ಪ್ರಕೃತಿ ಚಿಕಿತ್ಸೆಗಾಗಿ ಎಂಆರ್​ಆರ್ ಆಸ್ಪತ್ರೆ

ಬೆಂಗಳೂರು: ಮಾನಸಿಕ, ದೈಹಿಕ ಸೇರಿ ನಾನಾ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆಲ್ಲ ಪ್ರಕೃತಿ ಚಿಕಿತ್ಸೆಯಲ್ಲಿ ಪರಿಹಾರವಿದೆ. ಅಂತೆಯೇ ಸುಸಜ್ಜಿತ ಸೌಲಭ್ಯಗಳೊಂದಿಗೆ ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಕಾರ್ಯಾಚರಿಸುತ್ತಿದೆ.

ಬೆಂಗಳೂರು-ಹಾಸನ ರಾಷ್ಟ್ರೀಯ ಹೆದ್ದಾರಿ ನಡುವೆ ಬರುವ ಸೋಲೂರು ಗ್ರಾಮದ ಬಳಿ 20 ಎಕರೆ ಜಾಗದಲ್ಲಿ 200 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ 2 ವರ್ಷಗಳ ಹಿಂದೆ ನಿರ್ವಣವಾಗಿದ್ದು, ಲಕ್ಷಾಂತರ ಜನರು ಚಿಕಿತ್ಸೆ ಪಡೆದು ಸಂಪೂರ್ಣ ಗುಣಮುಖರಾಗಿದ್ದಾರೆ. ಹೀಗಾಗಿಯೇ ಕಡಿಮೆ ಅವಧಿಯಲ್ಲಿಯೇ ಈ ಆಸ್ಪತ್ರೆಯು ಯೋಗ ಮತ್ತು ಪ್ರಕೃತಿ ಚಿಕಿತ್ಸೆಗೆ ಅತ್ಯಂತ ಜನಪ್ರಿಯತೆ ಪಡೆದಿದೆ ಎಂಬುದು ಆಸ್ಪತ್ರೆಯವರು ನಿಡುವ ವಿವರಣೆ.

ದೇಶದಲ್ಲಿ ಆಂದಾಜು ಶೇ.52 ಮಂದಿ ವೈದ್ಯರ ಸಲಹೆ ಪಡೆಯದೆ ಔಷಧಿಗಳನ್ನು ಸೇವಿಸುತ್ತಿದ್ದು, ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಆನೇಕ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಅಲ್ಲದೆ, ಸೂಕ್ತ ಚಿಕಿತ್ಸೆ ಸಿಗದೆ ಪ್ರಾಣ ಬಿಡುತ್ತಿರುವ ರೋಗಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಅದನ್ನು ತಪ್ಪಿಸಿ ಜನರಿಗೆ ಸೂಕ್ತ ಚಿಕಿತ್ಸೆ ದೊರೆಯಬೇಕೆಂಬ ನಿಟ್ಟಿನಲ್ಲಿ ಎಂಆರ್​ಆರ್ ಸಮೂಹ ಸಂಸ್ಥೆಯು ಎಂಆರ್​ಆರ್ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯನ್ನು 2016ರಲ್ಲಿ ಆರಂಭಿಸಿದೆ. ಆಧುನಿಕ ಸಲಕರಣೆ ಮೂಲಕ ಬೊಜ್ಜು, ಮಧುಮೇಹ, ರಕ್ತದೊತ್ತಡ, ಗಂಟಲು ನೋವು, ಅಜೀರ್ಣ, ಮಲಬದ್ಧತೆ, ಮಾನಸಿಕ ಖಿನ್ನತೆ ಇನ್ನಿತರ ಕಾಯಿಲೆಗಳಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಲಭ್ಯವಿರುವ ಚಿಕಿತ್ಸೆಗಳು

ಔಷಧರಹಿತ ಮಸಾಜ್, ಮಣ್ಣಿನ, ಅರಿಶಿನ ಸ್ನಾನ, ಕೋಲಾನ್ ಹೈಡ್ರೋಥೆರಪಿ, ಆಹಾರ, ಉಪವಾಸ, ಜಲ ಚಿಕಿತ್ಸೆ, ಫಿಸಿಯೋಥೆರಪಿ, ಅಕ್ಯುಪಂಕ್ಚರ್, ಸ್ಟೀಂ, ಸೋನಾ ಬಾತ್, ಸೇರಿ ಇನ್ನಿತರ ಚಿಕಿತ್ಸೆಗಳನ್ನು ತಜ್ಞ ವೈದ್ಯರು ನೀಡಲಿದ್ದಾರೆ.

ಏನೇನು ಸೌಲಭ್ಯ ಇದೆ?

ಇಲ್ಲಿಗೆ ಚಿಕಿತ್ಸೆ ಪಡೆಯಲು ಬರುವ ಜನರಿಗೆ ಪ್ರತ್ಯೇಕ ವಸತಿ ಸೌಲಭ್ಯ ಇದೆ. ಸಾಮಾನ್ಯ, ವಿಶೇಷ ಕೊಠಡಿ ಮತ್ತು ಕಾಟೇಜ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ಆಸ್ಪತ್ರೆಯಲ್ಲಿ ಸುಸಜ್ಜಿತ ಪ್ರಯೋಗಾಲಯ, ವಾಕಿಂಗ್ ಟ್ರಾ್ಯಕ್, ಒಳಾಂಗಣ ಆಟ, ಜಿಮ್ ಈಜುಕೊಳ, ಆಂಫಿ ಥಿಯೇಟರ್ ಸೇರಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಎಲ್ಲ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಆರೋಗ್ಯ ಶಿಕ್ಷಣ ಕೇಂದ್ರ

ರೋಗದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡುವ ಮೂಲಕ ಆರೋಗ್ಯ ಶಿಕ್ಷಣ ಕೇಂದ್ರವಾಗಿ ಈ ಆಸ್ಪತ್ರೆ ಕೆಲಸ ಮಾಡುತ್ತಿದೆ. ಪ್ರತಿನಿತ್ಯ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆವರೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಧುನಿಕ ಜೀವನ ಶೈಲಿಯಿಂದಾಗಿ ಬರುವ ರೋಗಗಳಿಗೆ ಮಾತ್ರೆರಹಿತ ಚಿಕಿತ್ಸೆ ಪಡೆಯಬಹುದು.

ಆರೋಗ್ಯಕ್ಕೆ ಪಂಚ ಸೂತ್ರಗಳು

  • ಪ್ರತಿನಿತ್ಯ ಹೆಚ್ಚು ನೀರು ಕುಡಿಯಿರಿ  ದಿನಕ್ಕೆ 2 ಹೊತ್ತು ಊಟ ಮಾಡಿ
  • ನಿತ್ಯವೂ ಬೆಳಗ್ಗೆ 1 ಗಂಟೆ ವ್ಯಾಯಾಮ ಮಾಡಿ  ವಾರಕ್ಕೊಮ್ಮೆ ಉಪವಾಸ ಇರಿ ಮಾಂಸಾಹಾರ ತ್ಯಜಿಸಿ

ವಿವಿಧ ಕಾಯಿಲೆಗಳಿಗೆ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಪದ್ಧತಿ ರಾಮಬಾಣ. ಬಡ, ಮಧ್ಯಮ ವರ್ಗದ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

| ಡಾ. ಆರ್. ಚೇತನ್​ಕುಮಾರ್

ವೈದ್ಯಕೀಯ ನಿರ್ದೇಶಕ ಮತ್ತು ಸಿಇಒ

ಮಾಹಿತಿಗೆ ಸಂಪರ್ಕ: ಎಂ.ಆರ್.ಆರ್ ಪ್ರಕೃತಿ ಚಿಕಿತ್ಸಾ ಆಸ್ಪತ್ರೆ, ಸೋಲೂರು, ಮಾಗಡಿ ತಾಲೂಕು, ರಾಮನಗರ ಜಿಲ್ಲೆ- 562127. ದೂ: 080-22682900 ಮೊ: 9972639888.