ್ಡ್​ಕಾರ್ನ್ ಕಂಪನಿ ಹಣ ಖರ್ಚು ಮಾಡಿ ರಸ್ತೆ ನಿರ್ವಿುಸಿದರೂ ಸುಂಕ ಸಂಗ್ರಹಿಸುವುದಿಲ್ಲ. ಬದಲಿಗೆ 15 ವರ್ಷಗಳ ಕಾಲ ಹೆದ್ದಾರಿ ಪ್ರಾಧಿಕಾರವೇ ಸುಂಕ ಸಂಗ್ರಹಿಸಿ ಗುತ್ತಿಗೆ ಕಂಪನಿಗೆ ಹಣ ಪಾವತಿಸಲಿದೆ. 15 ವರ್ಷದ ನಂತರ ಸುಂಕ ಸಂಗ್ರಹ ಸ್ಥಗಿತಗೊಳಿಸಿ ರಸ್ತೆಯನ್ನು ಪ್ರಾಧಿಕಾರ ವಶಕ್ಕೆ ಪಡೆಯಲಿದೆ.

2 ಕಡೆ ಟೋಲ್ ಕೇಂದ್ರ: ಪ್ರಾಧಿಕಾರ 150 ಕಿ.ಮೀ. ಉದ್ದದ ರಸ್ತೆಯಲ್ಲಿ ಪ್ರಯಾಣಿಕರಿಂದ ಸುಂಕ ಸಂಗ್ರಹಿಸಲು 2 ಕಡೆ ಟೋಲ್ ನಿರ್ವಿುಸಲಿದೆ. ಬೆಂಗಳೂರು ಬಳಿಯ ಕಣಿಮಿಣಿಕೆ ಮತ್ತು ಐನೋರುಪಾಳ್ಯ ಹಾಗೂ ಶ್ರೀರಂಗಪಟ್ಟಣ ಬಳಿಯ ಗಣಂಗೂರು ಗ್ರಾಮದ ಬಳಿ ಸುಂಕ ಕೇಂದ್ರ ನಿರ್ವಿುಸಲಿದೆ. ಬಿಡದಿ, ರಾಮನಗರ, ಚನ್ನಪಟ್ಟಣ ಹಾಗೂ ಮದ್ದೂರಿನಲ್ಲಿ ಬೈಪಾಸ್ ರಸ್ತೆ ನಿರ್ವಣಗೊಂಡರೆ ಮಂಡ್ಯ ಹಾಗೂ ಶ್ರೀರಂಗಪಟ್ಟಣದಲ್ಲಿ ಮೇಲು ಸೇತುವೆ ನಿರ್ವಣವಾಗಲಿದೆ. ಈಗ ಬೆಂಗಳೂರಿನಿಂದ ಮೈಸೂರು ತಲುಪಲು 3ರಿಂದ 4 ಗಂಟೆ ಪ್ರಯಾಣದ ಅವಧಿ ಇದೆ. ರಾಷ್ಟ್ರೀಯ ಹೆದ್ದಾರಿ ನಿರ್ವಣದ ನಂತರ ಪ್ರಯಾಣದ ಅವಧಿ 2ರಿಂದ 2.30 ತಾಸಿಗೆ ಕುಸಿಯಲಿದೆ.

ಈ ಐದು ನಗರಗಳಿಂದ ಆರಂಭವಾಗುವ ಸಂಚಾರಕ್ಕಿಲ್ಲ ಸುಂಕ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ 2 ಕಡೆ ಮಾತ್ರ ಸುಂಕ ವಸೂಲಿ ಕೇಂದ್ರ ಸ್ಥಾಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು ಹಾಗೂ ಮಂಡ್ಯದಿಂದ ಪ್ರಯಾಣ ಆರಂಭಿಸುವವರು ಸುಂಕ ತೆರಬೇಕಾಗಿಲ್ಲ. 4 ನಗರಗಳಿಗೆ ಹಣ ಪಾವತಿ ಮಾಡದೆ ಪ್ರಯಾಣ ಬೆಳೆಸಬಹುದು. ಬೆಂಗಳೂರು ಹಾಗೂ ಮೈಸೂರಿನಿಂದ ಪ್ರಯಾಣ ಆರಂಭಿಸುವವರು ಸುಂಕ ಕಟ್ಟಲೇಬೇಕು. ಮಂಡ್ಯದಿಂದ ಶ್ರೀರಂಗಪಟ್ಟಣಕ್ಕೆ ಪ್ರಯಾಣ ಬೆಳೆಸುವವರು ಕೂಡ ಸುಂಕ ಪಾವತಿ ಮಾಡಬೇಕು. ಮಂಡ್ಯದಿಂದ ಐನೋರುಪಾಳ್ಯದವರೆಗೆ ಪ್ರಯಾಣಿಕರು ಹಣ ಇಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರಯಾಣಿಸಬಹುದು.

ಜನವರಿಗೆ ಕಾಮಗಾರಿ ಆರಂಭ: ರಾಷ್ಟ್ರೀಯ ಹೆದ್ದಾರಿ-275ರ ಕಾಮಗಾರಿ ಜನವರಿಯಿಂದ ಆರಂಭವಾಗಲಿದೆ. ಪ್ರಾಧಿಕಾರ ಈಗಾಗಲೇ ಶೇ.80ರಷ್ಟು ಭೂಮಿಯನ್ನು ವಶಪಡಿಸಿಕೊಂಡು ರೈತರಿಗೆ ಪರಿಹಾರ ಹಣ ಪಾವತಿಸಿದೆ. ಇನ್ನು ಕೇವಲ ಶೇ.20ರಷ್ಟು ಭೂಮಿ ವಶಪಡಿಸಿಕೊಳ್ಳಬೇಕಾಗಿದೆ. ರಸ್ತೆ ನಿರ್ವಣವಾಗುವ ಕಡೆ ಈಗಾಗಲೇ ವಿದ್ಯುತ್ ಕಂಬ ನಿರ್ವಿುಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ-275ರಲ್ಲಿ ಸುಂಕ ವಸೂಲಿಯನ್ನು ಹೆದ್ದಾರಿ ಪ್ರಾಧಿಕಾರವೇ ನಿರ್ವಹಿಸಲಿದೆ. ಹೆದ್ದಾರಿ ನಿರ್ವಣದ ಸಿದ್ಧತೆ ತೀವ್ರವಾಗಿ ನಡೆಯುತ್ತಿದೆ.

| ವರುಣ್, ಹೆದ್ದಾರಿ ಪ್ರಾಧಿಕಾರದ ತಾಂತ್ರಿಕ ಅಧಿಕಾರಿ

ಪ್ರಾಧಿಕಾರ ನಮಗೆ ಎಕರೆ ಜಮೀನಿಗೆ 40 ಲಕ್ಷ ರೂಪಾಯಿ ಪರಿಹಾರವನ್ನು ಈಗಾಗಲೇ ವಿತರಿಸಿದೆ. ನಮ್ಮ ಜಮೀನಿನಲ್ಲಿ ಕಾಮಗಾರಿಗೆ ಈಗಾಗಲೇ ಸಿದ್ಧತೆ ನಡೆಯುತ್ತಿದೆ.

| ಸಿದ್ದರಾಜು, ನಿಡಘಟ್ಟ, ಯೋಜನೆಗೆ ಜಮೀನು ನೀಡಿದ ರೈತ