Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಶ್ನೆ-ಪರಿಹಾರ

Thursday, 03.05.2018, 3:00 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

ನಾನು ಒಂದು ವರ್ಷದ ಹಿಂದೆ ಮದುವೆಯಾದೆ. ನನ್ನ ಪತ್ನಿ ಕಳೆದ ಮೂರು ತಿಂಗಳಿಂದ ವಿಚಿತ್ರವಾದ ಉನ್ಮಾದಕ್ಕೆ ಒಳಗಾಗಿದ್ದಾಳೆ. ಅವಳ ಯಾತನೆಯಿಂದಾಗಿ ಅವಳ ಬಗ್ಗೆ ಜಿಗುಪ್ಸೆ, ಸಿಟ್ಟು ಬರುತ್ತಿದೆ. ಸುಖವನ್ನು ಕಲ್ಪಿಸಿಕೊಂಡ ನನಗೆ ಈಗ ಬದುಕು ಬರಡೆನಿಸಿದೆ. ಅವಳು ಹಿಂದೋರ್ವ ಹುಡುಗನನ್ನು ಪ್ರೀತಿಸಿದ್ದಳಂತೆ. ಅವನು ಅಕಸ್ಮಾತ್ತಾಗಿ ತೀರಿಕೊಂಡಿದ್ದನಂತೆ. ಈಗ ಅವನು ಎದುರೇ ಬಂದಂತಾಗಿ, ‘ಎಲ್ಲವೂ ಕೇವಲ ಯಾಂತ್ರಿಕವಾಗುತ್ತಿದೆ. ಸಾಯುತ್ತೇನೆ’ ಎಂದು ಅಳುತ್ತಾಳೆ. ನಿಮ್ಮ ಸಲಹೆ ನೀಡಿ.

| ಮುಕುಂದರಾಜ್ ವೈಕುಂಠಯ್ಯ ಅಲಿಘರ್

ಬದುಕಿನಲ್ಲಿ ಪ್ರತಿಯೊಂದೂ ಸರಳವಾಗಿಯೇ ಇದ್ದಂತಿರುತ್ತದೆ. ಸರ›ನೆ ಗಂಟುಗಳು ಬಿದ್ದು ಈಗ ನೀವು ಅನುಭವಿಸುತ್ತಿರುವ ಯಾತನೆಯ ಅಲೆಯನ್ನು ಸುತ್ತಲೂ ನಿರ್ವಿುಸಿ ತೊಳಲಾಡಿಸುತ್ತದೆ. ಕರ್ಮಸ್ಥಾನದಲ್ಲಿ ಬೆಂಕಿ, ನೀರು, ಮಣ್ಣು, ಬಿರುಗಾಳಿ, ಆತ್ಮ-ಪರಮಾತ್ಮ, ಪರಾತ್ಪರ ಶಕ್ತಿಗಳ ಬಗೆಗಿನ ವ್ಯಾಖ್ಯಾನ, ಮೋಕ್ಷದ ಬಗೆಗಿನ ಆಕಾಂಕ್ಷೆ, ಜೀವನಾನಂತರದ ಸ್ಥಿತಿಗತಿಯ ಬಗೆಗಿನ ತರ್ಕ ಇತ್ಯಾದಿ ಎಲ್ಲವೂ ಒಳಗೊಂಡು, ಮದುವೆಯ ಕ್ಷೇತ್ರವಾದ ಮೀನರಾಶಿಯಲ್ಲಿನ ಕುಜಗ್ರಹದ ದೋಷ, ಮೀನರಾಶಿಯ ಯಜಮಾನ ಗುರುಗ್ರಹದ ನೀಚತ್ವಗಳಿಂದಾಗಿ ವ್ಯಕ್ತಿತ್ವದಲ್ಲಿ ಕೆಲವು ಸಾಧಕ-ಬಾಧಕ, ಸಂಕೀರ್ಣತೆಗಳನ್ನು, ವೈವಾಹಿಕ ಸಮಸ್ಯೆಗಳನ್ನು ನಿರ್ವಿುಸುತ್ತಿರುತ್ತಾರೆ. ರಾಜಯೋಗದ ಸಿದ್ಧಿ ಇದೆ. ದ್ವಂದ್ವ ವ್ಯಕ್ತಿತ್ವವೂ ಅಡಕವಾಗಿದೆ. ಈಗ ಯಾವುದೋ ಋಣಾನುಬಂಧದಿಂದ ಒಂದುಗೂಡಿದ್ದೀರಿ. ಮುರಿದು ಹೊರಬರುವುದು ಅಸಾಧ್ಯವೇನಲ್ಲ. ನೋಯುತ್ತಿರುವವಳನ್ನು ಸಂಭಾಳಿಸಿ ಮುಂದಕ್ಕೆ ಸಾಗುವುದೂ ಮನುಷ್ಯತ್ವ. ಸಮಾಧಾನ ಮಾಡಿ. ವಿಷ್ಣು ಸಹಸ್ರನಾಮಾವಳಿ ಪಠಿಸಲಿ.

ನಾನು ಮೂಲತಃ ಇಂಜಿನಿಯರ್. ಆದರೆ ಸರಸ್ವತಿ ನದಿ ಇತ್ತೆನ್ನಲಾದ ಜಾಗದ ಒಂದೆಡೆ (ನನಗೆ ಆ ಜಾಗದ ಇಂಥದೇ ಎಂಬುದು ಸ್ಪಷ್ಪವಿದೆ.) ಅಲ್ಲಿಗೆ ಹೋಗಿ ಸರ್ವೆಶ್ವರಿಯಾದ ದುರ್ಗಾಳನ್ನು ಸತತವಾಗಿ ಆರಾಧಿಸೋಣ ಎಂದನಿಸುತ್ತಿದೆ. ಆದರೆ ನನ್ನ ತಂದೆ-ತಾಯಿಗೆ ನಾನೇ ಎಲ್ಲ ಆಸರೆಯೂ ಆಗಿದ್ದೇನೆ. ಹೀಗಾಗಿ ಒಳಗಿನ ಆಸೆಯನ್ನು ನಿಯಂತ್ರಿಸಿದ್ದೇನೆ. ಆದರೆ ಮದುವೆಯಾಗು ಎಂದು ಒತ್ತಡ ತರುತ್ತಿರುವುದು ಕಸಿವಿಸಿ ಮೂಡಿಸುತ್ತಿದೆ. ಅವರಿಂದಲೂ ತಪ್ಪಿಸಿಕೊಂಡು ಓಡಿಹೋಗೋಣ ಎಂಬಷ್ಟು ಹಿಂಸೆಯಾಗುತ್ತದೆ. ಏನು ಮಾಡಲಿ? ಪರಿಹಾರ ಏನು?

| ನಾಗರಾಜ ರಾಜಕೋಟಿ ಕಾಕಿನಾಡ

ಹೆಸರು ಬೇಡ. ಅವರು ನಮ್ಮ ದೇಶ ಕಂಡ ಅದ್ಭುತ ಚೇತನವಾಗಿದ್ದರು. ತಂದೆ-ತಾಯಿಗಳು ಮದುವೆಯಾಗು ಎಂದು ಒತ್ತಡ ತರುವಷ್ಟು ದಿನ ಬದುಕಿರಲಿಲ್ಲ. ‘ತಂದೆ-ತಾಯಿ ಇದ್ದಿದ್ದರೆ ನಾನು ಮದುವೆಯಾಗುತ್ತಿದ್ದೆನೋ ಏನೋ? ಅವರು ಇಲ್ಲದ್ದರಿಂದಾಗಿ ಒಂಟಿ ಜೀವನವಾಯ್ತು. ಆದರೆ ಇದಕ್ಕೆ ವಿಷಾದವೇನಿಲ್ಲ. ಮದುವೆ ಇರದೆ ಜೀವನ ಕಳೆದದ್ದು ತಪ್ಪು ಎಂದು ಈಗ ಅನಿಸುತ್ತಿದೆ’ ಎಂದು ಹೇಳುತ್ತಿದ್ದಾಗ ಅವರಿಗೆ ಬರೋಬ್ಬರಿ 70 ವರ್ಷಗಳು. ಅಧ್ಯಾತ್ಮದ ಕೊಂಡಿ ದಟ್ಟವಾಗಿದ್ದರೂ ಬದುಕನ್ನು ಬೇರೆ ಬಗೆಯಲ್ಲೂ ನೋಡುವ ಶಕ್ತಿ ಇತ್ತು. ನಿಮಗೂ ಬುಧಾದಿತ್ಯ ಯೋಗವಿದೆ. ಕೇತುವಿನ (ಸರ್ಪದ ಬಾಲ) ಬಾಧೆಯು ಬುದ್ಧಿಯನ್ನು ಸುತ್ತಿ ಆಧ್ಯಾತ್ಮಿಕ ಒಲವನ್ನೂ, ಜನ್ಮಜನ್ಮಾಂತರದ ಅವ್ಯಕ್ತ ಸೆಳೆತವೊಂದನ್ನೂ ಮೊಳಕೆ ಒಡೆಸಿದೆ. ನಿಮ್ಮ ಉದ್ದೇಶವನ್ನು ಮೀರುವ-ಮೀರದಿರುವ ಶಕ್ತಿ ಹಾಗೂ ಮಿತಿಗಳನ್ನು ಗುರುಗ್ರಹ ನೀಡಿದೆ. 27 ಬಾರಿ ಮಂಗಳಚಂಡಿಕಾ ಸ್ತೋತ್ರ ಹಾಗೂ ಚಂದ್ರಪೀಡಾ ನಿವಾರಣಾ ಸ್ತೋತ್ರ ಓದಿ. ವರ್ತಮಾನಕ್ಕೆ ಬದಲಾವಣೆಯ ಚಿನ್ನದ ಲೇಪನ ಸಾಧ್ಯ.

ನನ್ನ ಮಗಳಿಗೆ 13 ವರ್ಷ. ಯಾವುದೋ ಯೋಚನೆ, ಏನೋ ಕಲ್ಪನೆಗಳು. ಒಮ್ಮೊಮ್ಮೆ ನಾವು ತಂದೆ-ತಾಯಿ ಎಷ್ಟೇ ಕೂಗಿ ಕರೆದರೂ ಕೇಳಿಸಿಕೊಳ್ಳದ ಯಾವುದೋ ವಿಷಯದಲ್ಲಿನ ತನ್ಮಯತೆಯಿಂದ ನಮ್ಮಲ್ಲಿ ಭಯ ಹುಟ್ಟಿಸುತ್ತಾಳೆ. ಹಾಗೆಂದು ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಹಿಂದೆ ಬೀಳಲಾರಳು. ಒಂದಿಷ್ಟು ನೋಟ್​ಬುಕ್ಕಿನಲ್ಲಿ ಏನೋ ಒಂದಿಷ್ಟನ್ನು ಬರೆದುಕೊಂಡಿದ್ದಾಳೆ. ಒಂದೂ ಅರ್ಥವಾಗುತ್ತಿಲ್ಲ. ಏನಾದರೂ ಅನ್ಯ ಘಾತಕಶಕ್ತಿಗಳು ತೊಂದರೆ ಕೊಡುತ್ತಿವೆಯಾ? ಪರಿಹಾರ ತಿಳಿಸಿ?

| ಪರಿಮಳಾ ಶಿವಲಿಂಗಯ್ಯ ಚಿತ್ರದುರ್ಗ

ಯಾವುದೇ ರೀತಿಯ ಚಿಂತೆ ಬೇಡ. ಜಾತಕದಲ್ಲಿ ತೊಂದರೆಗಳು ಏನೂ ಇಲ್ಲ. ಕಲ್ಪನಾಲೋಕದ ಜಗತ್ತು ಹಲವರಿಗೆ ದೊಡ್ಡ ಆಸ್ತಿಯಾಗುತ್ತದೆ. ಯೋಗಗಳ ಗೊಂಚಲು ಜಾತಕದಲ್ಲಿದೆ. ನಿಮ್ಮ ಇಷ್ಟದಂತೆ ಒಳ್ಳೆಯ ಓದನ್ನು ಪೂರೈಸುತ್ತಾಳೆ. ಒಳ್ಳೆಯ ಕೆಲಸ ಕೂಡ ಸಿಗುತ್ತದೆ. ಮಗಳು ಜೀವನದಲ್ಲಿ ಬಹುದೊಡ್ಡ ಹೆಸರನ್ನು ಸಂಪಾದಿಸುತ್ತಾಳೆ. ಗಣೇಶನನ್ನು, ವಿಷ್ಣುವನ್ನು ಸ್ತುತಿಸಲಿ. ನಿರಾಳರಾಗಿರಿ.

ನನಗೀಗ 82 ವರ್ಷ. ತಿಳಿದೋ ತಿಳಿಯದೆಯೋ ಮೂರು ಮದುವೆಗಳಾದವು. ಮೂವರು ಹೆಂಡತಿಯರಿಗೆ ಐದು ಜನ ಮಕ್ಕಳು. ಜೀವನದಲ್ಲಿ ಬಾಲ್ಯ ಬಡತನದಿಂದ ತುಂಬಿತ್ತು. ಈಗ ಅಪಾರ ಆಸ್ತಿ ಇದೆ. ಶಾಂತಿ ಇಲ್ಲ. ಮನೆಯಲ್ಲಿ ನಿರಂತರ ಕಚ್ಚಾಟ ನಡೆಯುತ್ತಲೇ ಇರುತ್ತದೆ. ಎಷ್ಟು ದಿವಸ ಬದುಕುತ್ತೇನೆಂದು ತಿಳಿಯದು. ಶಾಂತಿ ಸಿಕ್ಕೀತೆ? ಪರಿಹಾರ ಏನು?

| ಕರುಣಾಕರ ಪಿಳ್ಳೈ ಬೆಂಗಳೂರು

ಬದುಕುವ ಹುಮ್ಮಸ್ಸು ಅಭಿನಂದನೀಯ. ಶನೈಶ್ಚರ ಸುಖ ಕೊಡಲಾರ. ಗುರು, ಚಂದ್ರ, ಸೂರ್ಯರು ಶ್ರೀಮಂತಿಕೆ ತಂದುಕೊಟ್ಟರು. ಬುಧನ ಮೂಲಕ ದೊರೆತ ಆಯುಸ್ಸು ಪೂರ್ಣಾವಧಿಯದು. ಬಾಲ್ಯದಲ್ಲಿ ಬಡತನವಿದ್ದರೂ ನಿಮ್ಮ ತಂದೆ ದಾರಿ ತೋರಿಸಿದರು. ಆದರೆ ನಿಮಗೆ ಮಕ್ಕಳಿಗಾಗಿ ದಾರಿಯನ್ನು ತಿಳಿಸಲಾಗಲಿಲ್ಲ. ನಿರಂತರವಾಗಿ ಕಚ್ಚಾಡುವ ಹೆಂಡಂದಿರು ಬಂದರು. ಸುಖಕ್ಕಾಗಿನ ಹುಡುಕಾಟ ನಡೆಸಿದಿರಿ ಎಂಬುದು ನಿಜ. ಆದರೆ ಹೆಂಡಂದಿರ ಮೂಲಕವೇ ಶುಕ್ರ ಸುಖವನ್ನು ಸಂಪೂರ್ಣವಾಗಿ ಹೊಸಕಿಹಾಕಿದ. ನರಸಿಂಹನನ್ನು ಸ್ತುತಿಸಿ. ಶಾಂತಿಗಾಗಿ ನಿರೀಕ್ಷೆ ಇರಲಿ.

ನಮ್ಮದೇ ಆದ ದೊಡ್ಡ ತೆಂಗಿನ ತೋಟವಿದೆ. ಮಾರಾಟವಾದರೆ ನಾಲ್ಕು ಕೋಟಿಯಾದರೂ ಬರಬೇಕು. ಪ್ರಯತ್ನಿಸುತ್ತಲೇ ಇದ್ದೇವೆ. ಮಕ್ಕಳು ಸುಖವಾಗಿದ್ದಾರೆಯಾ ಎಂದು ಪ್ರಶ್ನಿಸಿಕೊಂಡರೆ ಉತ್ತರ ಹೌದೆಂದು ಹೇಳಲಾಗದು. ಹಾಗೆಂದು ನಮಗೆ ಹೊರೆಯೇನೂ ಆಗಿಲ್ಲ. ಒಳ್ಳೆಯ ಸ್ಥಿತಿಯಲ್ಲಿರಬಹುದಾದ ಅವಕಾಶ ಹೇರಳವಾಗಿವೆ. ಆದರೂ ಯಾಕೋ ಎಲ್ಲವೂ ವಿಳಂಬ. ಕುಟುಂಬದ ದೇವರು ಮುನಿಸಿನಲ್ಲಿದೆ ಎಂಬುದು ಕೆಲವರ ಬೋಧೆ. ಅವರು ಹೇಳಿದ ರೀತಿಯಲ್ಲಿ ಪರಿಹಾರಗಳನ್ನು ಮಾಡಿಸಿದವು. ಆದರೂ ಸರಿಹೋಗಿಲ್ಲ. ಯಾಕೆ ಈ ಅತಂತ್ರ ಸ್ಥಿತಿ?

| ಇಂದಿರಾ ನಾರಾಯಣಸ್ವಾಮಿ ಅರಸೀಕೆರೆ

ಯಾರು ಎಂಬುದು ಬೇಡ. ಚಿತ್ರರಂಗದಲ್ಲಿ ಒಂದು ಜಮಾನಾದಲ್ಲಿ ಖ್ಯಾತಿಯ ಶಿಖರಕ್ಕೇರಿದ್ದ ಒಬ್ಬ ದೊಡ್ಡ ಹಿರಿಯ ನಟನ ಜಾತಕಕುಂಡಲಿಗೆ ನಿಮ್ಮ ಮನೆಯವರ ಜಾತಕ ಹತ್ತಿರದಲ್ಲಿದೆ. ಆ ವ್ಯಕ್ತಿ ನಟನಾಗಿ ಖ್ಯಾತಿ ಪಡೆದರು. ಆದರೆ ಬದುಕು ಸಮಾಧಾನಕರವಾಗಿ ಸಾಗಿತ್ತೆ ಎಂದು ಕೇಳಿದರೆ ಉತ್ತರಕ್ಕೆ ತಡಕಾಡುವ ಪರಿಸ್ಥಿತಿ. ನಿಮ್ಮ ಮನೆಯವರದ್ದು, ಆ ನಟನದ್ದು ಜನನ ವಿವರಗಳು (ಒಂದರ್ಧ ಗಂಟೆಯ ವ್ಯತ್ಯಾಸ) ಹೆಚ್ಚೂ ಕಡಿಮೆ ಒಂದೇ. ಆದರೆ ಒಂದೊಂದು ರೀತಿಯ ವ್ಯತ್ಯಾಸ. ಈಗ ನಿಮ್ಮ ಮನೆಯವರೂ ಸಿನಿಮಾ ನಟನಾಗಬಹುದಿತ್ತೆ ಎಂಬ ಪ್ರಶ್ನೆ ಎದ್ದೇಳಬಹುದು. ಆದರೆ ಈ ಪ್ರಶ್ನೆ ಅಸಂಗತ. ಎರಡೂ ಜಾತಕಗಳಲ್ಲಿ (ನಿಮ್ಮ ಮನೆಯವರು ಮತ್ತು ಸಿನಿಮಾ ನಟ) ಸೂರ್ಯನೇ ಹುಳಿ ಹಿಂಡಿದ್ದಾನೆ. ಈಗ ಸೂರ್ಯನು ಹಿಂಡುತ್ತಿರುವ ಈ ಹುಳಿಯನ್ನು ತಪ್ಪಿಸಿಕೊಳ್ಳಲು ನಿಮ್ಮ ಮನೆಯವರು ಪ್ರತಿದಿನ ಆದಿತ್ಯಹೃದಯ ಸ್ತೋತ್ರವನ್ನು ಓದಲಿ. ಗಾಯತ್ರಿಮಂತ್ರ ಪಠಿಸಲಿ. ಅನ್ಯ ಕಾರಣಗಳಿಗಾಗಿ ಶಾಂತಿ-ಸಮಾಧಾನ ನೀಡಲು ಶನೈಶ್ಚರ, ರಾಹು, ಗುರು ಹಾಗೂ ಬುಧರು ಈಗಲೂ ಸದೃಢರಾಗಿದ್ದಾರೆ. ಸೂರ್ಯೋಪಾಸನೆಯಿಂದ ಸಮಾಧಾನ, ಸಂಕಲ್ಪಿತ ಕಾರ್ಯಸಿದ್ಧಿಗಳಿಗೆ ದಾರಿ ಇದೆ. ಜಮೀನು ಮಾರಾಟವಾಗುತ್ತದೆ. ಮನೆಯವರಿಗೆ ಇನ್ನೂ ಆಯುಸ್ಸಿದೆ. ಸಂತೋಷಪಡಿ. ಖ್ಯಾತ ನಟ ಈಗಾಗಲೇ ಜೀವನಯಾತ್ರೆ ಮುಗಿಸಿ ಹೊರಟುಹೋಗಿದ್ದಾರೆ.

Leave a Reply

Your email address will not be published. Required fields are marked *

Back To Top