More

  ಪೌರತ್ವ ಕಾಯ್ದೆ ಬೆಂಬಲಿಸಿ ವೈದ್ಯರ ರ್ಯಾಲಿ

  ಕಲಬುರಗಿ: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ ವೈದ್ಯರು, ದಂತ ವೈದ್ಯರು ಹಾಗೂ ವೈದ್ಯಕೀಯ ವಿದ್ಯಾರ್ಥಿಗಳು ನಗರದಲ್ಲಿ ಶನಿವಾರ ಬೃಹತ್ ರ್ಯಾಲಿ ನಡೆಸುವ ಮೂಲಕ ಸಂಸತ್ತಿನ ಉಭಯ ಸದನಗಳ ಒಪ್ಪಿಗೆ ಬಳಿಕ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಹಿಂದೇಟು ಹಾಕದೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
  ನ್ಯಾಷನಲ್ ಮೆಡಿಕಾಸ್ ಆರ್ಗನೈಜೇಷನ್ ನೇತೃತ್ವದಲ್ಲಿ ಆರೋಗ್ಯ ಭಾರತಿ, ಮೆಡಿಕಲ್-ಡೆಂಟಲ್ ವಿದ್ಯಾರ್ಥಿಗಳ ಸಂಘ, ಆಯುಷ್ ವೈದ್ಯರ ಒಕ್ಕೂಟ, ಫಾರ್ಮಸಿ, ನರ್ಸಿಂಗ್ ವಿಭಾಗಗಳ ಬೆಂಬಲದೊಂದಿಗೆ ವೈದ್ಯರು, ವಿದ್ಯಾರ್ಥಿಗಳು ಸರ್ದಾರ  ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಜಮಾಯಿಸಿ ಕೇಂದ್ರ ಸರ್ಕಾರ  ಜಾರಿಗೊಳಿಸಲು ಹೊರಟಿರುವ ಸಿಎಎ ಮಾದರಿ ಕಾಯ್ದೆಯಾಗಿದೆ. ದೇಶದ ಹಿತರಕ್ಷಣೆಗಾಗಿ ರೂಪಿಸಿದ್ದಾರೆ ಎಂದು ಪರಸ್ಪರ ಗುಲಾಲ್ ಎರಚಿ ಸಂಭ್ರಮಿಸಿದರು. ಸಿಎಎ ಪರ ಘೋಷಣೆಗಳನ್ನೂ ಹಾಕಿದರು. ನಂತರ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿದರು.
  ನೇತೃತ್ವ ವಹಿಸಿದ್ದ ನ್ಯಾಷನಲ್ ಮೆಡಿಕಾಸ್ ಆರ್ಗನೈಜೇಷನ್ ಉತ್ತರ ಕರ್ನಾಟಕ ಸಂಘಟನಾ ಕಾರ್ಯದರ್ಶಿ  ಡಾ.ಕುಮಾರ್ ಅಂಗಡಿ, ಸಂಸದ ಡಾ.ಉಮೇಶ ಜಾಧವ್, ಶಾಸಕ ಡಾ.ಅವಿನಾಶ ಜಾಧವ್, ಯುವ ನಾಯಕರಾದ ಡಾ.ಕೈಲಾಸ ಬಿ.ಜಿ.ಪಾಟೀಲ್, ಡಾ.ಅಲೋಕ ಪಾಟೀಲ್ ರೇವೂರ, ಹಿರಿಯ ವೈದ್ಯರಾದ ಡಾ.ಸರ್ವೋತ್ತಮರಾವ್, ಡಾ.ಮಂಜುನಾಥ ದೊಶೆಟ್ಟಿ, ಡಾ.ಅಲ್ಲಮಪ್ರಭು ಗುಡ್ಡಾ, ಡಾ.ಸುರೇಶ ಪಾಟೀಲ್, ಐಎಂಎ ಕಾರ್ಯದರ್ಶಿ  ಡಾ.ಸಂಜನಾ ತೆಲ್ಲೂರ ಮಾತನಾಡಿ, ಇದೊಂದು ಮಾದರಿ ಕಾಯ್ದೆ. ಜಾರಿಯಿಂದ ದೇಶಕ್ಕೆ ಒಳಿತಾಗಲಿರುವುದನ್ನು ಗಮನಿಸಿಯೇ ವೈದ್ಯ ಸಮೂಹ ಬೆಂಬಲಿಸುತ್ತಿದೆ ಎಂದರು.
  ಸಿಎಎ ವಿರೋಧಿಸಿ ಮೆಡಿಕಲ್ ಫೆಟರ್ನಿಟಿ ಆಫ್ ಕಲಬುರಗಿ ಹೆಸರಿನಲ್ಲಿ ಪ್ರತಿಭಟನೆ ನಡೆಸಿದ್ದು ಸರಿಯಲ್ಲ. ತಮಗೂ ಇದಕ್ಕೂ ಸಂಬಂಧವಿಲ್ಲ. ಅಲ್ಲದೆ ಆ ಹೆಸರಿನ ಸಂಘಟನೆ ನೋಂದಣಿಯೇ ಆಗಿಲ್ಲ. ಕ್ರಮಕ್ಕಾಗಿ ಐಎಎಂಗೆ ತಿಳಿಸಲಾಗಿದೆ ಎಂದು ಡಾ.ಕುಮಾರ್ ಅಂಗಡಿ ಮತ್ತು ಡಾ.ಸಂಜನಾ ಹೇಳಿದರು.
  ಜಿಲ್ಲಾಧಿಕಾರಿಗಳ ಮೂಲಕ ಪ್ರಧಾನಿ ಹಾಗೂ ರಾಷ್ಟ್ರಪತಿಗಳಿಗೆ ಮನವಿಪತ್ರ ಸಲ್ಲಿಸಿ ಕಾಯ್ದೆಗೆ ಬೆಂಬಲಿಸುತ್ತಿದ್ದೇವೆ. ಜಾರಿಗೊಳಿಸಿ ಎಂದು ವೈದ್ಯರು ಕೋರಿದರು. 

  ಪಾಲ್ಗೊಂಡ ವೈದ್ಯ ಸಮೂಹ
  ಡಾ.ಸುರೇಶ ಪಾಟೀಲ್, ಡಾ.ಆರ್.ಆರ್. ಶಹಾ, ಡಾ.ಅರವಿಂದ ಮೋಳ್ದಿ, ಡಾ.ನಳಿನಿ ನಮೋಶಿ, ಡಾ.ಪ್ರತಿಮಾ ಕಾಮರಡ್ಡಿ, ಡಾ.ಸುಧಾ ಹಾಲಕಾಯಿ, ಡಾ.ಉಮಾ ಆಂದೋಲಾ, ಡಾ.ಮೇಘಾ ಶಿವಕುಮಾರ, ಡಾ.ರಾಜಶ್ರೀ ರಡ್ಡಿ, ಡಾ.ಮಂಗಲಾ ಹರವಾಳ, ಡಾ.ಸಂಜು ಉಮೇಶ್ಚಂದ್ರ, ಡಾ.ಶರಣು ಪಾಟೀಲ್, ಡಾ.ಅಶೋಕ ಪಾಟೀಲ್, ಡಾ.ಅನುರೂಪ ಶಹಾ, ಡಾ.ಎಸ್.ಎಸ್.ಪಾಟೀಲ್, ಡಾ.ರಾಹುಲ್ ಮಂದನಕನಳ್ಳಿ, ಡಾ.ಮಿಲಿಂದ ಕುಲಕರ್ಣಿ, ಡಾ.ಶಿವಾನಂದ ಮೇಳಕುಂದಿ, ಡಾ.ವಿಶ್ವನಾಥ ರಡ್ಡಿ, ಡಾ.ಎಸ್.ಎನ್.ಪಾಟೀಲ್, ಡಾ.ಚೇತನ ದುರ್ಗಿ , ಡಾ.ರಾಜಕುಮಾರ ಪಾಟೀಲ್, ಡಾ.ಸಂಗಮೇಶ, ಡಾ.ಮಹಾದೇವಪ್ಪ ರಾಂಪುರೆ, ಡಾ.ಪ್ರಶಾಂತ ಇ.ಡಿ., ಡಾ.ಬಿ.ಸಿ. ಪಾಟೀಲ್, ಡಾ.ಎಸ್.ಎಸ್. ಸಿದ್ದಾಪುರಕರ್, ಡಾ.ವೆಂಕಟರಡ್ಡಿ, ಡಾ.ವಿವೇಕ ಪಾಟೀಲ್, ಡಾ.ಸಂತೋಷ ಶೇಗೆದಾರ, ಡಾ.ವೀರೇಶ ಪಾಟೀಲ್, ಡಾ.ವಿನೋದ ವಾಲಿ, ವಿನೋದ ಬಿ.ಸಿ.ಪಾಟೀಲ್, ಡಾ.ಪ್ರಶಾಂತ ಕಮಲಾಪುರಕರ್, ಡಾ.ನಿಶಾಂತ ಕಣ್ಣೂರ, ಡಾ.ಸಿದ್ದೇಶ್ವರ, ಡಾ.ರಾಜೇಶ ರಡ್ಡಿ, ಡಾ.ಗಿರಿರಾಜ ಬೊಮ್ಮ, ಬಿಜೆಪಿ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ದಿವ್ಯಾ ಹಾಗರಗಿ, ಸಾಮಾಜಿಕ ಕಾರ್ಯಕರ್ತರಾದ ಉಮೇಶ ಶೆಟ್ಟಿ, ಗುರು, ಮಾಲಾ ಎಸ್., ಪ್ರಲ್ಹಾದ ಭಟ್ ಪೂಜಾರಿ ಇತರರು ಪಾಲ್ಗೊಂಡಿದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts