ಪೌರಕಾರ್ವಿುಕರ ಕಾರ್ಯಕ್ಕೆ ಮೆಚ್ಚುಗೆ

ಮಂಜುನಾಥ ಎಸ್.ಸಿ. ಹೊಸಕೋಟೆ

ಹೊಸಕೋಟೆಯ ಶ್ರೀ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ ಹಾಗೂ ದ್ರೌಪದಿ ದೇವಿ ಕರಗ ಮಹೋತ್ಸವ ಸಂದರ್ಭದಲ್ಲಿ ಸ್ವಚ್ಛತೆ ಕಾಪಾಡಲು ನಗರಸಭೆ ಕೈಗೊಂಡ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಬಾರಿ ಮೆಚ್ಚುಗೆ ವ್ಯಕ್ತವಾಗಿದ್ದು, ಸಾಮಾಜಿಕ ತಾಣಗಳಲ್ಲಿ ಪ್ರಶಂಸೆ ಸುರಿಮಳೆಯೇ ಹರಿದುಬರುತ್ತಿದೆ.

ಜಾತ್ರೆ ಸಂದರ್ಭದಲ್ಲಿ ಸುಂದರವಾಗಿ ಸಿಂಗಾರಗೊಂಡಿದ್ದ ನಗರ, ರಸ್ತೆಗಳಲ್ಲಿ ದೀಪಾಲಂಕಾರ, ಅದ್ದೂರಿ ರಥ, ಜನಸಾಗರ ಇವೆಲ್ಲವೂ ರಥೋತ್ಸವದ ಸಂಭ್ರಮ ಹೆಚ್ಚಿಸಿತ್ತು. ನಗರದ ಸ್ವಚ್ಛತೆ ಬಗ್ಗೆ ನಗರಸಭೆ ಅಧಿಕಾರಿಗಳ ಮುನ್ನೆಚ್ಚರಿಕೆ ಹಾಗೂ ಸ್ವಚ್ಛತೆ ಬಗ್ಗೆ ದೂರದೃಷ್ಟಿ ಎಲ್ಲರ ಗಮನ ಸೆಳೆದಿದ್ದು, ಎಲೆಮರೆ ಕಾಯಿಯಂತೆ ಸ್ವಚ್ಛತಾ ಕೆಲಸದಲ್ಲಿ ಭಾಗಿಯಾಗಿದ್ದ ಪೌರಕಾರ್ವಿುಕರ ಪರಿಶ್ರಮ ಮೆಚ್ಚುಗೆಗೆ ಪಾತ್ರವಾಗಿದೆ.

ಪ್ರತಿ ಬಾರಿ ಜಾತ್ರೆ ನಡೆದ ಮರುದಿನ ಸ್ವಚ್ಛತಾ ಕಾರ್ಯಗಳಲ್ಲಿ ಮಗ್ನರಾಗುತ್ತಿದ್ದ ಪೌರಕಾರ್ವಿುಕರು ಈ ಬಾರಿ ಜಾತ್ರೆ ದಿನದಂದೇ ನಗರ ಮಲೀನಗೊಳ್ಳದಂತೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು.

ಶ್ರೀ ಅವಿಮುಕ್ತೇಶ್ವರಸ್ವಾಮಿ ರಥೋತ್ಸವ ಸಂದರ್ಭದಲ್ಲಿ ಭಕ್ತರು ರಥಕ್ಕೆ ಬಾಳೆ ಹಣ್ಣು ತೂರುವುದು ವಾಡಿಕೆ. ಈ ಸಂದರ್ಭದಲ್ಲಿ ರಸ್ತೆಗಳಲ್ಲಿ ರಾಶಿಗಟ್ಟಲೆ ಬಾಳೆ ಹಣ್ಣು ಬಿದ್ದು, ಸಂಚಾರಕ್ಕೆ ತೊಂದರೆಯಾಗುತ್ತಿತ್ತು. ಆದರೆ ನಗರಸಭೆ ಪೌರ ಕಾರ್ವಿುಕರು ಈ ಬಾರಿ ರಥದ ಹಿಂಬದಿಯಲ್ಲಿಯೇ ಬಾಳೆ ಹಣ್ಣನ್ನು ಹೆಕ್ಕಿ ಟ್ರಾ್ಯಕ್ಟರ್​ನಲ್ಲಿ ಸಂಗ್ರಹಿಸಿ, ಬೇರೆಡೆ ಸಾಗಿಸಿದ್ದು, ಪ್ರಶಂಸೆಗೆ ಕಾರಣವಾಗಿದೆ.

2018ರ ರಥೋತ್ಸವದ ಸಂದರ್ಭದಲ್ಲಿ ಸ್ವಚ್ಛತೆ ಸಮಸ್ಯೆ ಹಾಗೂ ಸಾರ್ವಜನಿಕರು ಅನುಭವಿಸಿದ ಕಷ್ಟ ನನ್ನ ಕಣ್ಣಾರೆ ಕಂಡಿದ್ದೆ. ಅಂದೇ ಈ ಸಮಸ್ಯೆ ಪರಿಹಾರಕ್ಕೆ ನಿರ್ಧರಿಸಿದ್ದೆ. ಅದರಂತೆ ರಥ ಸಂಚರಿಸುವ ರಸ್ತೆಯಲ್ಲಿ ರಥದ ಹಿಂದೆ ಕಸ ಸಂಗ್ರಹ ಟ್ರಾ್ಯಕ್ಟರ್ ನಿಯೋಜಿಸಿ ಸ್ವಚ್ಛತಾ ಕಾರ್ಯ ನಿರ್ವಹಿಸಲಾಯಿತು. ಪೌರ ಕಾರ್ವಿುಕರು ಈ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದರು.

| ನಿಸಾರ್ ಅಹಮದ್ ನಗರಸಭೆ ಆಯುಕ್ತ, ಹೊಸಕೋಟೆ

ಹೊಸಕೋಟೆ ಜಾತ್ರೆ ಕೇವಲ ಜಾತ್ರೆಯಾಗದೆ ಸ್ವಚ್ಛ ಹೊಸಕೋಟೆ ಜಾತ್ರೆಯಾಗಿದ್ದು, ಕಾಣದ ಕೈಗಳಂತೆ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದ ಪೌರಕಾರ್ವಿುಕರ ಪರಿಶ್ರಮ ಪ್ರತಿಯೊಬ್ಬರೂ ಮೆಚ್ಚುವಂತಹದ್ದು.

| ಪುರುಷೋತ್ತಮ್ ಹೊಸಕೋಟೆ ನಿವಾಸಿ

Leave a Reply

Your email address will not be published. Required fields are marked *