ಪ್ರತಿಭೆ ಬೆಳಗಿಸುವ ಉತ್ಸವವಾಗಲಿ

17kls2 kannada

ಕಳಸ: ಕನ್ನಡ ರಾಜ್ಯೋತ್ಸವ ನುಡಿ ನಿತ್ಯೋತ್ಸವ ಕಾರ್ಯಕ್ರಮಗಳು ಕೇವಲ ವೇದಿಕೆ ಕಾರ್ಯಕ್ರಮವಾಗದೆ ತೆರೆಮರೆಯಲ್ಲಿರುವ ಬರಹಗಾರರನ್ನು ಮತ್ತು ಪ್ರತಿಭೆಗಳನ್ನು ಪರಿಚಯಿಸುವ ಕೆಲಸಗಳು ನಡೆಯಬೇಕು ಎಂದು ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಂ ಹೇಳಿದರು.
ಕಳಸ ಕನ್ನಡ ಸಾಹಿತ್ಯ ಪರಿಷತ್ ಮಹಿಳಾ ಘಟಕದಿಂದ ಏರ್ಪಡಿಸಿದ್ದ ನುಡಿ ನಿತ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಳಸ ಮಹಿಳಾ ಘಟಕದಿಂದ ಮಹಿಳೆಯರಿಗೆ ಪ್ರಬಂಧ, ಆಶುಭಾಷಣ ಸ್ಪರ್ಧೆ ನಡೆಸುವ ಮೂಲಕ ಮಹಿಳೆಯರ ಪ್ರತಿಭೆ ಪರಿಚಯಿಸಲಾಗುತ್ತಿದೆ ಎಂದರು.
ಕಳಸ ತಾಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ, ಕಳಸದಲ್ಲಿ ಪುರುಷರಿಗಿಂತ ಮಹಿಳಾ ಸಾಹಿತ್ಯಾಸಕ್ತರು ಹೆಚ್ಚಾಗುತ್ತಿರುವುದು ಉತ್ತಮ ಬೆಳವಣಿಗೆ. ಮುಂದಿನ ದಿನಗಳಲ್ಲಿ ಕಳಸದಲ್ಲಿ ಹೋಬಳಿ ಮತ್ತು ತಾಲೂಕು ಸಮ್ಮೇಳನ ನಡೆಸುವ ಚಿಂತನೆ ಮಾಡಲಾಗುತ್ತಿದೆ ಎಂದು ಹೇಳಿದರು.
ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆಯನ್ನು ಡಾ. ಜಾನಕಿ ಸುಂದರೇಶ್ ನಡೆಸಿ ಬಹುಮಾನ ನೀಡಿದರು. ಸಾಹಿತಿ ಗೀತಾ, ಮಕ್ಕಿಮನೆ, ಗ್ರಾಪಂ ಅಧ್ಯಕ್ಷೆ ಉಷಾ ವಿಶ್ವನಾಥ್, ಪ್ರೇಮ್‌ಕುಮಾರ್, ಚಂಪಕಾ ರಾಘವೇಂದ್ರ, ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಅಜಿತ್ ಪ್ರಸಾದ್, ಪೂರ್ಣಚಂದ್ರ, ಫಾತಿಮಾ ರೆಹಮಾನ್, ಕಲ್ಪನಾ ಅಜಿತ್, ಲೀಲಾ ಶ್ರೀಕಾಂತ್, ರೂಪಾ ಪಿಂಟೋ, ಮೋಳಿ ಜೇಮ್ಸ್, ಪ್ರೇಮಾ ರಾಜು, ವೀಣಾ ಮುರುಗೇಶ್ ಇತರರಿದ್ದರು.

Share This Article

ಕೆಂಪು ಬಾಳೆಹಣ್ಣಿನ ಸೇವನೆಯಿಂದಾಗುವ ಅದ್ಭುತ ಪ್ರಯೋಜಗಳಿವು; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಕೆಂಪು ಬಾಳೆಹಣ್ಣು ಒಂದು ವಿಶಿಷ್ಟ ಮತ್ತು ಪೌಷ್ಟಿಕ ಹಣ್ಣು. ಇದು ಸಾಮಾನ್ಯ ಹಳದಿ ಬಾಳೆಹಣ್ಣಿಗಿಂತ ಹೆಚ್ಚು…

ಊಟ & ನಿದ್ರೆಯ ನಡುವಿನ ಅಂತರ ಎಷ್ಟಿರಬೇಕು?; ಇಲ್ಲಿದೆ ICMR ನೀಡಿರುವ ಸೂಚನೆ | Health Tips

ನಮ್ಮ ದಿನಚರಿಯ ಪ್ರಮುಖ ಭಾಗವೆಂದರೆ ಆಹಾರ ಸೇವಿಸುವುದು ಮತ್ತು ಸಾಕಷ್ಟು ನಿದ್ರೆ ಮಾಡುವುದು. ಆದರೆ ಜನರು…

ಬೇಸಿಗೆಯಲ್ಲಿ ಹಾಲಿನ ಚಹಾ ಕುಡಿಯುವುದು ಆರೋಗ್ಯಕ್ಕೆ ಹಾನಿಕಾರಕ! ಈ ಚಹಾ ಟ್ರೈ ಮಾಡಿ.. Summer Morning Drinks

Summer Morning Drinks: ಬೇಸಿಗೆಯಾಗಿರಲಿ ಅಥವಾ ಚಳಿಗಾಲವಾಗಿರಲಿ, ಕೆಲವರು ಬೆಳಿಗ್ಗೆ ಎದ್ದ ತಕ್ಷಣ ಚಹಾ ಕುಡಿಯಲು ಇಷ್ಟಪಡುತ್ತಾರೆ. …