ಪ್ರವಾಸಿಗರ ಪ್ಲಾಸ್ಟಿಕ್ ವಸ್ತುಗಳಿಗೆ ಶುಲ್ಕ

ರಾಮನಗರ: ಇಲ್ಲಿನ ಪ್ರವಾಸಿ ತಾಣ ರಾಮದೇವರ ಬೆಟ್ಟವನ್ನು ಸಂಪೂರ್ಣ ಪ್ಲಾಸ್ಟಿಕ್​ವುುಕ್ತಗೊಳಿಸಲು ಮುಂದಾಗಿರುವ ಅರಣ್ಯ ಇಲಾಖೆ ಪ್ರವಾಸಿಗರು ಕೊಂಡೊಯ್ಯುವ ಪ್ಲಾಸ್ಟಿಕ್​ಗೆ ಸ್ಟಿಕ್ಕರ್ ಅಂಟಿಸಿ, ಶುಲ್ಕ ಪಡೆಯುವ ಯೋಜನೆ ರೂಪಿಸಲು ಚಿಂತನೆ ನಡೆಸಿದೆ.

ಹೌದು, ರಾಮದೇವರ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ನೂತನ ಯೋಜನೆ ಜಾರಿಗೆ ಅರಣ್ಯ ಇಲಾಖೆ ಅಗತ್ಯ ಸಿದ್ಧತೆ ನಡೆಸಿದೆ. ಬೆಟ್ಟ ಪ್ರಕೃತಿ ಸೌಂದರ್ಯ ಹೊಂದಿರುವ ಪ್ರವಾಸಿ ತಾಣವಾಗಿದೆ. ಅಲ್ಲದೆ ರಣಹದ್ದುಗಳ ಸಂರಕ್ಷಣಾ ಧಾಮವಾಗಿರುವುದರಿಂದ ಭೇಟಿ ನೀಡುವವರ ಸಂಖ್ಯೆ ಜಾಸ್ತಿಯಾಗುತ್ತಿದೆ. ಪ್ರವಾಸಿಗರು ಬಳಸುವ ಪ್ಲಾಸ್ಟಿಕ್​ಗಳಿಂದ ಬೆಟ್ಟ ಪ್ಲಾಸ್ಟಿಕ್​ವುಯವಾಗಿ, ಮಾಲಿನ್ಯಗೊಳ್ಳುವ ಸಾಧ್ಯತೆ ಅಧಿಕವಾಗಿದೆ. ಅರಣ್ಯ ಇಲಾಖೆ ಬೆಟ್ಟವನ್ನು ಪ್ಲಾಸ್ಟಿಕ್​ವುುಕ್ತ ಪ್ರದೇಶ ಎಂದು ಈಗಾಗಲೇ ಘೊಷಿಸಿದೆ.

ಪ್ರವಾಸಿಗರಲ್ಲಿ ಜಾಗೃತಿ ಮೂಡಿಸಲು ಬೆಟ್ಟದ ಪ್ರವೇಶದ್ವಾರದಲ್ಲಿರುವ ಪಾಸ್​ಕೌಂಟರ್​ನಲ್ಲಿ ನೀಡುವ ಪ್ರವೇಶ ಶುಲ್ಕದ ಪಾಸ್​ನಲ್ಲಿ ಪ್ಲಾಸ್ಟಿಕ್ ಬಳಸದಂತೆ ಜಾಗೃತಿ ಮೂಡಿಸಲಾಗುತ್ತದೆ. ಬೆಟ್ಟಕ್ಕೆ ಮಾಂಸಾಹಾರ ಒಯ್ಯುವುದನ್ನು ನಿಷೇಧಿಸಲಾಗಿದೆ. ಪ್ಲಾಸ್ಟಿಕ್​ನಿಂದ ಕಟ್ಟಿದ ಆಹಾರದ ಪೊಟ್ಟಣಗಳನ್ನು ಪಾಸ್​ಕೌಂಟರ್​ನಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಎಲ್ಲೆಂದರಲ್ಲಿ ತ್ಯಾಜ್ಯ ಬಿಸಾಡದಂತೆ ಪಾಸ್​ಕೌಂಟರ್ ಪಕ್ಕದಲ್ಲಿ ಕಸದತೊಟ್ಟಿ ಇರಿಸಲಾಗಿದೆ. ಆದರೂ ಬಹುತೇಕ ಪ್ರವಾಸಿಗರು ಪ್ಲಾಸ್ಟಿಕ್ ಪೊಟ್ಟಣವನ್ನು ಬೆಟ್ಟದೊಳಗೆ ಬಿಸಾಡಿ ಸ್ವಚ್ಛತೆ ಹಾಳುಮಾಡುತ್ತಿರುವ ಆರೋಪವಿದೆ. ಇದಕ್ಕೆ ಕಡಿವಾಣ ಹಾಕಲು ಅರಣ್ಯ ಇಲಾಖೆ ಹೊಸ ಯೋಜನೆ ರೂಪಿಸಿದೆ.

ಏನಿದು ಯೋಜನೆ..?: ಪ್ರವಾಸಿಗರು ಬೆಟ್ಟದೊಳಕ್ಕೆ ಕೊಂಡೊಯ್ಯುವ ಪ್ಲಾಸ್ಟಿಕ್ ಪೊಟ್ಟಣಗಳ ಮೇಲೆ ಸ್ಟಿಕ್ಕರ್ ಅಂಟಿಸಿ, ಅವರಿಂದ 10 ರೂ. ಪಡೆಯಲಾಗುತ್ತದೆ. ವಾಪಸ್ ಬರುವಾಗ ಆ ಪ್ಲಾಸ್ಟಿಕ್ ಪೊಟ್ಟಣವನ್ನು ವಾಪಸ್ ನೀಡಿ ಪ್ರವೇಶ ದ್ವಾರದಲ್ಲಿರುವ ಕಸದ ತೊಟ್ಟಿಯಲ್ಲಿ ಹಾಕಿದರೆ ಪ್ರವಾಸಿಗರು ನೀಡಿದ ಹಣವನ್ನು ವಾಪಸ್ ಮಾಡಲಾಗುತ್ತದೆ. ಒಂದು ವೇಳೆ ಪ್ಲಾಸ್ಟಿಕ್ ಅನ್ನು ಬೆಟ್ಟದಲ್ಲಿ ಬಿಟ್ಟುಬಂದರೆ ಹಣ ನೀಡಲಾಗುವುದಿಲ್ಲ. ಆ ಕಾರಣಕ್ಕೆ ಬಹುತೇಕ ಪ್ರವಾಸಿಗರು ಕೊಂಡೊಯ್ದ ಪ್ಲಾಸ್ಟಿಕ್ ಅನ್ನು ಎಲ್ಲಿಯೂ ಎಸೆಯದೆ, ಪಾಸ್​ಕೌಂಟರ್ ಬಳಿ ಹಿಂದಿರುಗಿಸುವುದರಿಂದ ಬೆಟ್ಟದಲ್ಲಿ ಸ್ವಚ್ಛ ಮತ್ತು ಪ್ಲಾಸ್ಟಿಕ್ ಮುಕ್ತ ವಾತಾವರಣ ನಿರ್ವಿುಸಬಹುದೆಂಬುದು ಇಲಾಖೆ ಚಿಂತನೆಯಾಗಿದೆ. ಈ ಬಗ್ಗೆ ಮೇಲಧಿಕಾರಿಯಿಂದ ಅನುಮತಿ ಪಡೆದು ಯೋಜನೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ.

ಪ್ರವಾಸಿ ತಾಣಗಳನ್ನು ಪ್ಲಾಸ್ಟಿಕ್​ವುುಕ್ತಗೊಳಿಸುವ ಉದ್ದೇಶದಿಂದ ಅರಣ್ಯ ಇಲಾಖೆ ಜಾರಿಗೊಳಿಸಲು ಉದ್ದೇಶಿಸಿರುವ ಯೋಜನೆ ಸ್ವಾಗತಾರ್ಹ. ಕಟ್ಟುನಿಟ್ಟಿನ ನಿಯಮ ಜಾರಿಯಾದರೆ ಮಾತ್ರ ಪ್ರವಾಸಿಗರು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸುತ್ತಾರೆ.

| ಸಿದ್ದಪ್ಪ, ಪರಿಸರ ಪ್ರೇಮಿ

ರಾಮದೇವರ ಬೆಟ್ಟವನ್ನು ಪ್ಲಾಸ್ಟಿಕ್​ವುುಕ್ತ ಪ್ರದೇಶ ಎಂದು ಘೊಷಿಸಲಾಗಿದೆ. ಆದರೂ ಕೆಲ ಪ್ರವಾಸಿಗರು ಪ್ಲಾಸ್ಟಿಕ್ ಎಸೆಯುತ್ತಾರೆ. ಅದನ್ನು ತಡೆಯಲು ಈ ಚಿಂತನೆ ನಡೆಸಲಾಗಿದೆ. ಸ್ಟಿಕ್ಕರ್ ಅಂಟಿಸಿದ ಪ್ಲಾಸ್ಟಿಕ್ ವಾಪಸ್ ಮಾಡಿದರೆ ಅವರು ನೀಡಿದ ಹಣವನ್ನು ವಾಪಸ್ ನೀಡಲಾಗುವುದು. ಇಲ್ಲವಾದರೆ ಆ ಹಣವನ್ನು ಬೆಟ್ಟದ ಸ್ವಚ್ಛತಾ ಕಾರ್ಯಕ್ಕೆ ಬಳಸಲಾಗುವುದು.

| ತಳೇಶ್, ಆರ್​ಎಫ್​ಒ, ರಾಮನಗರ

Leave a Reply

Your email address will not be published. Required fields are marked *