ಪ್ರಾಣವಾಯುವಿಗೆ ಹೆಚ್ಚಿದ ಬೇಡಿಕೆ

ಹುಬ್ಬಳ್ಳಿ: ಕಳೆದ ಅಕ್ಟೋಬರ್ ತಿಂಗಳಿಂದ 2021 ಮಾರ್ಚ್ ಮಧ್ಯದವರೆಗೆ ಕರೊನಾ ಸೋಂಕು ಕೊಂಚ ಇಳಿಮುಖವಾಗಿತ್ತು. ಆಗ 8.15 ಟನ್​ಗೆ ಬೇಡಿಕೆ ಇದ್ದ ಆಕ್ಸಿಜನ್, ಈಗ ದಿಢೀರ್ ಏರುಮುಖವಾಗಿದೆ. ಧಾರವಾಡ ಜಿಲ್ಲೆಯ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ ನಿತ್ಯ 15 ಟನ್ ಆಕ್ಸಿಜನ್ ಪೂರೈಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

ಕಳೆದ ವರ್ಷ ಮೇ, ಜೂನ್, ಜುಲೈ, ಆಗಸ್ಟ್ ತಿಂಗಳಲ್ಲಿ ಕರೊನಾ ಸೋಂಕು ವ್ಯಾಪಕವಾಗಿ ಹರಡಿತ್ತು. ಆಗ ನಿತ್ಯ 19.5 ಟನ್ ಆಕ್ಸಿಜನ್ ಅಗತ್ಯವಿತ್ತು. ಈಗ ಮತ್ತೆ ಒಂದೇ ತಿಂಗಳಲ್ಲಿ ಏರಿಕೆಯತ್ತ ಸಾಗಿದೆ. ಆದರೂ ಕೊರತೆ ಕಂಡುಬರದಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ.

ಕೊಲ್ಹಾಪುರ ಹಾಗೂ ಬಳ್ಳಾರಿಯ ಜಿಂದಾಲ್ ಕಂಪನಿಯಿಂದ ಕಚ್ಚಾ ಪದಾರ್ಥ (ಆಕ್ಸಿಜನ್) ಪೂರೈಕೆಯಾಗುತ್ತಿದೆ. ಇದನ್ನು ಪಡೆಯುವ ಸದರ್ನ್ ಗ್ಯಾಸ್, ಕರ್ನಾಟಕ ಇಂಡಸ್ಟ್ರೀಯಲ್ ಗ್ಯಾಸ್ ಹಾಗೂ ಧಾರವಾಡದ ಫ್ರಾಕ್ಸೇರ್ ಕಂಪನಿಗಳು ಕಚ್ಚಾ ಪದಾರ್ಥವನ್ನು ಶುದ್ಧೀಕರಿಸಿ ಆಸ್ಪತ್ರೆಗಳಿಗೆ ಆಕ್ಸಿಜನ್ ಪೂರೈಕೆ ಮಾಡುತ್ತಿವೆ.

ಸದರ್ನ್ ಗ್ಯಾಸ್ 1.73 ಟನ್, ಕರ್ನಾಟಕ ಇಂಡಸ್ಟ್ರೀಯಲ್ ಗ್ಯಾಸೆಸ್ 5 ಟನ್, ಧಾರವಾಡದ ಫ್ರಾಕ್ಸೇರ್ ಕಂಪನಿ 12 ಟನ್, ಬಳ್ಳಾರಿಯ ಐನಕ್ಸ್ 1.50 ಟನ್ ಆಕ್ಸಿಜನ್ ಅನ್ನು ಪ್ರತಿನಿತ್ಯ ಪೂರೈಕೆ ಮಾಡುತ್ತಿವೆ. 2 ಸರ್ಕಾರಿ ಮತ್ತು 4 ಖಾಸಗಿ ಆಸ್ಪತ್ರೆಗಳಲ್ಲಿ ಆಕ್ಸಿಜನ್ ಟ್ಯಾಂಕ್​ಗಳಿವೆ. ಆಯಾ ಆಸ್ಪತ್ರೆಗಳಲ್ಲಿನ ಕಂಟೇನರ್ ಮತ್ತು ಸಿಲಿಂಡರ್ ಸೇರಿ ಒಟ್ಟು 19.60 ಟನ್ ಆಕ್ಸಿಜನ್ ಸಂಗ್ರಹವಿದೆ ಎಂದು ಮೂಲಗಳು ತಿಳಿಸಿವೆ.

ಅಷ್ಟೊಂದು ಬೇಡಿಕೆ ಈಗಲೇ ಬಂದಿಲ್ಲ
ಕೋವಿಡ್ ಪೂರ್ವದಲ್ಲಿ ನಿಗದಿತ ಆಸ್ಪತ್ರೆಗಳಿಗೆ ನಿತ್ಯ 5.4 ಟನ್ ಆಕ್ಸಿಜನ್ ಬೇಡಿಕೆ ಇತ್ತು. ಕಳೆದ ವರ್ಷ ಕರೊನಾ ಉತ್ತುಂಗದಲ್ಲಿದ್ದ ವೇಳೆ 19.5 ಟನ್ ಬೇಡಿಕೆ ಇದ್ದು, ಈಗ ಒಂದೇ ತಿಂಗಳಲ್ಲಿ 15 ಟನ್ ಬೇಡಿಕೆ ಹೆಚ್ಚಿದೆ. ಆರಂಭದಲ್ಲಿಯೇ ಈ ಪ್ರಮಾಣದಲ್ಲಿ ಆಕ್ಸಿಜನ್ ಬೇಡಿಕೆ ಆಗುತ್ತಿರುವುದು ಜಿಲ್ಲಾಡಳಿತವನ್ನು ಚಿಂತೆಗೆ ನೂಕಿದೆ. ಆದರೆ, ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು, ‘ಈ ಪ್ರಮಾಣದಲ್ಲಿ ಬೇಡಿಕೆ ಈಗಲೇ ಬಂದಿಲ್ಲ. ಆದರೆ, ಸಾಕಾಗುವಷ್ಟು ಆಕ್ಸಿಜನ್ ನಮ್ಮಲ್ಲಿ ಸಂಗ್ರಹವಿದೆ’ ಎಂದಿದ್ದಾರೆ.

229 ಐಸಿಯು ಕೇಸ್
ಎರಡನೇ ಅಲೆಯು ತೀವ್ರ ಸ್ವರೂಪದ್ದಾಗಿದೆ. ಉಸಿರಾಟದ ಸಮಸ್ಯೆಯಿಂದ ನರಳುವವರ ಸಂಖ್ಯೆ ಹೆಚ್ಚುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಶನಿವಾರದವರೆಗೆ ಒಟ್ಟು 229 ಜನರು ಐಸಿಯುನಲ್ಲಿದ್ದಾರೆ. ಏಪ್ರಿಲ್ ತಿಂಗಳು ಇನ್ನೂ ಮುಗಿದಿಲ್ಲ. ಆಗಲೇ 45 ಜನರು ಕೋವಿಡ್​ನಿಂದ ಮೃತಪಟ್ಟಿದ್ದಾರೆ.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…