ಪ್ರತಿಭೆಗೆ ತಕ್ಕೆ ಪ್ರೋತ್ಸಾಹ ಅಗತ್ಯ

ಹೊಳೆಆಲೂರ: ಗ್ರಾಮೀಣ ಭಾಗದಲ್ಲಿ ಅದ್ಭುತ ಪ್ರತಿಭೆಗಳು ಸುಪ್ತವಾಗಿ ಅಡಗಿದ್ದು, ಪಾಲಕರು ಹಾಗೂ ಶಿಕ್ಷಕರು ಅವರನ್ನು ಶೋಧಿಸಿ ತಕ್ಕ ಪೋ›ತ್ಸಾಹ ನೀಡಿದರೆ ಅವರು ರಾಷ್ಟ್ರದ ಅಮೂಲ್ಯ ಆಸ್ತಿಯಾಗಲು ಸಂದೇಹವಿಲ್ಲ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಮಹೇಶ ಕುರಿ ಹೇಳಿದರು.

ಸಮೀಪದ ಹೊಳೆಹಡಗಲಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗುರುವಾರ ಜರುಗಿದ ಅಮರಗೋಳ ಗ್ರಾಪಂ ಮಟ್ಟದ ಕ್ರೀಡಾಕೂಟದಲ್ಲಿ ಅವರು ಮಾತನಾಡಿದರು.

‘ಶಿಕ್ಷಣ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕಾದರೆ ಸಾರ್ವಜನಿಕರಿಂದ ತಕ್ಕ ಪ್ರೋತ್ಸಾಹ ಅಗತ್ಯ. ಮಕ್ಕಳು ಸದೃಢ ಶರೀರ ಹೂಂದಿದರೆ ಮಾನಸಿಕ, ಬೌದ್ಧಿಕ ವಿಕಸನವಾಗುತ್ತದೆ’ ಎಂದರು.

ಕ್ರೀಡಾ ಜ್ಯೋತಿ ಸ್ವೀಕರಸಿದ ತಾಪಂ ಸದಸ್ಯ ರಾಮನಗೌಡ ಪಾಟೀಲ ಮಾತನಾಡಿ, ‘ಮಕ್ಕಳ ಮನಸ್ಸು ಅನುಕರಣೀಯವಾಗಿರುತ್ತದೆ. ಶಿಕ್ಷಕರ ಕೇವಲ ಬೋಧನೆ ಮಾಡಿದರೆ ಸಾಲದು. ಸ್ವತಃ ಮೌಲ್ಯಗಳನ್ನು ಹೇಳಿ ಕೊಟ್ಟರೆ ಶಿಕ್ಷಣ ಸಾರ್ಥಕ’ ಎಂದು ಹೇಳಿದರು.

ತಾಲೂಕ ಶಿಕ್ಷಕರ ಕಾರ್ಯದರ್ಶಿ ವಿಜಯಲಕ್ಷ್ಮೀ ರುಮ್ಮಿ, ಎಸ್​ಡಿಎಂಸಿ ಅಧ್ಯಕ್ಷ ಎಸ್.ಬಿ. ನಾಗಾವಿ, ಸಿಆರ್​ಪಿ ಬಿ.ಜೆ.ಪಾಟೀಲ, ಹೊಳೆಆಲೂರ ಬಿಜೆಪಿ ಮಂಡಲ ಎಸ್.ಸಿ. ಮೊರ್ಚಾ ಅಧ್ಯಕ್ಷ ಪರಶುರಾಮ ಪೂಜಾರ, ಜಿ.ಜಿ. ತೋಟನಗೌಡ್ರ, ಶಂಕರ ಬಡಿಗೇರ, ಶರಣಪ್ಪ ಹಟ್ಟಿ, ವಿ.ಎಸ್.ಬಾರಕೇರ, ಶೇಕರಗೌಡ ಹೂಸಮನಿ, ಆರ್.ಆರ್.ಮಡಿವಾಳರ, ಪಿ.ಸಿ.ಮೊಕಾಸಿ. ಮುಖ್ಯೋಪಾಧ್ಯಯನಿ ಎಲ್.ಬಿ.ಗುಜಮಾಗಡಿ, ಎಂ.ವೈ.ಪಾಟೀಲ, ಎಂ.ಎಸ್.ನೈನಾಪುರ, ಬಸವರಾಜ ಮೆಣಸಗಿ ಉಪಸ್ಥಿತರಿದ್ದರು.

ವಿಜೇತ ತಂಡಗಳು
ಕಬಡ್ಡಿ: ಬಾಲಕರ ವಿಭಾಗ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಮರಗೋಳ. ಬಾಲಕಿಯರ ವಿಭಾಗ: ಸ.ಹಿ.ಪ್ರಾ. ಶಾಲೆ ಹೊಳೆಹಡಗಲಿ. ಖೋಖೋ: ಬಾಲಕರ ವಿಭಾಗ: ಸ.ಹಿ.ಪ್ರಾ ಶಾಲೆ ಅಮರಗೋಳ. ಬಾಲಕಿಯರ ವಿಭಾಗ: ಬಿ.ಎಸ್. ಬೇಲೇರಿ ಪ್ರಾಥಮಿಕ ಶಾಲೆ. ಥ್ರೋ ಬಾಲ್: ಬಾಲಕರ ವಿಭಾಗ: ಸ.ಹಿ.ಪ್ರಾ ಶಾಲೆ ಅಮರಗೋಳ. ಬಾಲಕಿಯರ ವಿಭಾಗ: ಸ.ಹಿ.ಪ್ರಾ ಶಾಲೆ ಅಮರಗೋಳ. ವಾಲ್ಹಿಬಾಲ್: ಬಾಲಕರ ವಿಭಾಗ: ಸ.ಹಿ.ಪ್ರಾ ಶಾಲೆ ಅಮರಗೋಳ. ಬಾಲಕಿಯರ ವಿಭಾಗ: ಸ.ಹಿ.ಪ್ರಾ ಶಾಲೆ ಹೊಳೆಹಡಗಲಿ. ರಿಲೇ: ಬಾಲಕರ ವಿಭಾಗ: ಸ.ಹಿ.ಪ್ರಾ ಶಾಲೆ ಹೊಳೆಹಡಗಲಿ. ಬಾಲಕಿಯರ ವಿಭಾಗ: ಬಿ.ಎಸ್. ಬೇಲೇರಿ ಪ್ರಾಥಮಿಕ ಶಾಲೆ. 100 ಮೀ. ಓಟ: ಬಾಲಕರ ವಿಭಾಗ: ಬಿ.ಎಸ್. ಬೇಲೇರಿ ಪ್ರಾಥಮಿಕ ಶಾಲೆ. ಬಾಲಕಿಯರ ವಿಭಾಗ: ಸ.ಹಿ.ಪ್ರಾ ಶಾಲೆ ಅಮರಗೋಳ. ಚಕ್ರ ಎಸೆತ: ಬಾಲಕರ ವಿಭಾಗ: ಬಿ.ಎಸ್. ಬೇಲೇರಿ ಪ್ರಾಥಮಿಕ ಶಾಲೆ. ಬಾಲಕಿಯರ ವಿಭಾಗ: ಸ.ಹಿ.ಪ್ರಾ ಶಾಲೆ ಹೊಳೆಹಡಗಲಿ. ಗುಂಡು ಎಸೆತ: ಬಾಲಕರ ವಿಭಾಗ: ಸ.ಹಿ.ಪ್ರಾ ಶಾಲೆ ಅಮರಗೋಳ. ಬಾಲಕಿಯರ ವಿಭಾಗ: ಸ.ಹಿ.ಪ್ರಾ ಶಾಲೆ ಹೊಳೆಹಡಗಲಿ.

Leave a Reply

Your email address will not be published. Required fields are marked *