Friday, 16th November 2018  

Vijayavani

ಜನಾರ್ದನರೆಡ್ಡಿ ಕೇಸ್ ಬೆನ್ನಲ್ಲೇ ಡಿಕೆಶಿಗೆ ಬಂಧನ ಭೀತಿ - ಇಡಿಯಿಂದ 3ನೇ ಬಾರಿ ಇಡಿ ನೋಟಿಸ್ ಜಾರಿ        ಆ್ಯಂಬಿಂಡೆಟ್ ಪ್ರಕರಣದಲ್ಲಿ ಇಡಿ ಹೆಸರಿಗೆ ಆಕ್ಷೇಪ - ಸಿಸಿಬಿ ವಿರುದ್ಧ ಇಡಿ ಜಂಟಿ ನಿರ್ದೇಶಕ ಗರಂ        ಸಚಿವ ಸಂಪುಟ ವಿಸ್ತರಣೆಗೆ ಧನುರ್ಮಾಸದ ಎಫೆಕ್ಟ್ - ಸದ್ಯಕ್ಕಿಲ್ಲ ಆಕಾಂಕ್ಷಿಗಳಿಗೆ ಸಚಿವ ಭಾಗ್ಯ - ಕಾಂಗ್ರೆಸ್ಸಿಗರಲ್ಲಿ ಮತ್ತೆ ಅಸಮಾಧಾನ        ರಾಜ್ಯಾದ್ಯಂತ ಭುಗಿಲೆದ್ದ ರೈತರ ಹೋರಾಟದ ಕಿಚ್ಚು - ರೈತರನ್ನು ಭೇಟಿಯಾಗುವುದಾಗಿ ಹೇಳಿದ ಕುಮಾರಸ್ವಾಮಿ        ಗಾಂಧಿ ಕುಟುಂಬ ಬಿಟ್ಟು ಬೇರೆಯವರು ಎಐಸಿಸಿ 5 ಅಧ್ಯಕ್ಷರಾಗಲಿ - ಕಾಂಗ್ರೆಸ್​ಗೆ ಪ್ರಧಾನಿ ಮೋದಿಯಿಂದ ನೇರ ಸವಾಲು        ತಮಿಳುನಾಡಿನಾದ್ಯಂತ ಗಜ ಚಂಡಮಾರುತದ ಅರ್ಭಟ - 20ಕ್ಕೂ ಹೆಚ್ಚು ಮಂದಿ ದುರ್ಮರಣ - ಅಪಾರ ಆಸ್ತಿ ಪಾಸ್ತಿ, ಬೆಳೆ ನಾಶ       
Breaking News

ಪ್ರಶ್ನೆ ಪರಿಹಾರ

Thursday, 18.01.2018, 3:01 AM       No Comments

| ಮಹಾಬಲಮೂರ್ತಿ ಕೊಡ್ಲೆಕೆರೆ

# ಬ್ಯಾಂಕೊಂದರಲ್ಲಿ ಕೆಲಸಕ್ಕಿದ್ದೇನೆ. ಸದಾ ಒಬ್ಬರ ವಿರುದ್ಧ ಇನ್ನೊಬ್ಬರನ್ನು ಎತ್ತಿಕಟ್ಟುವುದರಲ್ಲೇ ನಿರತರಾಗಿರುವ, ಮೇಲ್ನೋಟಕ್ಕೆ ಅಮಾಯಕರಂತೆ ಕಾಣಿಸಿಕೊಳ್ಳುತ್ತ, ಪರರನ್ನು ನಾಶ ಮಾಡುವುದರಲ್ಲೇ ಮುಳುಗಿರುವ ಜನರನ್ನು ಎದುರಿಸಲಾಗುತ್ತಿಲ್ಲ. ಸೋಲಬಾರದು ಅಂದುಕೊಳ್ಳುತ್ತೇನೆ. ಸೋಲುತ್ತಿದ್ದೇನೆ. ರಾಜೀನಾಮೆ ನೀಡಿದರೆ ಕೆಲಸ ಹುಡುಕುವ, ಇಲ್ಲವೆ ಸ್ವಂತ ಉದ್ಯೋಗ ಮಾಡುವ ಎಂದು ಆಶೆ. ದೈವಬೆಂಬಲ ಸಿಗಬಹುದೆ?

| ಭವ್ಯಾ ಧಾರವಾಡ

ಬೆರಳು ನೋವು ಎಂದು ಬೆರಳನ್ನೇ ಕತ್ತರಿಸುವ ಕಾಯಕ ಬೇಡ. ಆನೆಗೆ ಅದರ ದಾರಿಯೇ ದಾರಿ. ನಾಯಿಗಳಿಗೆ ಕೂಗು, ಬೊಗಳುವುದು ದೈವದತ್ತ. ಆನೆಯ ಬಳಿ ಬಂದರೆ, ಕೂಗಿದರೆ ಸಾವು ನಿಶ್ಚಿತ. ಆದರೆ ನಾಯಿ ಬಳಿ ಬಾರದು. ಆನೆ ಇಷ್ಟಕ್ಕೇ ಮೈ ಪರಚಿಕೊಳ್ಳಬಾರದು. ಸಂತೆಯಲ್ಲಿದ್ದೀರಿ. ಪ್ರಾರಬ್ಧ ಎದುರಾದಾಗ ಹುಚ್ಚರ ಸಂತೆಯೇ ಗತಿ. ನಿಮ್ಮ ಗುರಿ ಮತ್ತು ಹಂಬಲ ನಿಶ್ಚಿತವಾದ ಅನುಭವದಿಂದಾಗಿ ನಡೆಯುವಂತೆ, ನಡೆಸುವಂತಿದ್ದರೆ, ಸ್ವಂತ ಉದ್ಯೋಗ ಮಾಡಿ. ಸದ್ಯ ಬಂಡವಾಳ ಹಾಕುವುದಕ್ಕಿಂತ, ಬೌದ್ಧಿಕವಾದ ಹಳಿಯ ಮೇಲೆ ನಡೆಸಬಹುದಾದ ಸ್ವಉದ್ಯೋಗ ಮಾಡುವಿರಾದರೆ ಸರಿ. ಅರಳೆಯ ತುಂಡಿಗೆ ತುಸು ಕಾಡಿಗೆ ಹಚ್ಚಿ ಶನೈಶ್ಚರನ ಸ್ತುತಿಯೊಂದಿಗೆ ಮನೆಯ ಹೊರಭಾಗದಲ್ಲಿ ಆಗ್ನೇಯ ದಿಕ್ಕಿಗೆ ಚೆಲ್ಲಿ ದುಷ್ಟಶಕ್ತಿ ನಿವಾರಣಾ ಸಂಕಲ್ಪ ಸಿದ್ಧಿ ನಡೆಸಿ. ಶನೈಶ್ಚರನ ಒಲುಮೆ ನಿಮಗೆ ಲಭ್ಯ. ಚಂದ್ರಚೂಡ ಅಷ್ಟೋತ್ತರ ಓದಿ.

# ಮದುವೆಯಾಗಿ ಏಳು ವರ್ಷಗಳು ಆದವು. ಮೂರು ಬಾರಿ ಗರ್ಭಿಣಿಯಾದ ಪತ್ನಿಗೆ ನೋವೇ ತುಂಬಿ ತುಂಬಿ ಗರ್ಭಸ್ರಾವವಾಗುತ್ತಿದೆ. ವೈದ್ಯರ ಸಲಹೆ ಸೂಚನೆ ಕೇಳಿದೆವು, ಪಾಲಿಸಿದೆವು. ಪರಿಣಾಮ ಶೂನ್ಯ. ತಮ್ಮಿಂದ ಏನಾದರೂ ಪರಿಹಾರಮಾರ್ಗ ತಿಳಿಯಬಹುದೆ? ದಾರಿ ಹೇಗೆಂದು ತಿಳಿಸಿ ಹೇಳಿ.

| ಪರಮಪ್ಪ ಡೋಂಗ್ರೆ ಶಹಾಬಾದ್

ನಮ್ಮ ನಂಬಿಕೆ ನಮ್ಮನ್ನು ಕಾಪಾಡುತ್ತವೆ. ವೈದ್ಯರನ್ನು ನಂಬಿ ನಡೆದಿದ್ದೀರಿ. ಪರಿಣಾಮ ಕಾಣಲಿಲ್ಲ. ಆದರೆ ವೈದ್ಯರು ಸೂಕ್ತವಾದುದನ್ನು ನಡೆಸಿಲ್ಲ ಎಂದರ್ಥವಲ್ಲ. ವೈದ್ಯರ ಸಲಹೆ ಖಂಡಿತವಾಗಿ ಕೇಳಿ. ಸದ್ಯ ನೀವು ಮತ್ತು ಪತ್ನಿ ಇಬ್ಬರಿಗೂ ಶನಿಕಾಟ ದೂರವಾಗಿದೆ. ಈಗ ಕಾಲವು ನಿಮ್ಮ ಜಾತಕದಲ್ಲಿ ಶುಕ್ರನ ಕಾರಣಕ್ಕಾಗಿ ಹಾಗೂ ನಿಮ್ಮ ಪತ್ನಿಯ ಜಾತಕದಲ್ಲಿ ಚಂದ್ರನ ಕಾರಣಕ್ಕಾಗಿ ಸರ್ಪದೋಷವನ್ನು ಮೆಟ್ಟಿ ನಿಲ್ಲಲು ಸಜ್ಜಾಗಿದೆ. ಸಮುದ್ರತಟದಲ್ಲಿ ಸಿಗುವ ಚಿಪ್ಪುಗಳನ್ನು ಕುಟ್ಟಿ, ಬಿಸಿ ಬಿಸಿ ಬೆಲ್ಲದೊಂದಿಗೆ ಬೆರೆಸಿದ ಐದು ಗೋಲಿಯಾಕಾರದ (ತಂಪಾದಾಗ ಗಟ್ಟಿಯಾಗುತ್ತವೆ) ಗೋಲಗಳಿಗೆ ಭಾನುವಾರದಿಂದ ಗುರುವಾರದವರೆಗೆ ಐದು ದಿನ ಕ್ಷೀರಾಭಿಷೇಕ ಮಾಡಿ. ನಂತರ ಜಲಾಭಿಷೇಕ ಮಾಡಿ. ಗುರುವಾರ ಅವುಗಳನ್ನು ತೆಂಗಿನಮರದ ಕೆಳಗೆ ಚೆಲ್ಲಿ. ಇದನ್ನು ಮೂರು ತಿಂಗಳು ಮಾಡಿ. ಶುಕ್ರವಾರ, ಶನಿವಾರ ಕ್ರಮವಾಗಿ ಶ್ರೀ ಲಲಿತಾ ಸಹಸ್ರನಾಮಾವಳಿ, ಶ್ರೀ ವಿಷ್ಣು ಸಹಸ್ರನಾಮಾವಳಿ ಓದಿ. ಇಚ್ಛಿಸಿದ ವಿಷಯದಲ್ಲಿ ಸಾಫಲ್ಯವಿದೆ.

# ನಮ್ಮ ಮಗ ಹಾಸ್ಟೆಲಿನಲ್ಲಿದ್ದು, ಒಳ್ಳೆಯದಾಗಿ ಬಿಇ ಓದುತ್ತಿದ್ದಾನೆ. ಆದರೆ ಕಳೆದ ಆರು ತಿಂಗಳಿನಿಂದ ಅವನದು ವಿಚಿತ್ರ ಸಮಸ್ಯೆ. ಹಾಸ್ಟೆಲ್​ನಲ್ಲಿ ಊಟ ಮಾಡಿ ಬಿಟ್ಟ ಆಹಾರತ್ಯಾಜ್ಯಗಳನ್ನೆಲ್ಲ ನನ್ನ ಮೇಲೆ ಎಸೆದು ಹೋಗುತ್ತಾರೆ ಎಂಬ ಭಾವನೆ ಕನಸಿನಲ್ಲಿ ಬರುತ್ತದಂತೆ. ಛೇ, ಛೇ, ಛೇ ಎಂದು ಕೂಗಿದಾಗ ರೂಮ್ೆುೕಟ್​ಗಳು ಸಮಾಧಾನ ಮಾಡುತ್ತಾರೆ. ಆದರೆ ನನ್ನ ಸ್ಥಿತಿಗೆ ತೀರ ನಾಚಿಕೆಯಾಗುತ್ತದೆ. ಎಚ್ಚರಾದಾಗ ತೀವ್ರವಾದ ಹಸಿವು ಆಗುತ್ತಿರುತ್ತದೆ’ ಎನ್ನುತ್ತಿದ್ದಾನೆ. ಕನಸಿಗಿಂತ ತಾನು ಛೇ… ಛೇ… ಎಂದು ಕಿರಿಚಾಡುವುದು ತುಂಬ ಅಸಹನೀಯವಾಗುತ್ತಿದೆ ಎನ್ನುತ್ತಿದ್ದಾನೆ. ಪರಿಹಾರ ಇದೆಯೆ?

| ಭವಾನಿ ಸುರೇಶ್ ಸೋಮವಾರಪೇಟೆ

# ನಮ್ಮ ಸೂಕ್ಷ್ಮ ನಡವಳಿಕೆಗಳನ್ನು ರಾಗ, ದ್ವೇಷಾದಿಗಳ ಇತಿಮಿತಿಗಳನ್ನು, ವ್ಯಕ್ತಿತ್ವದ ಗಟ್ಟಿತನವನ್ನು ಲಗ್ನಭಾವದ ಮೂಲಕವೇ ವಿಶ್ಲೇಷಿಸಲು ಭಾರತೀಯ ಜ್ಯೋತಿಷ್ಯವಿಜ್ಞಾನ ನಿರ್ದೇಶಿಸುತ್ತದೆ. ಕಾಮ, ಕ್ರೋಧ, ಲೋಭ, ಮೋಹ, ಮದ, ಮಾತ್ಸರ್ಯಾದಿಗಳು ಈ ಭಾವದಿಂದಲೇ ತಿಳಿಯುವುದು ಸುಲಭ. ಕಾಮ ಕ್ರೋಧಾದಿ ಅರಿಷಡ್ವರ್ಗಗಳನ್ನು ಗೆದ್ದಾಗ ಧರ್ವರ್ಥ ಕಾಮ ಮೋಕ್ಷಗಳ ನೆಲೆಯಲ್ಲಿಯೇ ಉತ್ತಮವಾದ ಬದುಕನ್ನು ಪಡೆಯಲು ಸಾಧ್ಯ. ಆದರೆ ರಾಹುಕೇತುಗಳೆಂಬ ಛಾಯಾಗ್ರಹಗಳು ಚಂದ್ರ, ಶನಿ, ಸೂರ್ಯರ ಸಹಾಯದಿಂದ ಕೆಲವು ವೈಪರೀತ್ಯಗಳನ್ನು ತಂದು ಉತ್ತಮವಾದ ಬದುಕನ್ನೂ; ಕೀಳರಿಮೆ, ಮೇಲರಿಮೆ, ಅತಂತ್ರತೆ, ಅಸಹಾಯಕತೆಗಳಿಂದ ತೊಳಲಾಟವನ್ನಾಗಿಸಿ ಪೀಡೆ ಕೊಡುತ್ತವೆ. ನಿಮ್ಮ ಮಗನ ಸಂದರ್ಭದಲ್ಲಿ ರಾಹುವಿನ ತೊಂದರೆ ಇದೆ. ನಿಮ್ಮ ಮಗ ಪ್ರತಿದಿನ ಬಿಳಿಯ ನ್ಯಾಪ್ಕಿನ್ ಪೇಪರ್​ಗೆ ಒಂದೊಂದು ಹನಿ ಕೆಂಪು, ಕಪ್ಪು, ನೀಲಿ ಇಂಕ್ ಹನಿಸಿ ನರಸಿಂಹ ಕರಾವಲಂಬ ಸ್ತೋತ್ರ ಓದಲಿ. ಮೂರು ತಿಂಗಳ ನಂತರ ಆ ನ್ಯಾಪ್ಕಿನ್ ಪೇಪರುಗಳನ್ನು ಅವರೇ ಮರದ ತಳದಲ್ಲಿ ಮಣ್ಣು ತೋಡಿ ಮುಚ್ಚಿ ಬರಲಿ. ರಾತ್ರಿಯ ಕನಸುಗಳು ಭಯ ಏಳಿಸದಂತೆ ನಿವಾರಣೆಯಾಗುತ್ತವೆ.

# ಪತಿ ಮತ್ತು ನನ್ನ ನಡುವೆ ಮನಸ್ತಾಪ ಜಾಸ್ತಿಯಾಗುತ್ತಿದೆ. ಏನೇ ಮಾಡಿದರೂ ನನ್ನನ್ನು ಕೆರಳಿಸುತ್ತಾರೆ. ನನಗೂ ಅದೇನೋ ಏನೋ ಮೌನವಾಗಿರಬೇಕು ಎಂದರೆ ದೃಢ ನಿರ್ಧಾರ ತಳೆದಿದ್ದರೂ ಒಂದು ಹಂತದಲ್ಲಿ ತಾಳ್ಮೆ ಮಾಯವಾಗಿ ಮಾತು, ರಾದ್ಧಾಂತ, ಒಟ್ಟಿನಲ್ಲಿ ಅಸ್ತವ್ಯಸ್ತವಾಗಿ ಹೋಗುತ್ತದೆ. ಮಗ ಭಯ ಬೀಳುತ್ತಾನೆ, ಮಂಕಾಗಿ ಕುಳಿತುಕೊಳ್ಳುತ್ತಾನೆ. ಯಾಕೋ ಏನೋ ಇದರಿಂದ ಹೊರಬರಲಾಗದು. ಮಗನ ಸ್ಥಿತಿ ಕಂಡು ಪಾಪಪ್ರಜ್ಞೆ. ಇವರ ಮನೋಭಾವವೊಂದು ವಿಚಿತ್ರ. ಪರಿಹಾರವಿದೆಯೆ?

| ಸೌರಭ ಕುಮಾರಿ ಪಾಟ್ನಾ

ಮಗನ ಕಾರಣಕ್ಕಾಗಿ ಸುಮ್ಮನಿರಿ. ಚಂದ್ರನ ದೋಷದಿಂದಾಗಿ ನೀವಿಬ್ಬರೂ ಪರಸ್ಪರ ಕೂಗಾಡಲೇಬೇಕಾಗಿ ಬರುತ್ತವೆ. ಋಣಾನುಬಂಧ ರೂಪೇಣ ಜಗತ್ತು ಸಂಬಂಧಗಳನ್ನು ನಿರ್ವಿುಸಿಕೊಡುತ್ತದೆ. ನಿಮ್ಮ ಮನೆಯವರು ಪ್ರಶ್ನೆ ಕೇಳಿದ್ದರೂ ಇದೇ ಉತ್ತರ. ಸುಮ್ಮನಿರಲು ಕಲಿಯಬೇಕು. ಪಾಲಿಗೆ ಬಂದದ್ದು ಪಂಚಾಮೃತ. ಮಗನ ಬಗೆಗಾಗಿ ಪ್ರತಿದಿನ ಪ್ರಸನ್ನ ಗಣಪತಿ ಅಷ್ಟೋತ್ತರ ಓದಿ. ಕುಜ ಹಾಗೂ ಶನೈಶ್ಚರರ ನಡುವಣ ಜಿಣುಕುಗಳು ನಿಮ್ಮಿಬ್ಬರ ವಿಷಯದಲ್ಲಿ ಬಾಧೆಗೊಳಗಾಗಿವೆ. ಕರಿ ಬಳೆಗಳ ತುಂಡುಗಳನ್ನು ಸುಣ್ಣ ಮತ್ತು ಎಳ್ಳೆಣ್ಣೆ ಬೆರೆಸಿ ಪ್ರತಿ ಮಂಗಳವಾರ ಸಾಯಂಕಾಲ ಯಾರೂ ತುಳಿಯದ ಜಾಗದಲ್ಲಿನ ಎಕ್ಕದ ಗಿಡದ ತಳಕ್ಕೆ ಎಸೆದು ಬನ್ನಿ. ಚಂಡಿಕಾ ಸ್ತೋತ್ರ ಪಠಿಸಿ.

# ಮುಂಬೈನ ಪ್ರಮುಖ ಸ್ಥಳದಲ್ಲಿರುವ ದೊಡ್ಡದಾದ ಆಸ್ತಿ ಕಳೆದ 21 ವರ್ಷಗಳಿಂದ ವ್ಯಾಜ್ಯದಲ್ಲಿದೆ. ಯಾತನೆಗಳ ಸಂಖ್ಯೆ ಲೆಕ್ಕವಿಲ್ಲದಷ್ಟು. ನ್ಯಾಯ ಸಿಗಬಹುದೆ? ಏನು ಮಾಡಬಹುದು?

| ಮನು ಜಾಗೀರದಾರ್ ಶಿರಹಟ್ಟಿ

ಹುಣ್ಣಿಮೆಯ ದಿನ ಅಂಜೂರದ ಹಣ್ಣುಗಳ ಹೋಳುಗಳನ್ನು ಹಸುವಿನ ಹಾಲಲ್ಲಿರಿಸಿ, ಕೇಸರಿ ದಳಗಳನ್ನು ಸೇರಿಸಿ, ಔದುಂಬರ ವೃಕ್ಷದ ಕೆಳಗೆ ರಾತ್ರಿಯ ಹೊತ್ತು ಸುರಿದು, ದತ್ತನನ್ನು ಪ್ರಾರ್ಥಿಸಿ. ಭೂಮಿಯ ಸಂಬಂಧವಾದ, ಆಸ್ತಿಯ ಸಂಬಂಧವಾದ ವಿಷಯಗಳ ಪರಿಕ್ರಮ ವರ ವಿರಿಂಚಿ (ಹರಿ, ಹರ, ಬ್ರಹ್ಮ), ವಿಮೋಚನ (ಸೂರ್ಯ, ಅಗ್ನಿ, ಚಂದ್ರ) ಎಳೆಗಳ ಮೂಲಕವೇ ಸಿದ್ಧಿಯ ದಾರಿಗೆ ಹೊರಳಿಕೊಳ್ಳಬೇಕು. ಆಧುನಿಕ ಎಂದು ಕರೆಸಿಕೊಳ್ಳಲ್ಪಟ್ಟ ಸದ್ಯದ ವಿಕೃತಕಾಲದ ಓಟದ ಸಂದರ್ಭದಲ್ಲಿ ಇದು ಕಷ್ಟಕರ. ಹೀಗಾಗಿ ಹಸುವಿನ ಹಾಲು, ಅಂಜೂರ, ಕೇಶದ ಮಿಶ್ರಣ ದತ್ತಾತ್ರೇಯನನ್ನು ಸಂವೇದಿಸಿ ನಿಮ್ಮ ಪಾಲಿಗೆ ಗೆಲುವು ಸಿಗಲಿ. ದತ್ತನಿಂದ ದತ್ತಗೊಂಡರೆ ಸಿಗಲಾರದು ಎಂಬುದು ಸಿಕ್ಕೇ ಸಿಗುತ್ತದೆ ಎಂಬುದು ಶಾಸ್ತ್ರನಿರ್ಣಯ.

(ಲೇಖಕರು ಕಥೆಗಾರರು ಮತ್ತು ಜ್ಯೋತಿಷ ವಿಜ್ಞಾನ ಸಂಶೋಧಕರು)

(ಪ್ರತಿಕ್ರಿಯಿಸಿ: [email protected], [email protected])

Leave a Reply

Your email address will not be published. Required fields are marked *

Back To Top