ಪ್ಯಾರಾ ಮೋಟರಿಂಗ್ ಮತದಾನ ಜಾಗೃತಿ

ಕಲಬುರಗಿ: ಸ್ವೀಪ್ ಸಮಿತಿಯಿಂದ ಪ್ಯಾರಾ ಮೋಟರಿಂಗ್ ಮೂಲಕ ನಗರದ ಬಾನಂಗಳದಲ್ಲಿ ಹಾರಾಡಿ ಏಪ್ರಿಲ್ 23ರಂದು ನಡೆಯುವ ಲೋಕಸಭಾ ಚುನಾವಣೆ ಮತದಾನದಂದು ಕಡ್ಡಾಯ ಮತದಾನದ ಮಾಡುವಂತೆ ವಿನೂತನ ಜಾಗೃತಿ ಮೂಡಿಸಲಾಯಿತು.

ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಸುಬೋಧ ಯಾಧವ ಸ್ವತ: ಪ್ಯಾರಾ ಮೋಟರಿಂಗ್ ಕೈಗೊಳ್ಳುವ ಮೂಲಕ ನಗರದ ಎನ್.ವಿ. ಮೈದಾನದಲ್ಲಿ ಮಂಗಳವಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ಯಾರಾ ಮೋಟರಿಂಗ್ ಮೂಲಕ ನಗರದ ಬಾನಂಗಳದಲ್ಲಿ ಹಾರಾಡಿ ಪ್ರಮುಖ ವೃತ್ತ ಮತ್ತು ಸ್ಥಳಗಳಲ್ಲಿ ಬಾನಿನಿಂದಲೇ ಕರಪತ್ರಗಳನ್ನು ಹಾರಿ ಬಿಟ್ಟು ಮತದಾರರಲ್ಲಿ ಮತದಾನದ ಜಾಗೃತಿ ಮೂಡಿಸಲಾಯಿತು. ಜೇವಗರ್ಿ, ಸೇಡಂ, ವಾಡಿ, ಚಿತ್ತಾಪುರಗಳಲ್ಲಿಯೂ ಪ್ಯಾರಾ ಮೋಟರಿಂಗ್ ಮೂಲಕ ಜಾಗೃತಿ ಮೂಡಿಸಲಾಗುವುದು. ಪಟ್ಟಣ ಪ್ರದೇಶದ ಪ್ರಮುಖ ವೃತ್ತಗಳಲ್ಲಿ ಪ್ಯಾರಾ ಮೋಟರಿಂಗ್ ಬಾನಿನಲ್ಲಿ ಅತೀ ಹತ್ತಿರದಿಂದ ಸಂಚರಿಸಿದಾಗ ಎಲ್ಲರೂ ಆಕರ್ಷಿತರಾದರು.

ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ, ಸ್ವೀಪ್ ಸಮಿತಿ ಅಧ್ಯಕ್ಷ ಡಾ. ಪಿ. ರಾಜಾ, ಮಹಾನಗರ ಪಾಲಿಕೆ ಆಯುಕ್ತ ಬಿ. ಫೌಜಿಯಾ ತರನ್ನುಮ್, ಕಲಬುರಗಿ ಸಹಾಯಕ ಆಯುಕ್ತ ರಾಹುಲ್ ತುಕಾರಾಂ ಪಾಂಡ್ವೆ, ಐ.ಎ.ಎಸ್. ಪ್ರೊಬೇಷನರಿ ಅಧಿಕಾರಿ ಸ್ನೇಹಲ್ ಸುಧಾಕರ ಲೋಖಂಡೆ ಅವರೂ ಪ್ಯಾರಾ ಮೋಟರಿಂಗ್ ಮೂಲಕ ಕಲಬುರಗಿ ನಗರದ ಬಾನಿನಲ್ಲಿ ಸುತ್ತಾಡಿ ಕರಪತ್ರಗಳನ್ನು ಗಾಳಿಯಲ್ಲಿ ತೇಲಿ ಬಿಡುವ ಮೂಲಕ ಮತದಾನದ ಜಾಗೃತಿ ಮೂಡಿಸಿದರು.