More

  ಪ್ರತ್ಯೇಕ ಪ್ರಕರಣದಲ್ಲಿ ನಾಲ್ವರ ಸಾವು

  ವಿಜಯವಾಣಿ ಸುದ್ದಿಜಾಲ ನೆಲಮಂಗಲ/ಹೊಸಕೋಟೆ
  ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ. ರಾ.ಹೆದ್ದಾರಿ 48ರ ಟಿ.ಬೇಗೂರು ಬಳಿ ರಸ್ತೆದಾಟುತ್ತಿದ್ದಾಗ ವೇಗವಾಗಿ ಬಂದ ವಾಹನ ಡಿಕ್ಕಿಯಾಗಿ ಶಿಕ್ಷಕಿ ಮೃತಪಟ್ಟರೆ, ನಗರದ ರೇಣುಕಾನಗರದಲ್ಲಿ ಟಾಟಾಏಸ್ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಇನ್ನೂ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು-ಜಿಂತಾಮಣಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರು ಹಾಗೂ ಎರಡು ಬೈಕ್‌ಗಳ ನಡುವಿನ ಅಪಘಾತದಲ್ಲಿ ಇಬ್ಬರು ಕೊನೆಯುಸಿರೆಳೆದಿದ್ದಾರೆ.
  ನೆಲಮಂಗಲ ತಾಲೂಕು ರಾ.ಹೆದ್ದಾರಿ 48ರ ಟಿ.ಬೇಗೂರು ಬಳಿ ಬುಧವಾರ ಸಂಜೆ ರಸ್ತೆದಾಟುತ್ತಿದ್ದಾಗ ವಾಹನ ಡಿಕ್ಕಿ ಹೊಡೆದು ತೀವ್ರಗಾಯಗೊಂಡಿದ್ದ ತಿಪ್ಪಗೊಂಡನಹಳ್ಳಿ ಶಾಲೆಯ ಶಿಕ್ಷಕಿ ಶಿವರಾಜಮ್ಮ(56) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೂಲತಃ ದೊಡ್ಡಬಳ್ಳಾಪುರ ತಾಲೂಕಿನ ಮಾರಿಮಾಕನಹಳ್ಳಿ ನಿವಾಸಿಯಾಗಿದ್ದ ಶಿವರಾಜಮ್ಮ, 15ವರ್ಷದಿಂದ ನಗರ ಮಲ್ಲಪ್ಪ ಬಡಾವಣೆಯಲ್ಲಿ ವಾಸವಾಗಿದ್ದು, 7-8ವರ್ಷದಿಂದ ತಿಪ್ಪಗೊಂಡನಹಳ್ಳಿ ಶಾಲೆ ಶಿಕ್ಷಕಿಯಾಗಿದ್ದರು.
  ಬುಧವಾರ ಸಂಜೆ 4.30ರಲ್ಲಿ ಶಾಲೆ ಮುಗಿಸಿಕೊಂಡು ಟಿ.ಬೇಗೂರು ಬಳಿ ರಸ್ತೆ ದಾಟುತ್ತಿದ್ದಾಗ ತುಮಕೂರು ಕಡೆಯಿಂದ ಬಂದ ಖಾಸಗಿ ವಾಹನ ಡಿಕ್ಕಿ ಹೊಡೆದಿದೆ. ಸ್ಥಳೀಯರು ಸಮೀಪದ ಶ್ರೀ ಖಾಸಗಿ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಅಪಘಾತದಲ್ಲಿ ಬೈಕ್ ಸವಾರ ಮರಣ: ನೆಲಮಂಗಲದ ರೇಣುಕಾನಗರದಲ್ಲಿ ಬೈಕ್, ಟಾಟಾಏಸ್ ಮುಖಾಮುಖಿ ಡಿಕ್ಕಿಯಾಗಿ ಬುಧವಾರ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ತಾಲೂಕಿನ ಕಣೇಗೌಡನಹಳ್ಳಿ ನಿವಾಸಿ ಮಲ್ಲಪ್ಪ(40) ಮೃತ. ಮೂಲತಃ ಯಾದಗಿರಿ ತಾಲೂಕಿನ ಬೆಳ್ಳಗೆರೆ ನಿವಾಸಿಯಾಗಿದ್ದ ಮಲ್ಲಪ್ಪ 10 ವರ್ಷಗಳ ಹಿಂದೆ ತಾಲೂಕಿನ ಕಣೇಗೌಡನಹಳ್ಳಿ ಬಳಿ ಹಾಲೋಬ್ರಿಕ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದರು. ಬುಧವಾರ ಸಂಜೆ 7 ಗಂಟೆ ಸುಮಾರಿನಲ್ಲಿ ಕೆಲಸದ ನಿಮಿತ್ತ ನೆಲಮಂಗಲಕ್ಕೆ ತೆರಳಿ ವಾಪಾಸ್ ಮನೆಗೆ ತೆರಳುತ್ತಿದ್ದಾಗ ಮಾರ್ಗಮಧ್ಯೆ ರೇಣುಕಾನಗರ ಸಮೀಪ ದೊಡ್ಡಬಳ್ಳಾಪುರ ಕಡೆಯಿಂದ ಬಂದ ಟಾಟಾಏಸ್ ಡಿಕ್ಕಿಯಾಗಿದೆ, ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
  ಕಾರು ಗುದ್ದಿದ ರಭಸಕ್ಕೆ ಜೀವಬಿಟ್ಟ ಇಬ್ಬರು: ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು- ಜಿಂತಾಮಣಿ ಹೆದ್ದಾರಿಯಲ್ಲಿ ಬುಧವಾರ ರಾತ್ರಿ ಕಾರು ಹಾಗೂ ಎರಡು ಬೈಕ್‌ಗಳ ನಡುವೆ ಅಪಘಾತ ಸಂಭವಿಸಿ ಇಬ್ಬರು ಕೊನೆಯುಸಿರೆಳೆದಿದ್ದಾರೆ. ಕಣ್ಣೂರಹಳ್ಳಿ ನಿವಾಸಿ ಜಗದೀಶ್ (28) ಸ್ಥಳದಲ್ಲೇ ಮೃತಪಟ್ಟಿದ್ದು, ಮೊಹಮ್ಮದ್ ಪೈಜ್ (18) ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ. ಮತ್ತೊಂದು ಬೈಕ್‌ನಲ್ಲಿ ಸಂಚರಿಸುತಿದ್ದ ಅಬ್ಬಾಸ್ ಪಾಷಾ, ಮೊಹಮದ್ ಅಬ್ಬಾಸ್ ಹಾಗೂ ಮೊಹಮದ್ ಸನಿ ಅನ್ಸಾರಿ ಸಂಚರಿಸುತ್ತಿದ್ದರು. ಮೂವರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು, ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಪ್ರಗತೀಶ್ ರಾವ್ ದೊಡ್ಡಹುಲ್ಲೂರು ನಿವಾಸಿಯಾಗಿದ್ದು, ಪೊಲಿಸರು ಆತನನ್ನು ಬಂಧಿಸಿ, ಕಾರು ವಶಕ್ಕೆ ಪಡೆದುಕೊಂಡಿದ್ದಾರೆ.

  See also  ದೇವನಹಳ್ಳಿ ತಹಸೀಲ್ದಾರ್‌ಗೆ ಲೋಕಾ ಶಾಕ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts