More

  ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನೆರವಾಗಿ

  ಚಿತ್ರದುರ್ಗ:ಶಿಕ್ಷಕರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡುವುದರೊಂದಿಗೆ ಅವರಲ್ಲಿ ಸಂಸ್ಕಾರ ಬೆಳೆಸುವಂತೆ ವಾಸವಿ ವಿದ್ಯಾ ಸಂಸ್ಥೆ ಮಾಜಿ ಕಾರ‌್ಯದರ್ಶಿ ರಾಮಲಿಂಗಶೆಟ್ಟಿ ಹೇಳಿದರು. ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ 1993-94ರ ಹಳೆಯ ವಿದ್ಯಾರ್ಥಿಗಳು, ಸಂಸ್ಥೆ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಓದಿದ ಶಾಲೆ ಮರೆಯದೆ ಶಿಕ್ಷಕರನ್ನು ಗೌರವಿಸಿರುವು ದು ಶ್ಲಾಘನೀಯವಾಗಿದೆ. ವಿವಿಧ ಉದ್ಯೋಗದಲ್ಲಿರುವ ತಾವು ಪ್ರತಿಭಾವಂಥ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾಗಬೇಕೆಂದು ಹಳೆಯ ವಿ ದ್ಯಾರ್ಥಿಗಳಿಗೆ ಸಲಹೆ ನೀಡಿದರು.
  ಶಿಕ್ಷಕಿರಾದ ವಿಜಯಾಮಧುಕರ್, ಮಾಯಾವತಿ, ಕುಮುದಾ, ಶೋಭಾ, ಹೇಮಾ, ಶೈಲಜಾ, ವಿಮಲಾ, ಸರಸ್ವತಿ, ಲೀಲಾವತಿ ಮತ್ತಿತರರನ್ನು ಗೌ ರವಿಸಲಾಯಿತು. ಹಳೆಯ ವಿದ್ಯಾರ್ಥಿಗಳಾದ ಸುಭಾಷ್, ನರೇಂದ್ರ ಸುರೇಶ್, ಹರ್ಷ, ಉಮೇಶ್, ಅಂಬುಜಾ, ಯೋಗಿತಾ, ಮಂಜುಳಾ, ಶಿಲ್ಪಾ, ರೂಪಾ ಇತರರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts