ಪ್ರತಿಯೊಬ್ಬರೂ ಬದುಕನ್ನು ಪ್ರೀತಿಸಿ

ಮುಂಡರಗಿ: ದೇವರು ನಿರ್ವಿುಸಿರುವ ಜಗತ್ತಿನಲ್ಲಿ ಮನುಷ್ಯ ತನ್ನ ಬದುಕನ್ನು ಸುಂದರವಾಗಿಟ್ಟುಕೊಳ್ಳಬೇಕು. ಬದುಕನ್ನು ಪ್ರೀತಿಸಿ, ಗೌರವಿಸಬೇಕು. ಸದಾ ಸದ್ವಿಚಾರ, ಚಿಂತನೆ ಅತ್ಯಗತ್ಯ ಎಂದು ಕೊಪ್ಪಳ ಗವಿಮಠದ ಶ್ರೀಗವಿಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಸ್ನೇಹಜೀವಿ ಗ್ರಾಮೀಣಾಭಿವೃದ್ಧಿ ವಿವಿಧೋದ್ದೇಶ ಸಂಸ್ಥೆ ವತಿಯಿಂದ ಭಾನುವಾರ ಏರ್ಪಡಿಸಿದ್ದ ಧರ್ಮ ಜಾಗೃತಿ ಹಾಗೂ ಜಾನಪದ ಸಾಂಸ್ಕೃತಿಕ ಕಾರ್ಯ ಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು. ‘ಎಲ್ಲರಿಗೂ ತಮ್ಮ ಬದುಕಿನ ಬೆಲೆ ಗೊತ್ತಾಗಬೇಕು. ಬೆಲೆ ಗೊತ್ತಾದವನಿಗೆ ಮಾತ್ರ ಬದುಕನ್ನು ಉತ್ತಮವಾಗಿಟ್ಟುಕೊಳ್ಳಲು ಸಾಧ್ಯ. ಬಡತನ, ಸಿರಿತನ ಎನ್ನುವುದನ್ನು ಮರೆತು, ದೇವರು ಕೊಟ್ಟಿರುವ ಜೀವನವನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಮಾದರಿಯಾಗಿ ಜೀವಿಸುವುದೇ ನಿಜವಾದ ಜೀವನ. ಬರೀ ಗಳಿಸುವುದಷ್ಟೇ ಜೀವನವಲ್ಲ. ಜೀವನವನ್ನು ಸಂಪತ್ತಿನಿಂದ ನಿರ್ವಿುಸಲಾಗುವುದಿಲ್ಲ, ಸದ್ಬಿಚಾರಗಳಿಂದ ನಿರ್ವಿುಸಲು ಸಾಧ್ಯ’ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಮಾಜಿ ಸಚಿವ ಎಸ್.ಎಸ್. ಪಾಟೀಲ, ಬ್ರಹ್ಮಕುಮಾರಿ ಈಶ್ವರಿ ವಿದ್ಯಾಲಯ ತಾಲೂಕು ಸಂಚಾಲಕಿ ಬಿ.ಕೆ. ಜಯಕ್ಕ ಮಾತನಾಡಿದರು. ಪ್ರಗತಿಪರ ರೈತ ಪಿ.ಎಸ್.ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಬೀಡನಾಳ ಗ್ರಾ.ಪಂ. ಅಧ್ಯಕ್ಷೆ ಹುಲಿಗೆವ್ವ ಕಟಗಿ, ಎಸ್.ವಿ. ಪಾಟೀಲ, ಕವಿತಾ ಸಂಜೀವಪ್ಪನವರ, ಚಿದಾನಂದಪ್ಪ ಲಿಂಗಶೆಟ್ಟರ, ದೇವಪ್ಪ ಕುಕನೂರ, ಬಾಲಪ್ಪ ರ್ಯಾವಣಕಿ, ಸಿದ್ದನಗೌಡ ಪಾಟೀಲ, ಮೈಲಾರಪ್ಪ ಶೀರನಹಳ್ಳಿ, ಎಂ.ಎಲ್. ಹೊಸಳ್ಳಿ, ಎನ್.ಎ. ಗೌಡರ, ಸೋಮನಗೌಡ ಪಾಟೀಲ, ಮುತ್ತಣ್ಣ ಹಳ್ಳಿಕೇರಿ, ಸೋಮು ಹಕ್ಕಂಡಿ, ಬಸವರಾಜ ಲಿಂಗಶೆಟ್ಟರ, ಸತೀಶ ಹಂಚಿನಾಳ, ಮಹಾಂತೇಶ ಮೂಗಿನ, ಶಂಕರ ಬಾದಿ, ಯುವರಾಜ ಲಿಂಗಶೆಟ್ಟರ, ಇದ್ದರು. ಶಿಕ್ಷಕ ಜಿ.ಎಂ. ಲಿಂಗಶೆಟ್ಟರ ಸ್ವಾಗತಿಸಿದರು. ವಕೀಲ ಓಂಪ್ರಕಾಶ ಲಿಂಗಶೆಟ್ಟರ ನಿರೂಪಿಸಿದರು. ಪ್ರಭುಗೌಡ ಪಾಟೀಲ ವಂದಿಸಿದರು.