ಹುಣಸಗಿ (ಗ್ರಾಮೀಣ): ಪಟ್ಟಣದ ಸ್ವಚ್ಛತೆ ಜವಾಬ್ದಾರಿ ಹೊತ್ತಿರುವ ಪೌರ ಕಾರ್ಮಿಕರ ಸೇವೆ ನಿಜಕ್ಕೂ ಅವಿಸ್ಮರಣೀಯವಾಗಿದೆ ಎಂದು ಪಟ್ಟಣ ಪಂಚಾಯಿತಿ ಸದಸ್ಯೆ ನಿಖಿತಾ ಗೂಳಪ್ಪ ಅಂಗಡಿ ಹೇಳಿದರು.
ಪಟ್ಟಣದ ವಾರ್ಡ್ ನಂ.೧೩ರಲ್ಲಿ ಹಮ್ಮಿಕೊಂಡ ಗಣೇಶೋತ್ಸವದಲ್ಲಿ ಪೌರ ಕಾರ್ಮಿಕರಿಗೆ ಸನ್ಮಾನಿಸಿ ಮಾತನಾಡಿದ ಅವರು, ನಮ್ಮೂರು ಸುಂದರವಾಗಿ ಕಾಣಬೇಕಾದರೆ ಪೌರ ಕಾರ್ಮಿಕ ಶ್ರಮ ಹೆಚ್ಚಿದೆ. ತಮ್ಮ ಕುಟುಂಬ ನಿರ್ವಹಣೆ ಜತೆಗೆ ಪಟ್ಟಣದ ಸ್ವಚ್ಛತೆಗೆ ಶ್ರಮ ವಹಿಸುವ ಅವರಿಗೆ ಪ್ರತಿಯೊಬ್ಬರೂ ಗೌರವಿಸುವ ಕೆಲಸವಾಗಬೇಕು ಅಂದಾಗ ಮಾತ್ರ ನಾವು ಅವರಿಗೆ ನೀಡುವ ದೊಡ್ಡ ಉಡುಗರೆಯಾಗಿರುತ್ತದೆ ಎಂದು ಹೇಳಿದರು.
ಶಿಕ್ಷಕಿ ಅಕ್ಕಮಹಾದೇವಿ ದೇಶಮುಖ ಮಾತನಾಡಿ, ನಾವು ನಮ್ಮ ಮನೆಯನ್ನು ಸ್ವಚ್ಛ ಮಾಡುವುದೇ ದೊಡ್ಡ ಕೆಲಸ ಎಂದು ಭಾವಿಸಿರುತ್ತೇವೆ.
ತಹದರಲ್ಲಿ ಪೌರ ಕಾರ್ಮಿಕರು ಇಡೀ ಪಟ್ಟಣ ನಮ್ಮ ಮನೆ ಎಂದು ಭಾವಿಸಿ ನಮ್ಮ ಪಟ್ಟಣವನ್ನು ಸ್ವಚ್ಛ ಮಾಡುವ ಅವರ ಸೇವೆಗೆ ಬೆಲೆ ಕಟ್ಟಲಾಗದು ಎಂದರು.
ನAತರ ಕೆಲ ಪೌರ ಕಾರ್ಮಿಕರು ತಮ್ಮ ಅನಿಸಿಕೆ ಹಂಚಿಕೊAಡು, ನಮ್ಮನ್ನು ಗೌರವಿಸಿರುವುದು ನಿಜಕ್ಕೂ ಸಂತಸ ತಂದಿದೆ. ಪಟ್ಟಣದಲ್ಲಿ ಇನ್ನೂ ಹೆಚ್ಚಿನ ಕೆಲಸ ಮಾಡಲು ಪ್ರಚೋದಿಸಿದಂತಾಗಿದೆ ಎಂದು ಹೇಳಿದರು.
ಪ್ರಮುಖರಾದ ಗುಂಡು ಅಂಗಡಿ, ಭಾಗ್ಯ ದೇಶಪಾಂಡೆ, ಮಲ್ಲಮ್ಮ ದ್ಯಾಪೂರ, ಶಾರದಾ ಕುಪ್ಪಿ, ಪದ್ಮಾವತಿ ದೇಶಪಾಂಡೆ, ಕಲ್ಪನಾ ದೇಶಪಾಂಡೆ, ಉಮೇಶ ಕುಪ್ಪಿ, ಶರತ್ ಪಾಟೀಲ್, ವಿನಾಯಕ ಹೂಗಾರ, ಸಂತೋಷ ದೊಡ್ಡಮನಿ, ವೀರೇಶ ಮದ್ದಾನಿಮಠ ಸೇರಿದಂತೆ ಅನೇಕರು ಇದ್ದರು. ಅಕ್ಕಮಹಾದೇವಿ ದೇಶಮುಖ ನಿರೂಪಿಸಿ ವಂದಿಸಿದರು.