20.8 C
Bangalore
Sunday, December 8, 2019

ಪ್ರಜಾಪ್ರೀತಿಯಿಂದಲೇ ಅರಸನಿಗೆ ಯಶಸ್ಸು

Latest News

ಪತಿಯನ್ನು ಕೊಲೆ ಮಾಡಿ ಶವ ಸುಟ್ಟು ಹಾಕಿದ್ದ ಪತ್ನಿಯ ಸೆರೆ

ಕೆಜಿಎಫ್: ಅಕ್ರಮ ಸಂಬಂಧದ ಹಿನ್ನೆಲೆಯಲ್ಲಿ ಪತಿಯನ್ನೇ ಕೊಲೆ ಮಾಡಿ ಶವ ಸುಟ್ಟು ಹಾಕಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದ್ದು, ಕೊಲೆಗೈದ ಪತ್ನಿ ಮತ್ತು ಪ್ರಿಯಕರನನ್ನು ಉರಿಗಾಂ...

ಅರಣ್ಯ ಸರ್ವೆಗೆ ಡ್ರೋನ್: ರಾಜ್ಯದಲ್ಲೇ ಮೊದಲ ಬಾರಿಗೆ ಹೊಸನಗರದಲ್ಲಿ ಪ್ರಾಯೋಗಿಕವಾಗಿ ಜಾರಿ

ರಾಜ್ಯದಲ್ಲಿ ಮೊದಲ ಬಾರಿಗೆ ಅರಣ್ಯ ಪ್ರದೇಶ ಗುರುತಿಸಲು ಪ್ರಾಯೋಗಿಕವಾಗಿ ಹೊಸನಗರ ತಾಲೂಕಿನಲ್ಲಿ ಅರಣ್ಯ ಇಲಾಖೆ ಡ್ರೋನ್ (ಏರಿಯಲ್) ಸರ್ವೆ ನಡೆಸಿದ್ದು, ಯಶಸ್ವಿಯಾದರೆ ಇಲಾಖೆಯ...

ಭಗವದ್ಗೀತೆ ಅಭಿಯಾನದ ಮಹಾಸಮರ್ಪಣೆ

ಚಿತ್ರದುರ್ಗ: ಸಾಮಾಜಿಕ ಸಾಮರಸ್ಯ,ರಾಷ್ಟ್ರೀಯ ಏಕತೆಗೆ ತಿಂಗಳಿಗೂ ಹೆಚ್ಚು ಕಾಲ ಜಿಲ್ಲಾದ್ಯಂತ ನಡೆದ ಭಗವದ್ಗೀತೆ ಅಭಿಯಾನದ ರಾಜ್ಯಮಟ್ಟದ ಮಹಾ ಸಮರ್ಪಣೆಗೆ ಶನಿವಾರ ಚಿತ್ರದುರ್ಗದ ಹಳೇ...

ಭಗವದ್ಗೀತೆ ಪಠಣದಿಂದ ಅಜ್ಞಾನ ದೂರ

ಚಿಕ್ಕಬಳ್ಳಾಪುರ: ಚಿಕ್ಕ ವಯಸ್ಸಿನಿಂದಲೇ ಮಕ್ಕಳನ್ನು ಒಳ್ಳೆಯ ವಾತಾವರಣದಲ್ಲಿ ಬೆಳೆಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ ಎಂದು ಮಹಾತ್ಮಗಾಂಧಿ ಸೇವಾಟ್ರಸ್ಟ್ ಸಂಸ್ಥಾಪಕ ಶ್ರೀ ವಿನಯ್ ಗುರೂಜಿ ಅಭಿಪ್ರಾಯಪಟ್ಟರು. ತಾಲೂಕಿನ...

ನಾಯಿಂದ್ರಹಳ್ಳಿ ವಿವಾದಿತ ರಸ್ತೆ ಸರ್ವೇ

ಚಿಂತಾಮಣಿ: ತಾಲೂಕಿನ ಪೆರಮಾಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಯಿಂದ್ರಹಳ್ಳಿ ರಸ್ತೆ ವಿವಾದ ರಾಜಕೀಯ ತಿರುವು ಪಡೆದುಕೊಂಡ ಹಿನ್ನೆಲೆಯಲ್ಲಿ ಶನಿವಾರ ಅಧಿಕಾರಿಗಳು ಸರ್ವೇ ನಂ.2 ವ್ಯಾಪ್ತಿಯ 5.04...

ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮರು ಧರ್ಮಜನಿಗೆ ಹೇಳುತ್ತಿದ್ದ ರಾಜಧರ್ಮದ ಮಾತುಗಳು ಹೀಗೆ ಮುಂದುವರಿದವು: ‘ಯುಧಿಷ್ಠಿರ! ರಾಜನೀತಿ ಎಂಬುದು ಆರು ಬಗೆಯ ಗುಣಾವಲಂಬನೆಯಿಂದ ಕೂಡಿರುತ್ತದೆ. 1). ಸಂಧಿ – ತನ್ನ ಯಾವುದೇ ಶತ್ರುವು ತನಗಿಂತ ಬಲವಂತನು ಎಂದು ಕಂಡುಬಂದರೆ ಅಂಥವರೊಂದಿಗೆ ತಂತ್ರದಿಂದ ಸ್ನೇಹವನ್ನು ಸಾಧಿಸಿ ಯುಕ್ತವಾದ ಒಪ್ಪಂದ ಮಾಡಿಕೊಳ್ಳುವುದು. 2). ವಿಗ್ರಹ – ಶತ್ರು ತನ್ನ ಸಮಾನ ಬಲವುಳ್ಳವನಾಗಿದ್ದರೆ ಶೂರತ್ವವನ್ನು ಮೆರೆಸಿ ಯುದ್ಧಗೈಯ್ಯುವುದು. 3). ಯಾನ – ಶತ್ರು ದುರ್ಬಲನಾಗಿರುವ ಸಂದರ್ಭವನ್ನು ತಿಳಿದುಕೊಂಡು ಆಕ್ರಮಣಗೈದು ತನ್ನ ವಶವರ್ತಿಯನ್ನಾಗಿ ಮಾಡಿಕೊಳ್ಳುವುದು. 4). ಆಸನ – ಶತ್ರುವೇ ಆಕ್ರಮಣಗೈದಾಗ ಅವನೇ ಅಧಿಕ ಬಲವುಳ್ಳವನೆಂದು ತೋರಿದರೆ ಆಗ ತನ್ನ ಕೋಟೆಯನ್ನು ಭದ್ರಗೊಳಿಸಿಕೊಂಡು ರಾಜನು ತತ್ಕಾಲ ಕಣ್ಣು ತಪ್ಪಿಸಿ ಅಡಗಿ ಆತ್ಮರಕ್ಷಣೆ ಮಾಡಿಕೊಳ್ಳುವುದು. 5). ದ್ವೈಧೀಭಾವ – ಆಕ್ರಮಣಗೈದ ಶತ್ರುವಿನ ಬಲವು ಮಧ್ಯಮಭಾವದಲ್ಲಿ ತೋರಿಬಂದರೆ ಆಗ ವಿವಿಧ ತಂತ್ರೋಪಾಯ, ಕುಟಿಲ ನೀತಿಗಳಿಂದ ಅವನನ್ನು ಮಣಿಸುವುದು. 6). ಸಮಾಶ್ರಯ – ಯುದ್ಧ ನಡೆಯುತ್ತಿರುವಾಗ ಪೀಡಿತನಾಗುತ್ತಿರುವ ಸಂದರ್ಭ ಎದುರಾದರೆ ಮಿತ್ರರಾಜನ ಸಹಾಯವನ್ನು ಪಡೆದು ಶತ್ರುವನ್ನು ಹಣಿಯುವುದು – ಹೀಗೆ ರಾಜನು ಆರು ವಿಧಾನಗಳಿಂದ ರಾಜ್ಯವನ್ನು ರಕ್ಷಿಸಿಕೊಂಡು ಬುದ್ಧಿಬಲದಿಂದ ವರ್ತಿಸಬೇಕಾಗಿರುವುದು ಆಡಳಿತದ ಚಾತುರ್ಯವಾಗಿದೆ. ಶತ್ರುಪಕ್ಷದಲ್ಲಿಯೇ ಒಡಕು, ಭಿನ್ನಾಭಿಪ್ರಾಯಗಳನ್ನು ತನ್ನ ಗುಪ್ತಚರರ ಮೂಲಕ ಗುರುತಿಸಿಕೊಳ್ಳಬೇಕು. ಚತುರತೆಯಿಂದ ಅವರೆಡೆ ಭೇದೋಪಾಯಗೈದು ಶತ್ರುಪಕ್ಷದಲ್ಲಿನ ಒಡಕನ್ನು ವೃದ್ಧಿಸುವುದು ರಾಜನ ಪ್ರಶಂಸನೀಯ ತಂತ್ರ ಎನಿಸುತ್ತದೆ. ಇದರಲ್ಲಿ ಗೌಪ್ಯವನ್ನು ಕಾಯ್ದುಕೊಳ್ಳುವುದು ಅತ್ಯಂತ ಮುಖ್ಯ.

ಎಲ್ಲ ರಾಜರುಗಳಿಗೂ ಅತ್ಯಂತ ಉಚಿತವಾದ ಕಾರ್ಯವೆಂದರೆ – ರಾಜಸ್ವದ ಕೊರತೆ ಉಂಟಾಗದಂತೆ ಧನಕೋಶವನ್ನು (ಅರ್ಥಸಂಗ್ರಹ) ಸದಾ ತುಂಬಿಸಿಟ್ಟುಕೊಳ್ಳುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರಬೇಕು. ತನ್ನ ನ್ಯಾಯನಿರ್ಣಯ ಕಾರ್ಯದಲ್ಲಿ ರಾಜನು ಯಮಧರ್ಮರಾಜನಂತೆಯೂ, ಧನಸಂಗ್ರಹದ ಅರ್ಥಸಾಮರ್ಥ್ಯದಲ್ಲಿ ಕುಬೇರನಂತೆಯೂ ಇರಬೇಕು.

ತನ್ನ ಸ್ಥಾನದ ಘನತೆಯನ್ನು ಕಾಯ್ದುಕೊಳ್ಳುವುದು ಮತ್ತು ಅದರ ವೃದ್ಧಿಯ ಸಂಬಂಧವಾಗಿ – ರಾಷ್ಟ್ರ, ಮಂತ್ರಿಗಳು, ಕೋಟೆ, ಕೋಶ ಮತ್ತು ರಾಜದಂಡ – ಈ ಐದು ವಿಷಯಗಳು ತನ್ನ ಬಳಿಗೆ ವೃದ್ಧಿಯನ್ನೂ, ಶತ್ರುಗಳತ್ತ ಕ್ಷಯವನ್ನೂ ಕಾಣುವಂತೆ ಉಪಾಯ ಅನುಸರಿಸುವ ಚತುರತೆ ರಾಜನಿಗೆ ಇರುವುದು ಅಗತ್ಯ. ಯಾವುದೋ ಪ್ರಕೋಪದಿಂದಾಗಲೀ, ಕಾರಣಾಂತರದಿಂದಾಗಲೀ ಪ್ರಜಾಜನರಲ್ಲಿ ವಸತಿಗೃಹಕ್ಕಾಗಿ ಅಥವಾ ನಿತ್ಯ ಜೀವನದ ಪೋಷಣೆಯ ವಿಷಯಕ್ಕಾಗಲಿ ಅಭಾವ ಅನನುಕೂಲ ಉಂಟಾಗುವುದು ತೋರಿಬಂದ ಸಂದರ್ಭದಲ್ಲಿ ರಾಜನು ತನ್ನ ರಾಜಧನಸಂಗ್ರಹಕೋಶದಿಂದ ವ್ಯಯಿಸಿ ಅನುಕೂಲ ಮಾಡಿಕೊಡಬೇಕಾದುದು ಮಹತ್ವದ್ದಾಗಿದೆ. ಯಾರಿಗೇ ಆಗಲಿ ಯಾವ ಕಾರಣಕ್ಕೇ ಆಗಲಿ ರಾಜಧನವನ್ನು ವ್ಯಯಿಸುವ ವಿಷಯದಲ್ಲಿ – ಅದರತ್ತ ರಾಜನೇ ಸ್ವಯಂ ಲಕ್ಷಿಸುತ್ತಿರಬೇಕು. ರಾಜನು ತನ್ನ ರಾಜ್ಯದಲ್ಲಿಯ ವೃದ್ಧರಿಗೆ, ಅಶಕ್ತರಿಗೆ ಸರಿಯಾದ ಮಾನ, ಗೌರವ, ವಿಶೇಷ ರೀತಿಯ ಪೋಷಣೆ ನೀಡಬೇಕಾದುದು ಧರ್ಮವಾಗಿದೆ. ಆಡಳಿತದ ವಿಷಯದಲ್ಲಾಗಲಿ, ಶತ್ರುಗಳ ವಿಷಯದಲ್ಲೇ ಆಗಲಿ ರಾಜನು ಆಲಸ್ಯ-ಅಲಕ್ಷ್ಯ ವಹಿಸದೆ ಸದಾ ಜಾಗೃತನಾಗಿರಬೇಕು. ಲೋಲುಪತೆಯನ್ನು ಪರಿತ್ಯಾಗ ಗೈದಿರಬೇಕು. ವರ್ತನೆಯಲ್ಲಿ ಸದಾ ಪ್ರಿಯಂವದನೂ, ಸಂತೃಪ್ತ ಸ್ವಭಾವದವನೂ ಆಗಿರಬೇಕು. ರಾಜನು ಸಾಧು, ಸಜ್ಜನ, ಜ್ಞಾನಿಗಳಿಂದ ಧನವನ್ನು ಪಡೆದುಕೊಳ್ಳಬಾರದು. ಆದರೆ ಅಂಥವರು ಕೂಡ ದುರ್ವರ್ತನೆ ತೋರಿ, ಕಪಟಿಗಳಾಗಿ ರಾಜಾದೇಶವನ್ನು ಧಿಕ್ಕರಿಸುವವರೇ ಆಗಿದ್ದಲ್ಲಿ – ಅವರು ಸಾಧುಪುರುಷರೇ ಆಗಿ ತೋರುತ್ತಿದ್ದರೂ ಅವರಿಂದ ದಂಡರೂಪದಲ್ಲಿ ಧನ ಸಂಗ್ರಹಿಸುವುದು ಅಧರ್ಮವಲ್ಲ.’

(ಲೇಖಕರು ಹಿರಿಯ ಪತ್ರಕರ್ತರು, ಸಾಹಿತಿ)

(ನಾಳೆ, ಯೋಗವಾಸಿಷ್ಠ ಗ್ರಂಥವನ್ನು ಕುರಿತಾದ ಸ್ವರ್ಣವಲ್ಲೀ ಸ್ವಾಮೀಜಿಯವರ ಅಂಕಣ ‘ಯೋಗವಾಸಿಷ್ಠ’)

Stay connected

278,744FansLike
581FollowersFollow
621,000SubscribersSubscribe

ವಿಡಿಯೋ ನ್ಯೂಸ್

VIDEO| ವಿಚಾರಣೆಗೆಂದು ನ್ಯಾಯಾಲಯಕ್ಕೆ ಕರೆತಂದಿದ್ದ ಅತ್ಯಾಚಾರ ಆರೋಪಿಯ ಮೇಲೆ ಮುಗಿಬಿದ್ದ...

ಇಂದೋರ್​: ಅಪ್ರಾಪ್ತೆ ಮೇಲಿನ ಅತ್ಯಾಚಾರ ಪ್ರಕರಣದ ಆರೋಪಿ ಮೇಲೆ ನ್ಯಾಯಾಲಯದ ಆವರಣದಲ್ಲೇ ವಕೀಲರ ಗುಂಪು ಹಲ್ಲೆ ನಡೆಸಲು ಯತ್ನಿಸಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ಶನಿವಾರ ನಡೆದಿದೆ. ಘಟನೆಗೆ ಸಂಬಂಧಿಸಿದ ವಿಡಿಯೋ ಸಾಮಾಜಿಕ...

ಸಶಸ್ತ್ರ ಪಡೆಗಳ ಧ್ವಜ ದಿನ; ಭೂ, ವಾಯು, ನೌಕಾ ಪಡೆಗಳ...

ನವದೆಹಲಿ: ಸಶಸ್ತ್ರ ಪಡೆಗಳ ಧ್ವಜ ದಿನವಾದ ಇಂದು ಪ್ರಧಾನಿ ನರೇಂದ್ರ ಮೋದಿಯವರು ಭೂ, ವಾಯು ಹಾಗೂ ನೌಕಾಪಡೆಗಳ ಸಿಬ್ಬಂದಿಗೆ ಶುಭಾಶಯ ತಿಳಿಸಿದರು. ಟ್ವೀಟ್​ ಮೂಲಕ ಶುಭ ಹಾರೈಸಿದ ಅವರು, ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ...

ಇಂದಿನ ಬಿಗ್​ಬಾಸ್ ಕನ್ನಡ ​ಶೋನಲ್ಲಿ ಕಿಚ್ಚ ಸುದೀಪ್​ ಜತೆ ಇರಲಿದ್ದಾರೆ...

ಬೆಂಗಳೂರು: ಇಂದು ಬಿಗ್​ಬಾಸ್​ನ ವಾರದ ಕತೆ ಕಿಚ್ಚ ಸುದೀಪ್​ ಜತೆ ಎಪಿಸೋಡ್​ನಲ್ಲಿ ಬಾಲಿವುಡ್​ ನಟ ಸಲ್ಮಾನ್​ ಖಾನ್​ ಕೂಡ ಜತೆಯಾಗಲಿದ್ದಾರೆ !ಇದು ಕಿರುತೆರೆ ಇತಿಹಾಸದಲ್ಲಿಯೇ ಪ್ರಥಮ ಎನ್ನಲಾಗಿದ್ದು ಸದ್ಯ ಕಲರ್ಸ್​ ಕನ್ನಡ ಬಿಡುಗಡೆ...

VIDEO| ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯ ಜೀವ ಉಳಿಸಿದ ಯೋಧ:...

ಥಾಣೆ: ರೈಲ್ವೆ ರಕ್ಷಣಾ ಪಡೆಯ ಯೋಧರೊಬ್ಬರು ಎಕ್ಸ್​ಪ್ರೆಸ್​ ರೈಲಿಗೆ ಸಿಲುಕುತ್ತಿದ್ದ ವ್ಯಕ್ತಿಯೊಬ್ಬನನ್ನು ರಕ್ಷಣೆ ಮಾಡುವ ಮೂಲಕ ಸಮಯಪ್ರಜ್ಞೆ ಮರೆದಿರುವ ಘಟನೆ ಮಹಾರಾಷ್ಟ್ರದ ಥಾಣೆ ರೈಲ್ವೆ ನಿಲ್ದಾಣದಲ್ಲಿ ಬುಧವಾರ ನಡೆದಿದ್ದು, ಇದಕ್ಕೆ...

VIDEO| ನನ್ನನ್ನು ಯಾರೂ ಮುಟ್ಟಲಾರರು; ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಹೇಳಿಕೆ

ನವದೆಹಲಿ: "ನನ್ನನ್ನು ಯಾರೂ ಮುಟ್ಟಲಾರರು, ನಿಮಗೊಂದು ಸತ್ಯ ಹೇಳುತ್ತೇನೆ. ನಾನೂ ಪರಮ ಶಿವ, ಅರ್ಥವಾಯ್ತ...?" ಎಂದು ಅತ್ಯಾಚಾರದ ಆರೋಪಿ ನಿತ್ಯಾನಂದ ವಿಡಿಯೋಂದರಲ್ಲಿ ಹೇಳಿದ್ದಾನೆ. ಯಾವ ಕೋರ್ಟ್​ ಕೂಡ ನನ್ನ ಬಗ್ಗೆ ತೀರ್ಪು ನೀಡಲಾರದು. ಯಾರೂ...

VIDEO| ಮದುವೆ ಸಮಾರಂಭದಲ್ಲಿ ಡ್ಯಾನ್ಸ್​ ನಿಲ್ಲಿಸುತ್ತಿದ್ದಂತೆ ಯುವತಿ ಮೇಲೆ ಫೈರಿಂಗ್​:...

ಲಖನೌ: ಮದುವೆ ಸಂಭ್ರಮದಲ್ಲಿ ಡ್ಯಾನ್ಸ್​ ಮಾಡುವುದನ್ನು ನಿಲ್ಲಿಸುತ್ತಿದ್ದಂತೆ ನೃತ್ಯಗಾರ್ತಿಯ ಮುಖಕ್ಕೆ ಫೈರಿಂಗ್​ ಮಾಡಿರುವ ಘಟನೆ ಉತ್ತರ ಪ್ರದೇಶದ ಚಿತ್ರಕೂಟದಲ್ಲಿ ಕಳೆದ ವಾರ ನಡೆದಿರುವುದಾಗಿ ವರದಿಯಾಗಿದೆ. ಘಟನೆಯಲ್ಲಿ ಗಾಯಗೊಂಡ ಯುವತಿಯನ್ನು ಕಾನ್ಪುರ ಆಸ್ಪತ್ರೆಗೆ...