ಪ್ರಚಾರ ಮಾಡದ ಕಾಂಗ್ರೆಸ್ ಮುಖಂಡರು

ಕೆ.ಆರ್.ಸಾಗರ : ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರ ತಾಲೂಕಿನ ಯಾವೊಬ್ಬ ಕಾಂಗ್ರೆಸ್ ಮುಖಂಡನೂ ಪ್ರಚಾರ ಮಾಡುತ್ತಿಲ್ಲ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಕೃಷ್ಣ ಕನ್ವೆನ್ಷನಲ್ ಹಾಲ್‌ನಲ್ಲಿ ಬುಧವಾರ ಸಂಜೆ ಆಯೋಜಿಸಿದ್ದ ಬೆಳಗೊಳ ಹೋಬಳಿ ಜೆಡಿಎಸ್ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದಿನ ಶಾಸಕರು ತಮ್ಮ ವೈಯಕ್ತಿಕ ಲಾಭ-ನಷ್ಟಕ್ಕಾಗಿ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ. ಆದರೆ ಆ ಪಕ್ಷಕ್ಕೂ ನಿಯತ್ತಿನಿಂದರದೆ ಮೈತ್ರಿ ಅಭ್ಯರ್ಥಿಯನ್ನು ವಿರೋಧಿಸುತ್ತಿರುವುದು ಜನರಿಗೆ ಕಾಣಿಸುತ್ತಿದೆ. ತಾಲೂಕಿನ ಜನರೇ ಅವರಿಗೆ ಉತ್ತರ ನೀಡುತ್ತಾರೆ ಎಂದು ಪರೋಕ್ಷವಾಗಿ ರಮೇಶ್ ಬಂಡಿಸಿದ್ದೇಗೌಡ ಅವರಿಗೆ ತಿರುಗೇಟು ನೀಡಿದರು.

ಜಿಲ್ಲೆಗೆ ಅಂಬರೀಷ್ ಹೆಚ್ಚಿನ ಕೊಡುಗೆ ನೀಡಿಲ್ಲ. ಅವರು ಕೆಲವು ಜನರಿಗಷ್ಟೇ ಸೀಮಿತವಾಗಿದ್ದರು. ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಅವರನ್ನು ಈ ವಿಷಯಕ್ಕಾಗಿ ವಿರೋಧಿಸಿದ್ದೆ. ಅವರು ನಟನಾಗಿ ಜನರ ಪ್ರೀತಿಪಾತ್ರರಾಗಿದ್ದರೆ ವಿನಹ ರಾಜಕೀಯವಾಗಲ್ಲ. ಈಗ ಅನುಕಂಪ ಜನರ ಮೇಲೆ ಯಾವುದೇ ಪ್ರಭಾವ ಬೀರಿಲ್ಲ. ಜಿಲ್ಲೆಯ ಜನತೆ ಬುದ್ಧಿವಂತರಾಗಿದ್ದಾರೆ ಎಂದರು.

ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮಾತನಾಡಿ, ನನಗೆ ರಾಜಕೀಯ ಅನುಭವವಿಲ್ಲ. ಆದರೆ ನಿಷ್ಠೆ ಹಾಗೂ ನಂಬಿಕೆಯಿಂದ ಜನರ ಕೆಲಸ ಮಾಡುತ್ತೇನೆ ಎಂದರು.

ಮೈಸೂರು ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಪೈಲ್ವಾನ್ ಮುಕಂದ, ಜಿಪಂ ಸದಸ್ಯೆ ಸವಿತಾ ಲೋಕೇಶ್, ತಾಪಂ ಅಧ್ಯಕ್ಷೆ ಮಂಜುಳಾ ಬಸವರಾಜು, ಮುಖಂಡ ಸ್ವಾಮಿಗೌಡ