ಪ್ರಾಥಮಿಕ ಶಾಲೆ ಗೋಡೆ ಕುಸಿತ

ನೇಸರಗಿ: ಸಮೀಪದ ಮುತವಾಡ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ ಗೋಡೆ ಕುಸಿದಿದೆ. ಭಾನುವಾರ ರಜೆ ದಿನ ಶಾಲೆ ಗೋಡೆ ಕುಸಿದಿದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಶಾಲೆ ದುಸ್ಥಿತಿಯಲ್ಲಿದ್ದು ಶಿಕ್ಷಕರು, ನಾಗರಿಕರು ಹಲವು ಬಾರಿ ಮನವಿ ಮಾಡಿದರೂ ಸುಧಾರಣೆಗೆ ಕ್ರಮ ಕೈಗೊಂಡಿಲ್ಲ.

ಇನ್ನಾದರೂ ಶಾಲೆಯ ಸುಧಾರಣೆಗೆ ಸಂಬಂಧಿಸಿದವರು ಪ್ರಯತ್ನಿಸಬೇಕು ಎಂದು ನಾಗು ದುರದುಂಡಿ, ಅಡಿವೆಪ್ಪ ಕೆಂಚಬಾಳ, ಸಚಿನ ಪಾಟೀಲ, ಗಂಗಪ್ಪ ಮಿರೂಕರ್, ಇಸ್ಮಾಯಿಲ್ ನದಾಫ್, ಪ್ರಮೋದ ದೇಸಾಯಿ, ಸೋಮು ರಾಮದುರ್ಗ, ಸಿದ್ರಾಮ ಗುರಕ್ಕನವನರ ಆಗ್ರಹಿಸಿದ್ದಾರೆ.