ಪ್ರವೇಶಪತ್ರ ಕೊಡದಿರುವುದಕ್ಕೆ ವಿದ್ಯಾರ್ಥಿ ಆತ್ಮಹತ್ಯೆ: ಮಾನ್ವಿಯ ಲೊಯೊಲಾ ಕಾಲೇಜು ಪ್ರಾಂಶುಪಾಲರ ವಿರುದ್ಧ ದೂರು

ಮಾನ್ವಿ: ಪದವಿ ತರಗತಿಯ ಪರೀಕ್ಷೆಗೆ ಹಾಜರಾಗಲು ಪ್ರವೇಶಪತ್ರ ಕೊಡಲಿಲ್ಲ ಎಂದು ಬೇಸತ್ತು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮಾನ್ವಿಯ ಲೊಯೊಲಾ ಪದವಿ ಕಾಲೇಜಿನ ಬಿ.ಕಾಂ., 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಕುಮಾರ ನಾಯಕ (21) ಆತ್ಮಹತ್ಯೆ ಮಾಡಿಕೊಂಡವ. ಅಂಬೇಡ್ಕರ್​ ವಸತಿ ನಿಲಯದಲ್ಲಿ ನೆಲೆಸಿದ್ದ ಈತ ಹಾಸ್ಟೆಲ್​ ಆವರಣದಲ್ಲಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪರೀಕ್ಷೆಗಳು ಆರಂಭವಾಗಿದ್ದರೂ ಈತನಿಗೆ ಪ್ರವೇಶಪತ್ರ ನೀಡಲು ಪ್ರಾಂಶುಪಾಲ ಫಾದರ್​ ರಾಯಸ್ಕಿನ್​ ನಿರಾಕರಿಸಿದ್ದೇ ಇದಕ್ಕೆ ಕಾರಣ ಎಂದು ಮೃತನ ಸಂಬಂಧಿಗಳು ಆರೋಪಿಸಿದ್ದಾರೆ.

ಪರೀಕ್ಷೆ ಆರಂಭವಾಗಿದ್ದರೂ ಈತನಿಗೆ ಪ್ರಾಂಶುಪಾಲರು ಹಾಲ್​ಟಿಕೆಟ್​ ನೀಡಲು ನಿರಾಕರಿಸಿದ್ದರು. ಇದರಿಂದ ಕುಮಾರ ನಾಯಕ ತುಂಬಾ ನೊಂದುಕೊಂಡಿದ್ದ. ಈ ಹಿನ್ನೆಲೆಯಲ್ಲಿ ಆತನ ಪಾಲಕರು ಪ್ರಾಂಶುಪಾಲರ ಬಳಿ ಹೋಗಿ ಪ್ರವೇಶಪತ್ರ ನೀಡುವಂತೆ ಮನವಿ ಮಾಡಿಕೊಂಡಿದ್ದರು. ಆದರೂ ಅವರು ಕೊಡಲು ನಿರಾಕರಿಸಿದ್ದರು ಎನ್ನಲಾಗಿದೆ. ಮಾನ್ವಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

Leave a Reply

Your email address will not be published. Required fields are marked *