ಪ್ರತಿಭಾ ಪುರಸ್ಕಾರ ನಾಳೆ

blank

ಕಲಬುರಗಿ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಮಹಾದಾಸೋಹಿ ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರ ಅಭಿನಂದನಾ ಸಮಾರಂಭ ಹಾಗೂ ಮಹಾಸಭಾ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು 5ರಂದು ಹಮ್ಮಿಕೊಳ್ಳಲಾಗಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ಕಲಬುರಗಿ ಜಿಲ್ಲಾ ಘಟಕ ಅಧ್ಯಕ್ಷ ಡಾ. ಶರಣಕುಮಾರ ಮೋದಿ,ಪ್ರಧಾನ ಕಾರ್ಯದರ್ಶಿ  ಡಾ.ಶರಣ ಪಾಟೀಲ್ ಮತ್ತು ಕಾರ್ಯದರ್ಶಿಗಳು ಆಗಿರುವ ಸ್ವಾಗತ ಸಮಿತಿ ಅಧ್ಯಕ್ಷ ಡಾ.ಎಸ್.ಎಸ್.ಪಾಟೀಲ್ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಅಂದು ಬೆಳಗ್ಗೆ 11ಕ್ಕೆ ಶರಣಬಸವೇಶ್ವರ ಸಂಸ್ಥಾನ ಪೀಠಾಧಿಪತಿ ಪೂಜ್ಯ ಡಾ. ಶರಣ ಬಸವಪ್ಪ ಅಪ್ಪ ಅವರ ಸನ್ನಿಧಾನದಲ್ಲಿ ನಡೆಯಲಿದ್ದು, ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾಗಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಉದ್ಘಾಟಿಸುವರು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಸಮಾಜ ಪ್ರತಿಭಾವಂತರಾಗಿರುವ ಮತ್ತು ಶೇ.95ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದ 102 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು. ಪ್ರತಿ ವಿದ್ಯಾರ್ಥಿಗೂ ತಲಾ 2500 ರೂ. ಚೆಕ್ ನೀಡಲಾಗುವುದು. ಶರಣಕುಮಾರ ಮೋದಿ ಅಧ್ಯಕ್ಷತೆ ವಹಿಸುವರು. ಮಹಾದಾಸೋಹ ನೂತನ ಪೀಠಾಧಿಪತಿಗಳಾಗಿ ನಿಯೋಜನೆಗೊಂಡಿರುವ ಪೂಜ್ಯ ಚಿರಂಜೀವಿ ದೊಡ್ಡಪ್ಪ ಅಪ್ಪ ಅವರನ್ನು ಮಹಾಸಭಾ ವತಿಯಿಂದ ಗೌರವಿಸಲಾಗುವುದು.
ಮಹಾಸಭಾ ಉಪಾಧ್ಯಕ್ಷರಾದ ಈರಣ್ಣ ಗುಳೇದ, ಗೌರಿ ಚಿಚಕೋಟಿ,ರಾಜುಗೌಡ ನಾಗನಹಳ್ಳಿ,ಸಿದ್ದು ಪಾಟೀಲ್, ಕೋಶಾಧ್ಯಕ್ಷ ಚನ್ನಪ್ಪ ಡಿಗ್ಗಾಯಿ, ಯುವ ಘಟಕ ಗೌರವಾಧ್ಯಕ್ಷ ಎಂ.ಎಸ್.ಪಾಟೀಲ್ ನರಿಬೋಳ, ಕಾರ್ಯಕಾರಿ ಸಮಿತಿ ಸದಸ್ಯರಾದ ಡಾ.ಸುಧಾ ಹಾಲಕಾಯಿ, ಜಿ.ಕೆ.ಪಾಟೀಲ್ ಹರಸೂರ, ಅಶೋಕ ಪಟ್ಟಣಶೆಟ್ಟಿ, ಶಿವಾನಂದ ಖಜೂರಿ ಇತರರಿದ್ದರು. ಕಲಬುರಗಿ, 
ಮಹಾಸಭಾ ಕೇಂದ್ರ ಸಮಿತಿಯವರು ಈ ಸಲದಿಂದ ಆನ್ಲೈನ್ದಲ್ಲಿ ಅರ್ಜಿಗಳನ್ನು ಆಹ್ವಾನಿಸಿದ್ದರಿಂದ ಹೆಚ್ಚಿನವರಿಗೆ ಮಾಹಿತಿ ಲಭ್ಯವಾಗಿಲ್ಲ. ಶೇ.95ಕ್ಕೂ ಹೆಚ್ಚಿನ ಅಂಕ ಪಡೆದ ವೀರಶೈವ-ಲಿಂಗಾಯತ ಸಮಾಜ ವಿದ್ಯಾರ್ಥಿಗಳು ಶನಿವಾರ ಸಂಜೆಯವರೆಗೂ ಮಹಾಸಭಾಕ್ಕೆ ಮಾಹಿತಿ ನೀಡಿದರೆ ಅವರಿಗೂ ಸಹ ಜಿಲ್ಲಾ ಘಟಕದಿಂದ 2500 ರೂ.ನೀಡಿ ಪ್ರತಿಭಾ ಪುರಸ್ಕಾರದೊಂದಿಗೆ ಸನ್ಮಾನಿಸಲಾಗುವುದು.
| ಡಾ.ಶರಣಕುಮಾರ ಮೋದಿ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ

Share This Article

ಬೇಸಿಗೆಯಲ್ಲಿ ಬೇಗನೆ ತೂಕ ಇಳಿಸಿಕೊಳ್ಳುವುದು ಹೇಗೆ ಗೊತ್ತಾ?  ಈ ಸುಲಭ ಸಲಹೆಗಳನ್ನು ಅನುಸರಿಸಿ…summer

summer: ತೂಕ ಇಳಿಸಿಕೊಳ್ಳುವುದು ಸುಲಭದ ಕೆಲಸವಲ್ಲ. ಕೆಲವರು ಇದಕ್ಕಾಗಿ ಆಹಾರ ಕ್ರಮದ ಜೊತೆಗೆ ವ್ಯಾಯಾಮ ಮಾಡುತ್ತಾರೆ.…

ಮದ್ವೆಯಾದ ನಂತ್ರ ಮಹಿಳೆಯರು… ಇದುವರೆಗೂ ನಾವಂದುಕೊಂಡಿದ್ದು ತಪ್ಪು, ಹೊಸ ಅಧ್ಯಯನದಲ್ಲಿ ಅಚ್ಚರಿ ಸಂಗತಿ! Marriage

Marriage : ಸಾಮಾನ್ಯವಾಗಿ ಮದುವೆಯ ನಂತರ ಮಹಿಳೆಯರ ತೂಕ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಅವರು ಎಷ್ಟೇ…

ನಿಮ್ಮ ಮಕ್ಕಳನ್ನು ಸ್ಮಾರ್ಟ್‌ಫೋನ್‌ಗಳಿಂದ ದೂರವಿಡುವುದು ಹೇಗೆ? Child Care Tips

Child Care Tips: ನೀವು ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಮೊಬೈಲ್ ಫೋನ್ ಕೊಡಬಾರದು. ನಿಮ್ಮ ಮಗು ನಿಮ್ಮೊಂದಿಗೆ…